ಸ್ಟೇಟಸ್ ಕತೆಗಳು (ಭಾಗ ೯೮೫)- ಬದುಕಿನ ಶಾಲೆ

ಸ್ಟೇಟಸ್ ಕತೆಗಳು (ಭಾಗ ೯೮೫)- ಬದುಕಿನ ಶಾಲೆ

ಎಲ್ಲದಕ್ಕೂ ತರಬೇತಿ ಸಿಗುತ್ತಿದೆ. ಆದರೆ ಬದುಕುವುದು ಹೇಗೆ ಅಂತ ಹೇಳಿ ಕೊಡುವವರು ಯಾರಿಲ್ಲ. ಎಲ್ಲಾ ಶಾಲೆಗಳಲ್ಲೂ ಒಂದೊಂದು ರೀತಿಯ ಪಠ್ಯ ಪುಸ್ತಕವಿರುತ್ತದೆ, ಹಾರುವುದಕ್ಕೆ ಕುಣಿಯುವುದಕ್ಕೆ ಓಡುವುದಕ್ಕೆ ಮಾತನಾಡುವುದಕ್ಕೆ ಚಿತ್ರ ಬಿಡಿಸುವುದಕ್ಕೆ ಅಭಿನಯಿಸುವುದಕ್ಕೆ ಹೀಗೆ ಎಲ್ಲದಕ್ಕೂ ಹೇಳಿ ಕೊಡುತ್ತಾರೆ. ಅವರಿಂದ ಕಲಿತು ಮುಂದುವರಿಸಬಹುದು. ಆದರೆ ಹೇಗೆ ಬದುಕಬೇಕು ಮೌಲ್ಯವುಗಳನ್ನು ಎಷ್ಟು ಅಳವಡಿಸಿಕೊಳ್ಳಬೇಕು, ಯಾವ ಕ್ಷಣದಲ್ಲಿ ಹೇಗೆ ವರ್ತಿಸಬೇಕು ಅಂತ ಹೇಳಿ ಕೊಡುವವರಿಲ್ಲದೆ ಬದುಕಿನ ವಿದ್ಯಾರ್ಥಿಗಳೆಲ್ಲರೂ ತಪ್ಪು ದಾರಿ ಹಿಡಿದಿದ್ದಾರೆ ಅಂತ ನನಗೆ ಅನಿಸುತ್ತಿದೆ. ಬದುಕಿನ ಶಾಲೆಯಿಂದ ನಾ ಕಲಿಯಬೇಕಿದ್ದು ಅಲ್ಲಿ ವರ್ತನೆಯ ರೀತಿ ಮಾತಿನ ರೀತಿ ವ್ಯಕ್ತಿತ್ವ ಮೌಲ್ಯಗಳ ರೀತಿ ಪಾಠವಾದ ನಂತರ ಪರೀಕ್ಷೆ ಮಾಡಿ, ಆ ಪರೀಕ್ಷೆಯಲ್ಲಿ ಉತ್ತಮ ಅಂಕವನ್ನಗಳಿಸಿ ಉತ್ತೀರ್ಣರಾದವರೆಗೆ ಮುಂದೆ ಬದುಕುವ ದಾರಿಯನ್ನ ತೋರಿಸಬೇಕಿತ್ತು. ಈ ಬದುಕಿನ ಶಾಲೆಗೆ ನಮ್ಮ ಹಿರಿಯರೆಲ್ಲರೂ ಕೂಡ ಶಿಕ್ಷಕರಾಗಿ ಉಪನ್ಯಾಸಕರಾಗಿ ದುಡಿಯಬೇಕು. ಅವರಿಂದ ವಿಷಯ ಕಲಿತ ನಾವು ಮುಂದೆ ಇನ್ನೊಂದಷ್ಟು ಜನರಿಗೆ ಬದುಕನ್ನು ವಿವರಿಸುವವರಾಗಬೇಕು. ಶಾಲೆಯೊಂದರ ಅವಶ್ಯಕತೆ ಪ್ರಸ್ತುತಕೆ ತುಂಬಾ ಇದೆ ಅಂತ ಅನಿಸ್ತಾ ಇದೆ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ