ಸ್ಟೇಟಸ್ ಕತೆಗಳು (ಭಾಗ ೯೪೬)- ಒಳಗಿನವ

ಸ್ಟೇಟಸ್ ಕತೆಗಳು (ಭಾಗ ೯೪೬)- ಒಳಗಿನವ

ಅವನು ಮಾತು ಕೇಳುತ್ತಿಲ್ಲ, ತುಂಬಾ ಹಠವಾದಿ. ಅಷ್ಟು ಸುಲಭಕ್ಕೆ ಎಲ್ಲವನ್ನು ಒಪ್ಪಿಕೊಳ್ಳುವವನಲ್ಲ. ಕೆಲಸಗಳು ಜವಾಬ್ದಾರಿಗಳು ಹಂಚಿಕೆಯಾದಾಗ ನೂರು ಶೇಕಡ ಮಾಡಿ ಅದರ ಪ್ರತಿಫಲವನ್ನು ಕಣ್ಣ ಮುಂದೆ ನಿಂತು ಅನುಭವಿಸುವವ ಆದರೆ ಇತ್ತೀಚಿಗೆ ಆತನಿಗೆ ನಿರ್ವಹಿಸಿದ ಜವಾಬ್ದಾರಿಗಳಲ್ಲಿ ತೊಡಕು ಉಂಟಾಗಿ ಆತನ ನಿರ್ವಹಣೆ ನೂರು ಶೇಕಡವನ್ನು ತಲುಪಿಲ್ಲ ಹಾಗಾಗಿ ಆತ ಒಪ್ಪಿಕೊಳ್ಳುವುದಕ್ಕೆ ತಯಾರಿಲ್ಲ. ನಿರ್ವಹಿಸಿದ ಕೆಲಸವನ್ನು ಸಮರ್ಪಕ ಮಾಡಿ ತಲೆಯೆತ್ತಿ ಮುನ್ನಡೆಯುವ ವ್ಯಕ್ತಿತ್ವ ಅವನದು. ಆದರೆ ತಪ್ಪಾದಾಗ ಅವುಗಳನ್ನು ಪರಿಹರಿಸುವುದಕ್ಕೆ ಸತತ ಪ್ರಯತ್ನ ಪಟ್ಟರೂ ಸಾಧ್ಯವಾಗದೇ ಹೋಗಿ, ಕೈ ಚೆಲ್ಲಿ ಮೂಕನಾಗಿದ್ದಾನೆ. ಹಾಗಾಗಿ ಒಳಗೆ ಕುಳಿತವನು ಮಾತು ಕೇಳುತ್ತಿಲ್ಲ. ಮಾತು ತಪ್ಪಿದ್ದೇನೆ ಅನ್ನುವ ಚಿಂತೆಯಲ್ಲಿದ್ದಾನೆ. ಅವನನ್ನ ಸಮಾಧಾನ ಮಾಡಿಸುವುದಕ್ಕೆ ಹಲವು ಪ್ರಯತ್ನ ಪಟ್ಟರೂ ಅದು ಸಾಧ್ಯವಾಗುತ್ತಿಲ್ಲ. ಒಳಗೆ ಕುಳಿತವನ ತುಡಿತ ಆತನ ಹುಮ್ಮಸ್ಸು ಎಲ್ಲವೂ ಕೈಜಾರಿದಂತಿದೆ. ಒಳಗಿನವನ ಸಮಾಧಾನಪಡಿಸದೆ ಆತನಿಗೆ ಮುಂದೆ ಹೆಜ್ಜೆ ಇಡುವುದಕ್ಕೆ ಸಾಧ್ಯವಾಗಿಲ್ಲ. ದಯವಿಟ್ಟು ನಿಮ್ಮಲ್ಲಿ ಏನಾದರೂ ಸಲಹೆ ಸೂಚನೆಗಳಿದ್ದರೆ ನೀಡಿ ಒಳಗಿರುವವನನ್ನ ನೆಮ್ಮದಿಪಡಿಸಿದ ಹೊರತು ಮುಂದಿನ ಆಲೋಚನೆಗಳಿಗೆ ಆಹಾರ ಸಿಗುತ್ತಿಲ್ಲ. ನಿಮ್ಮ ಸಹಾಯದ. ನಿರೀಕ್ಷೆಯಲ್ಲಿ...

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ