ಸ್ಟೇಟಸ್ ಕತೆಗಳು (ಭಾಗ ೯೭೭)- ಕನಸು

ಸ್ಟೇಟಸ್ ಕತೆಗಳು (ಭಾಗ ೯೭೭)- ಕನಸು

ಅವನು ಹಾಗೇ ಏಕ ದೃಷ್ಟಿಯಿಂದ ನೋಡುತ್ತಿದ್ದಾನೆ. ಎಲ್ಲವನ್ನೂ ಕಳೆದುಕೊಂಡ  ತರಹ. ಹಲವು ವರ್ಷದ ಕನಸು ಈಗ ಕೈಜಾರಿ ಹೋಗುತ್ತಿದೆ. ದಿನಗಳನ್ನ ಲೆಕ್ಕ ಹಾಕಿ ರಾತ್ರಿ ಹಗಲು ಬೆವರು ಸುರಿಸಿ ಕೂಡಿಟ್ಟ ಹಣದಲ್ಲಿ ತನ್ನದೊಂದಿಷ್ಟು  ಅಪ್ಪನದೊಂದಿಷ್ಟು ಅಂತ ಸೇರಿಸಿ ಕನಸಿನ ಬೈಕನ್ನು ಖರೀದಿಸಿದ. ಅಪ್ಪನನ್ನೇ ಅದರಲ್ಲಿ ಕುಳ್ಳಿರಿಸಿ ಇಡೀ ಊರು ಸುತ್ತಾಡಿದ. ಸಂಭ್ರಮವೇ ಜೊತೆಯಾಗಿ ಸಾಗುತ್ತಿತ್ತು. ಸುದ್ದಿ ತಲುಪಿತು. ಅಪ್ಪನ ಆರೋಗ್ಯದಲ್ಲಿ ಏರುಪೇರಾಗಿದೆ. ಮಗನೇ ಜೊತೆಗೆ ನಿಲ್ಲಬೇಕು. ಆಸ್ಪತ್ರೆ ಖರ್ಚಿಗೆ ದುಡ್ಡಿಲ್ಲ. ತನ್ನ ಕನಸಿನ ಬೈಕನ್ನು ಹಾಗೆ ಮಾರಿ ಅದರಿಂದ ಬಂದ ಹಣದಲ್ಲಿ ಆರೋಗ್ಯ ಖರೀದಿಸಲೇ ಬೇಕು. ಹಾಗೆ ತನ್ನ ಕನಸನ್ನ ಮಾರುತ್ತಿದ್ದಾನೆ. ಬದುಕಿನ ಕನಸು ಜೊತೆಯಿರೋದ್ದಕ್ಕೆ. ಹಾಗೆ ಕಣ್ಣೀರು ಒರೆಸಿ ಬಸ್ಸಿಗೆ ಕಾಯುತ್ತಾ ನಿಂತ. 

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ