ಸ್ಟೇಟಸ್ ಕತೆಗಳು (ಭಾಗ ೯೯೦)- ತಪ್ಪು

ಸ್ಟೇಟಸ್ ಕತೆಗಳು (ಭಾಗ ೯೯೦)- ತಪ್ಪು

"ನೀವು ಮಾಡಿರೋ ತಪ್ಪನ್ನ ಒಪ್ಪಿಕೊಳ್ಳಿ ಎಷ್ಟು ದಿನ ಅಂತ ಸಾಧಿಸ್ತೀರಿ" 

"ಸರ್ ನಮ್ಮ ತಪ್ಪನ್ನ ಒಪ್ಪುವುದಿರಲಿ ಅವರು ಇದೇ ತಪ್ಪನ್ನ ಹಿಂದೊಮ್ಮೆ ಮಾಡಿದ್ರು ತಾನೇ?"

" ಹಾಗಾದರೆ ನೀವು ತಪ್ಪೇ ಮಾಡಿಲ್ಲ ಅಂತೀರಾ"

" ನಾವು ತಪ್ಪು ಮಾಡಿಲ್ಲ ಅಂತ ಹೇಳ್ತಾ ಇಲ್ಲ ,ಆದರೆ ಅವರು ತಪ್ಪು ಮಾಡಿದಾಗ ನೀವ್ಯಾಕೆ ಯಾರು ಪ್ರಶ್ನೆ ಮಾಡಿಲ್ಲ"

" ಸರ್ ಅವರನ್ನ ಪ್ರಶ್ನೆ ಮಾಡೋದು ಬಿಡೋದು ನಮಗದು ಗೊತ್ತಿಲ್ಲ ,ಆದರೆ ನೀವು ತಪ್ಪು ಮಾಡಿದ್ದೀರಿ ಅದನ್ನು ಒಪ್ಪಿಕೊಳ್ಳುಬೇಕು"

" ಅವರು ಇದಕ್ಕಿಂತ ದೊಡ್ಡ ತಪ್ಪು ಮಾಡಿದ್ದರು ಅವರ ತಪ್ಪುಗಳ ಪಟ್ಟಿಯನ್ನು ನಿಮ್ಮ ಮುಂದೆ ಇಡ್ತೇವೆ , ಯಾರಿಗೂ ಪ್ರಶ್ನೆ ಮಾಡುವ ತಾಕತ್ತಿಲ್ಲ ಈಗ ನಾವು ತಪ್ಪು ಮಾಡಿದಾಗ ನಮ್ಮ ಮುಂದೆ ಬಂದು ಪ್ರಶ್ನೆ ಮಾಡುತ್ತೀರಿ ಮೊದಲು ಅವರ ತಪ್ಪನ್ನು ಕೇಳಿ ಅವರ ಕಡೆಯಿಂದ ಉತ್ತರ ಬಂದ ನಂತರ ನಮ್ಮ ಬಳಿ ಮಾತನಾಡಿ ಸರ್"

" ಅವರ ಬಳಿ ಕೇಳಿದರೆ ನಿಮ್ಮ ತಪ್ಪು ತೋರಿಸುತ್ತಾರೆ ನಿಮ್ಮ ಬಳಿ ಕೇಳಿದರೆ ಅವರ ತಪ್ಪು ತೋರಿಸ್ತೀರಾ? ಇಬ್ಬರೂ ತಪ್ಪು ಮಾಡೋರೆ ಆಗಿಬಿಟ್ಟಿದಿರಿ ಇನ್ನು ಸರಿ ಮಾಡುವವರು ಯಾರು?"

ಎಲ್ಲಾ ವಿಷಯಗಳಿಗೂ ಇದೇ ರೀತಿ ಒಬ್ಬರ ಮೇಲೆ ಒಬ್ಬರು ತಪ್ಪನ್ನು ಹೋರಿಸಿಕೊಂಡು ದಿನ ದೂಡುತ್ತಾ  ಇದ್ದೀರಿ? ಒಟ್ಟಿನಲ್ಲಿ ನೀವ್ಯಾರು ಸಭ್ಯಸ್ತರಲ್ಲ. ತಪ್ಪುಗಳ ಮೂಟೆಗಳನ್ನ ಹೆಗಲ ಮೇಲೆ ಹೊತ್ತುಕೊಂಡು ಯಾವ ತಪ್ಪನ್ನ ಯಾರ ಮೇಲೆ ಹೊತ್ತು ಹಾಕುವುದಕ್ಕೆ ಕಾಯ್ತಾ ಇರುತ್ತೀರಿ. ನಿಮ್ಮನ್ನ ನಾವು ನಾಯಕರೆಂದು ಆರಿಸಿ ಮೇಲೆ ಕೂರಿಸಿದ್ದೇವೆ ಅದು ನಮ್ಮ ತಪ್ಪು.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ