ಸ್ಟೇಟಸ್ ಕತೆಗಳು (ಭಾಗ ೯೬೩)- ‘ಮಾ’ ದಾರಿ

ಸ್ಟೇಟಸ್ ಕತೆಗಳು (ಭಾಗ ೯೬೩)- ‘ಮಾ’ ದಾರಿ

ಅವಳ ಕಣ್ಣ ತುಂಬಾ ಕನಸುಗಳಿವೆ, ಎಲ್ಲವೂ ಈಗ ಹುದುಗಿ ಕುಳಿತಿವೆ. ಮರೆಯಾಗಿಲ್ಲ. ಶಾಲೆ ಕಾಲೇಜು ಅವಧಿಯಲ್ಲಿ ವೇದಿಕೆ ಏರಿದವಳು. ಎಲ್ಲರ ಕಣ್ಮಣಿ ಆದವಳು. ಯಾವುದಕ್ಕೂ ಹಿಂಜರಿಯದೇ ಊರಲ್ಲಿ ಮನೆ ಮಾತಾದವಳು. ಬಹುಮಾನಗಳನ್ನ ಮನೆ ತುಂಬಾ ತುಂಬಿಸಿ ಮನೆಯವರ ಹೆಮ್ಮೆಗೆ ಸ್ಫೂರ್ತಿ ನೀಡಿದವಳು. ಕಾಲಕ್ಕೂ ಬೇಸರ ಮೂಡಿತೋ ಏನೋ. ಎಲ್ಳವೂ ಹಾಗೆಯೇ ಮರೆಯಾಯಿತು. ಮಗಳಾದವಳು ಮನೆಗೆ ಆಧಾರವಾಗಬೇಕು. ಹೊಸ ಕೆಲಸ ಕಲಿತಲು. ಸಂಪಾದನೆಗೆ ಇಳಿದಳು. ಶಿಕ್ಷಣವು ದಾರಿ ತೋರಬಹುದೆಂದು ಹಾಗೇ ಮುಂದುವರಿದಳು. ಆದರೆ ಕನಸುಗಳನ್ನ ಮೂಟೆ ಕಟ್ಟಿ ಮನೆಯ ಜವಾಬ್ದಾರಿಯ ಕನಸನ್ನೇ ತನ್ನದೆಂದು ನಂಬಿ ಬದುಕುವುದ್ದಕ್ಕೆ ಆರಂಭ ಮಾಡಿದಳು. ವೇದಿಕೆ ಕರೆಯುತ್ತಿತ್ತು. ಜೊತೆಗಾರರು ಅವರ ಕನಸಿನೊಂದಿಗೆ ಹೆಜ್ಜೆ ಹಾಕಿದಾಗ ಸುಮ್ಮನೆ ಮೌನವಾದಳು. ಅದ್ಬುತ ಪ್ರತಿಭೆಯೊಂದನ್ನ ಕಳೆದುಕೊಂಡದ್ಯಾರು ಸಮಾಜವೋ ಮನೆಯೋ, ಅವಳೋ. ಅಪ್ಪನ ದುಡಿಮೆಯಲ್ಲಿ ನಡೆಯುತ್ತಿದ್ದ ಮನೆಯನ್ನ, ಇನ್ನು ಮುಂದೆ ಕನಸನ್ನ ಅಡವಿಟ್ಟು ಮುನ್ನಡೆಸುವ ಗಟ್ಟಿತನ ಅವಳ ಪಾಲಿಗೆ ಬಂತು. ಕನಸು ಎಚ್ಚರಿಸುತ್ತದೆ, ಬೇಡುತ್ತದೆ. ಜವಾಬ್ದಾರಿ ನೆನೆಪಿಸುತ್ತದೆ. ಸ್ಪೂರ್ತಿಯಾಗುವವರು ಎಲ್ಲಾ ಕಡೆ ಸಿಗುತ್ತಾರೆ.ಬದುಕನ್ನಾಲಿಸಬೇಕು, ಮೌನವನ್ನ ಅರ್ಥೈಸಿಕೊಳ್ಳಬೇಕು. ಹೀಗೆ ನನಗೆ ಸಿಕ್ಕ ಬದುಕಿನ ಕತೆ ನಿಮಗೂ ಸಿಗಬಹುದು, ಆಲಿಸಿ,

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ