ಸ್ಟೇಟಸ್ ಕತೆಗಳು (ಭಾಗ ೯೪೩)- ಉತ್ತರ ಬೇಕು

ಸ್ಟೇಟಸ್ ಕತೆಗಳು (ಭಾಗ ೯೪೩)- ಉತ್ತರ ಬೇಕು

ಇವರನ್ನು ಏನು ಮಾಡಬೇಕು ನನಗಂತೂ ಉಪಾಯವೇ ಹೊಡೆತ ಇಲ್ಲ ನಿಮಗೆ ಗೊತ್ತಿದ್ರೆ ದಯವಿಟ್ಟು ಒಂದಷ್ಟು ಸಲ ಸೂಚನೆಗಳನ್ನು ನೀಡಿ ಓ ಇವರು ಯಾರು ಅಂತನಾ, ಅವರಿಗಂತೂ ಮರ ಹತ್ತುವುದಕ್ಕೆ ಬರುವುದಿಲ್ಲ, ನೀವು ಮರ ಹತ್ತುವ ಪ್ರಯತ್ನ ಮಾಡ್ತಾ ಇದ್ರೆ ನಿಮ್ಮ ಪಕ್ಕದಲ್ಲಿ ನಿಂತು ಮರ ಹತ್ತುವ ವಿಧಾನವನ್ನು ಹೇಳಿಕೊಡುವುದಕ್ಕೆ ಬಾಯಿ ಮಾತಿನಲ್ಲಿ ಆರಂಭಿಸುತ್ತಾರೆ,  ಬರವಣಿಗೆ ಕೆಲಸಕ್ಕೆ ಇಳಿದಿದ್ದಾಗ ಓದುವ ಹವ್ಯಾಸವೇ ಇಲ್ಲದವರು ಸಾಮಾಜಿಕ ಸಂದೇಶವನ್ನ ರವಾನಿಸ್ತಾರೆ, ಮೆಟ್ಟಿಲೇರಲಾಗದವನು ಬೆಟ್ಟ ಏರುವ ಮಾತನ್ನಾಡ್ತಾನೆ, ಸೊಂಟ ಬಗ್ಗದವ ದೇಹ ದಂಢಿಸುವ ವಿಚಾರ ಬೋಧಿಸ್ತಾನೆ, ಇಂಥವರು ಕಣ್ಣ ಮುಂದೆ ಪ್ರತಿದಿನ ಎದುರಾಗ್ತಾ ಇರುತ್ತಾರೆ. ಅವರನ್ನು ವಿರೋಧಿಸಬೇಕು ಜೋರು ಮಾತಿನಲ್ಲಿ ಗದರಿಸಬೇಕು ಅಂದುಕೊಳ್ಳುತ್ತೇವೆ ಆದರೆ ಸ್ನೇಹ ಯಾಕೆ ಕಳೆದುಕೊಳ್ಳೋದು ಅಂತ ಸುಮ್ನನಾಗ್ತೇವೆ.ಏನು ಮಾಡಬೇಕು ಅಂತ ತಿಳಿತಾ ಇಲ್ಲ. ಅರ್ಥವಾಗುವ ತರ ಎಷ್ಟು ಬಾರಿ ಹೇಳಿದರೂ ಮತ್ತದನ್ನೇ ಮುಂದುವರಿಸುವ ಜಾಯಮಾನ ಅವರದಾಗಿರುವಾಗ ಒಂದಷ್ಟು ತೊಂದರೆಗಳನ್ನು ಅನುಭವಿಸುತ್ತಿದ್ದೇನೆ. ಮಾಡುವ ಕೆಲಸ ಸರಿಯಾಗಿ ಗುರಿ ಮುಟ್ಟುತ್ತಾ ಇಲ್ಲ ಹೀಗಿದ್ದಾಗ ಎಲ್ಲ ಸಮಸ್ಯೆಗಳು ಪರಿಹಾರವಾಗಿ ನೆಮ್ಮದಿಯಾಗಿರಬೇಕು ಅಂತಂದ್ರೆ ನಾನೇನು ಮಾಡಬೇಕು ಅನ್ನೋದನ್ನ ನೀವು ತಿಳಿಸಬೇಕು... ಹೀಗೊಂದು ಕಿರು ಪತ್ರ ನನ್ನ ಬಳಿ ತಲುಪಿತು ಉತ್ತರವೇನು ನೀಡಲಿ?

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ