ಸ್ಟೇಟಸ್ ಕತೆಗಳು (ಭಾಗ ೯೬೬)- ರಸ್ತೆ

ಸ್ಟೇಟಸ್ ಕತೆಗಳು (ಭಾಗ ೯೬೬)- ರಸ್ತೆ

ಯಾಕೆ ಹೀಗೆ ನೀವು‌. ಮತ್ತೆ ಅಗೆಯುತ್ತೀರಿ, ಸರಿ ಮಾಡುತ್ತೀರಿ, ಇನ್ನೊಂದಷ್ಟು ಜನರಿಗೆ ತೊಂದರೆ ಕೊಡುತ್ತೀರಿ. ಏನು ಸಾಧಿಸೋಕೆ ಹೊರಟಿದ್ದೀರಿ. ಅಯ್ಯೋ ಅವಸ್ಥೆಯೇ, ಇಂದು ನನ್ನ ರಿಪೇರಿ ನಡೆದಿದೆ. ಪಕ್ಕದಲ್ಲೆ ಮಲಗಿರುವ ನನ್ನ ಸಹವರ್ತಿಯ ಮೇಲೆ ಗಾಡಿಗಳು ಓಡುತ್ತಿದ್ದಾವೆ. ಜನರ ಬೈಗುಳ ಹೆಚ್ಚಾಗಿದೆ. ಕಛೇರಿಗೆ ಸಮಯಕ್ಕೆ ಸರಿಯಾಗಿ ತಲುಪೋಕ್ಕಾಗದೆ ಬೈಗುಳ ತಿಂದವರೆಷ್ಟೋ, ಮನೆ ಸೇರೋಕ್ಕಾಗದೆ ಪರದಾಡಿದವರು ಯಾರೋ, ಆಂಬುಲೆನ್ಸ್ ಒಳಗೆ ನೊವಿನ ಕೂಗು ಕೇಳಿಸದೆ ಗಾಡಿಗಳು ನಿಂತು ಬಿಟ್ಟಿವೆ. ಒಳಗಿನ ಜೀವದ ಜತೆಗಾರರಿಗೆ ಮರಣ ಭಯ ಕಾಡುತ್ತಿದೆ. ತುರ್ತು ಕೆಲಸಗಳು ಮುಗಿಯುತ್ತಿಲ್ಲ. ಹಲವು ಅಲ್ಲೋಲ ಕಲ್ಲೋಲ ಉಂಟಾಗಿದೆ ಹಲವರ ಬದುಕಿನಲ್ಲಿ. ದೊಡ್ಡವರಿಗೆ ಕೇಳಿದರೆ ಮುಂದಿನ ಎಲ್ಲರ ಬದುಕಿನ ಒಳಿತಿಗೆ ಇಂದು ಸ್ವಲ್ಪ ಸಮಸ್ಯೆಯನ್ನ ಅನುಭವಿಸಬೇಕು ಅಂತಾರೆ. ಆದರೆ ಈಗ ಸಮಸ್ಯೆಯಲ್ಲಿ ಜೀವನವನ್ನೇ ಕಳೆದುಕೊಂಡವರಿಗೆ ಮುಂದಿನ ಬದುಕು ಹೇಗೆ ಸ್ವಾಮಿ? ರಸ್ತೆಯ ಪ್ರಶ್ನೆಗೆ  ಉತ್ತರ ಕೊಡಿ...ತಿಳಿದವರು...

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ