ಸ್ಟೇಟಸ್ ಕತೆಗಳು (ಭಾಗ ೯೬೮)- ಕಾರಣ

ಸ್ಟೇಟಸ್ ಕತೆಗಳು (ಭಾಗ ೯೬೮)- ಕಾರಣ

ನಡಿಯೋಕೆ ಸಾಧ್ಯವಾಗ್ತಾ ಇಲ್ಲ. ಬ್ಯಾಗ್ ತುಂಬಾ ಭಾರವಾಗಿದೆ. ಅದರಲ್ಲಿ ರಾಶಿ ರಾಶಿ ಕಾರಣಗಳನ್ನ ತುಂಬಿಸಿಕೊಂಡಿದ್ದೇನೆ. ನಾನು ಅಂತಲ್ಲ ಯಾರೆಲ್ಲ ಇಲ್ಲಿ ನಡೆಯುವುದಕ್ಕೆ ಕಷ್ಟಪಡ್ತಾ ಇದ್ದಾರೋ ಅವರೆಲ್ಲರೂ ಕೂಡ ಕಾರಣಗಳನ್ನು ತಮ್ಮ ಬ್ಯಾಗಿನಲ್ಲಿ ವಿಪರೀತವಾಗಿ ತುಂಬಿಸಿಕೊಂಡವರು. ಆಗುವ ಪ್ರತಿಯೊಂದು ಕೆಲಸದಲ್ಲೂ ಮಾಡುವ ತಪ್ಪುಗಳನ್ನು ,ಹೇಳುವ ಸಮಜಾಯಿಸಿಗಳಲ್ಲೂ ಪ್ರತಿಯೊಂದು ಕಾರಣ ಸುಳಿದಾಡುತ್ತಾನೆ ಇರುತ್ತೆ. ಯಾವುದನ್ನು ನೇರವಾಗಿ ಒಪ್ಪಿಕೊಳ್ಳುವವರಲ್ಲ. ತಪ್ಪನ್ನ ತಪ್ಪೆಂದು ಕ್ಷಮೆ ಕೇಳುವ ಮನಸ್ಸು ನಮ್ಮದಲ್ಲ. ಒಟ್ಟಿನಲ್ಲಿ ಪ್ರತಿಯೊಂದು ಕಾರಣವನ್ನು ತೆರೆದಿಡುತ್ತೇವೆ. ನಾವು ತುಂಬಾ ಒಳ್ಳೆಯವರು ತಪ್ಪನ್ನೇ ಮಾಡದವರು ಮಾಡಿದ ತಪ್ಪಿಗೂ ಒಂದು ಕಾರಣವೂ ಇದೆ ಅನ್ನೋದನ್ನ ಸಾರುತ್ತಿದ್ದೇವೆ. ಹಾಗಾಗಿ ನನಗೆ ನಡೆಯುವುದಕ್ಕೆ ಸಾಧ್ಯವಾಗುತ್ತಿಲ್ಲ. ಯಾವುದನ್ನ ಚೆಲ್ಲೋದು ಅಂತ ಗೊತ್ತಾಗ್ತಾ ಇಲ್ಲ. ಎರಡು ದಿನದ ಹಿಂದೆ ಕಾರಣದ ಬ್ಯಾಗನ್ನು ಮರೆತು ಹಾಗೆ ಸಾಗಿದ್ದೆ ಆದರೆ ಹೋಗುವ ದಾರಿಯು ವೇಗವಾಗಿತ್ತು, ಆದರೆ ದಾರಿಯಲ್ಲಿ ಹಲವು ಸಮಸ್ಯೆಗಳು ಎದುರಾಯಿತು. ಯಾವತ್ತೂ ಕಾರಣವನ್ನು ಮೇಲೆ ಹೊತ್ತು ಕೊಂಡಿದ್ದೇನೋ ದಾರಿಯ ಮೇಲೆ ಒಂದಿಷ್ಟು ಕನಿಕರಗಳು ಸಿಕ್ಕು ಹಾಗೆ ಮುಂದುವರಿಯೋದಕ್ಕೆ ಸಹಕಾರ ಆಯ್ತು. ನಾನು ದಾರಿ ತಪ್ಪಿದ್ದೇನೆ. ನನಗೆ ಗಟ್ಟಿಯಾಗಿ ಸಾಗಬೇಕು ಅಂತಿದ್ರೆ ಕಾರಣಗಳನೆತ್ತಿ ಬದಿಗಿಡಬೇಕು. ನಿಮ್ಮ ಬ್ಯಾಗು ಕೂಡ ಭಾರವಾಗಿದ್ದರೆ  ಕಾರಣಗಳನ್ನೆತ್ತಿ ಬದಿಗಿಟ್ಟುಬಿಡಿ, ಆದಷ್ಟು ಬೇಗ ಗುರಿ ತಲುಪಬಹುದು...ಇದಕ್ಕೂ ಕಾರಣ ನೀಡಬೇಡಿ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ