ಸ್ಟೇಟಸ್ ಕತೆಗಳು (ಭಾಗ ೯೮೮)- ವಾಹನ ವೈದ್ಯ

ಸ್ಟೇಟಸ್ ಕತೆಗಳು (ಭಾಗ ೯೮೮)- ವಾಹನ ವೈದ್ಯ

ನಿನಗೆ ಎಷ್ಟು ಸಲ ಹೇಳಬೇಕು, ನನ್ನ ಮಾತು ನಿನಗೆ ಕೇಳ್ತಾ ಇಲ್ವೋ? ಅರ್ಥನೇ ಆಗ್ತಾ ಇಲ್ಲ. ನನಗೆ ಏನೋ ಸಮಸ್ಯೆ ಶುರುವಾಗಿದೆ ತುಂಬಾ ದಿನದಿಂದ ಹೇಳ್ತಾ ಇದ್ದೇನೆ. ನನ್ನನ್ನು ವೈದ್ಯರು ಬಳಿ ತೋರಿಸು, ಅವರು ನನ್ನ ಆರೋಗ್ಯವನ್ನು ವಿಚಾರಿಸುತ್ತಾರೆ. ನನ್ನ ತಪ್ಪಿರುವ ಆರೋಗ್ಯವನ್ನು ಸರಿಪಡಿಸಿ ಮತ್ತೆ ಸರಿ ದಾರಿಯಲ್ಲಿ ನಡೆಯುವ ಹಾಗೆ ಮಾಡುತ್ತಾರೆ. ಇಡೀ ದಿನ ಹೊತ್ತು ಓಡಾಡಬೇಕಾದವನು ನಾನು ನಿನಗೆ ಏನಾದರೂ ಆರೋಗ್ಯ ಕೈ ಕೊಟ್ರೆ ಆ ತಕ್ಷಣವೇ ವೈದ್ಯರ ಬಳಿ ಓಡಿ ಹೋಗ್ತೀಯ ನಿನ್ನ ಆರೋಗ್ಯವನ್ನು ಸರಿಪಡಿಸಿಕೊಳ್ಳುತಿಯಾ? ಹಾಗೆ ನನ್ನ ಆರೋಗ್ಯದ ಬಗ್ಗೆ ಗಮನ ಇರಬೇಕು ತಾನೆ? ಕೆಲವೊಂದು ಸಲ ನಾನು ನಿನ್ನ ಎಚ್ಚರಿಸುತ್ತೇನೆ ನನ್ನ ಆರೋಗ್ಯ ತಪ್ಪಿದೆ ಅಂತ ತಿಳಿಸುತ್ತೇನೆ ಕೆಲವೊಂದು ಸಲ ನೀನಾಗಿಯೇ ವೈದ್ಯರ ಬಳಿ ಕರೆದುಕೊಂಡು ಹೋದಾಗ ನನ್ನ ಆರೋಗ್ಯ ತಪ್ಪಿರೋದು ಗೊತ್ತಾಗುತ್ತೆ. ನಿನಗೆ ಹೇಗೆ ದೊಡ್ಡ ದೊಡ್ಡ ವೈದ್ಯರಿರ್ತಾರೋ ನನಗೂ ಹಾಗೆ ಗ್ಯಾರೇಜ್ ಅನ್ನುವ ಜಾಗದಲ್ಲಿ ವೈದ್ಯರು ಸಿಕ್ತಾರೆ. ನನ್ನನ್ನು ಒಮ್ಮೆ ವೈದ್ಯರ ಬಳಿ ಕರೆದುಕೊಂಡು ಹೋಗು. ನನಗೆ ಜೀವನ ಕಷ್ಟ ಆಗ್ತಾ ಇದೆ. ಹೀಗೆ ನನ್ನ ಬೈಕು ನನ್ನಲ್ಲಿ ದೈನದಿಂದ ಬೇಡಿಕೊಳ್ಳುತ್ತಿದ್ದರೂ ನನಗೆ ಯಾಕೋ ಸಮಯ ಸರಿಯಾಗಿ ಸಿಕ್ಕಿರಲಿಲ್ಲ. ಇಷ್ಟು ಬೇಡಿಕೊಂಡ ಮೇಲೆ ವೈದ್ಯರ ಬಳಿ ಸೇರಿಸಿದಿದ್ದರೆ ಹೇಗೆ ಹಾಗಾಗಿ ವೈದ್ಯರ ಬಳಿ ಬಿಟ್ಟು ಬಂದೆ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ