ಸ್ಟೇಟಸ್ ಕತೆಗಳು (ಭಾಗ ೯೭೮)- ಕ್ಷಣ

ಸ್ಟೇಟಸ್ ಕತೆಗಳು (ಭಾಗ ೯೭೮)- ಕ್ಷಣ

ಕ್ಷಣವನ್ನು ಭಗವಂತ ಸೃಷ್ಟಿ ಮಾಡುತ್ತಾನೆ. ನಾನು ಆ ಕ್ಷಣದ ನಡುವೆ ದಾಟಿ ಹೋಗಬೇಕಷ್ಟೇ. ಎರಡು ತಂಡಗಳ ನಡುವೆ ಅದ್ಭುತವಾದ ಕ್ರಿಕೆಟ್ ಪಂದ್ಯಾಟವೊಂದು ನಡೀತಾ ಇತ್ತು. ಇಬ್ಬರಿಗೂ ಗೆಲುವು ಬೇಕಾಗಿದೆ. ಗೆಲುವು ತಮ್ಮದೆಂದು ಎಲ್ಲರ ಮುಂದೆ ಸಾರಿ ಹೇಳಬೇಕಾಗಿದೆ. ಅದಕ್ಕಾಗಿ ಅಂಗಳದಲ್ಲಿ ಬೆವರು ಹರಿಸುತ್ತಿದ್ದಾರೆ. ಅಂತಿಮ ಎರಡು ಎಸೆತಗಳ ಮುಂದೆ ಐದು ಓಟಗಳ ಅವಶ್ಯಕತೆ. ಬ್ಯಾಂಟಿಗ್ ನಲ್ಲಿ ನಿಂತವರು ಅದ್ಭುತವಾದ ಆಟಗಾರರೇನಲ್ಲ. ಯಾರೂ ಗೆಲುವನ್ನು ನಿರೀಕ್ಷಿಸಿರಲಿಲ್ಲ. ಆ ಕ್ಷಣ ಅವರ ಜೀವನದ ಅದ್ಭುತ ಕ್ಷಣಗಳಲ್ಲೊಂದು ಅನ್ನೋದನ್ನು ಭಗವಂತ ನಿರ್ಣಯ ಮಾಡಿದ್ದನೋ ಏನೋ. ಆ ಕಾರಣಕ್ಕೆ ತನ್ನ ಮುಂದೆ ಬಿದ್ದ ಚೆಂಡಿಗೆ ಕೈಯಲ್ಲಿರುವ ಬ್ಯಾಟಿನಿಂದ ಇನ್ನೊಂದಷ್ಟು ವೇಗವನ್ನು ತುಂಬಿಸಿ ಹಾಗೆಯೇ ಹೊಡೆದು ಬಿಟ್ಟ. ಚೆಂಡು ಸೀಮಾ ರೇಖೆಯನ್ನು ದಾಟಿ ತಂಡವನ್ನು ಗೆಲುವಿನ ಕಡೆಗೆ ಸಾಗಿಸಿ ಬಿಟ್ಟಿತು. ಆತ ಎಲ್ಲರ ಮನಸ್ಸಿನಲ್ಲೂ ನೆನಪಿನಲ್ಲಿ ಉಳಿದುಬಿಟ್ಟ. ಆ ಕ್ಷಣವನ್ನು ಸೃಷ್ಟಿಸಿದ್ದು ಭಗವಂತ. ಆತ ಸಮರ್ಥವಾಗಿ ಆ ಕ್ಷಣದಲ್ಲಿ ಬದುಕಿದ ಕಾರಣ ಆತನ ನೆನಪು ಎಲ್ಲರಲ್ಲೂ ಉಳಿದು ಬಿಟ್ಟಿದೆ. ಹಾಗಾಗಿ ನಮ್ಮ ಜವಾಬ್ದಾರಿ ಇಷ್ಟೇ ಭಗವಂತ ಕೊಟ್ಟ ಕ್ಷಣವನ್ನು ನಿಭಾಯಿಸಬೇಕಷ್ಟೇ. ಬದುಕಬೇಕಷ್ಟೇ...

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ