ಸ್ಟೇಟಸ್ ಕತೆಗಳು (ಭಾಗ ೯೪೭)- ಅನುಭವಿಸು

ಸ್ಟೇಟಸ್ ಕತೆಗಳು (ಭಾಗ ೯೪೭)- ಅನುಭವಿಸು

ಹೇಳುವುದು ತುಂಬಾ ಸುಲಭ. ಆದರೆ ಅದನ್ನ ಅನುಭವಿಸಿ ನಿನ್ನ ಅನುಭವಗಳು ಅದರೊಳಗೆ ಮೇಳೈಸಿದಾಗ ನಿನಗೆ ಅರ್ಥವಾಗುತ್ತೆ. ತಂಗಿಯ ಮಾತು ಸ್ವಲ್ಪ ಖಾರವಾಗಿತ್ತು. ಇದು ಕಳೆದ ಚುಣಾವಣೆಯ ಸಂಧರ್ಭದಲ್ಲಿ ನಡೆದ ಘಟನೆ. ವರ್ಷಗಳು ದಾಟಿದ ನಂತರ ನನಗೂ ಅವಕಾಶ ಸಿಕ್ಕಿತು. ಚುಣಾವಣೆಯ ಹಿಂದಿನ ತಯಾರಿ, ರಾತ್ರಿ ಕೆಲಸ, ಸತತ ಬರವಣಿಗೆ, ಸಣ್ಣ ಸಣ್ಣ ಸೂಕ್ಷ್ಮ ಸಂಗತಿಗಳೆಲ್ಲ ಮನವರಿಕೆ ಆದವು. ಬರಿಯ ಮತ ಚಲಾಯಿಸುತ್ತಿದ್ದವನಿಗೆ ಅದರ ಒಳ ಹೊರಗು ತಿಳಿಯಿತು. ಅಬ್ಬಾ ತಂಗಿಯ ಮಾತು ಸತ್ಯ. ಅನುಭವಿಸಿದವನಿಗೆ ಮಾತ್ರ ಅದರ ಸ್ವಾದ ತಿಳಿಯುವುದ್ದಕ್ಕೆ ಸಾದ್ಯ. ಹಲವರ ಶ್ರಮವು ಕೆಲಸವನ್ನ ತುಂಬಾ ಸಾಂಗವಾಗಿ ನೆರವೇರುವಂತೆ ಮಾಡುತ್ತದೆ. ನನಗೆ ಅರ್ಥವಾಯಿತು. ಇನ್ನೂ ಹಲವರು ಅರ್ಥ ಮಾಡಿಕೊಳ್ಳಬೇಕಾಗಿದೆ. ಬದುಕು ಕಲಿಸುತ್ತದೆ. ಪ್ರತೀ ಕ್ಷಣ ಬದುಕಿದವರಿಗೆ ಮಾತ್ರ ನಾನು ಬದುಕುತ್ತಿದ್ದೇನೆ. ನೀವೂ ಬದುಕಿಬಿಡಿ. ಬದುಕು ಅದ್ಭುತ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ