ಸ್ಟೇಟಸ್ ಕತೆಗಳು (ಭಾಗ ೯೯೨)- ಪ್ರವಾಸ

ಸ್ಟೇಟಸ್ ಕತೆಗಳು (ಭಾಗ ೯೯೨)- ಪ್ರವಾಸ

ಅರ್ಥ ಮಾಡಿಕೊಳ್ಳುವವರು ಜೊತೆಗೆ ಇದ್ದಾಗ ಯಾವುದೇ ಸಮಸ್ಯೆಯು ದೊಡ್ಡದು ಅನ್ನಿಸೋದಿಲ್ಲ, ಎಲ್ಲ ಜೊತೆ ಸೇರಿ ಪ್ರವಾಸ ಹೊರಡುವುದು ತೀರ್ಮಾನವಾಯಿತು. ಸ್ಥಳಗಳು ಬದಲಾಗ್ತಾ ಬದಲಾಗ್ತಾ ಕೊನೆಗೊಂದು ಸ್ಥಳಕ್ಕೆ ಒಪ್ಪಿಗೆ ಆಯಿತು. ಆರಂಭದಲ್ಲಿ ವಿಘ್ನ ಎದುರಾದರೂ ಕೂಡ ಮನಸ್ಸುಗಳು ಜೊತೆಗೆ ನಿಂತಿದ್ದವು. ಎಲ್ಲರಿಗೂ ಜೊತೆಗೆ ಸಮಯ ಕಳೆಯಬೇಕಿತ್ತು, ಸಂಭ್ರಮ ಹಂಚಿಕೊಳ್ಳಬೇಕಿತ್ತು, ಮನಸ್ಸಿನ ಮಾತುಗಳನ್ನು ವಿವರಿಸಬೇಕಿತ್ತು ,ಖುಷಿ ಪಡಬೇಕಿತ್ತು. ಅದಕ್ಕೆ ಪೂರಕವಾಗುವ ಹಾಗೆ ಪ್ರತಿಯೊಂದು ಕ್ಷಣವನ್ನು ಅನುಭವಿಸ್ತಾ ಹೋದರು. ಪುಟ್ಟ ಕ್ಷಣಗಳೆಲ್ಲಾ ಎಲ್ಲರ ಮನಸ್ಸಿನಲ್ಲಿ ಹಾಗೆ ಅಚ್ಚೊತ್ತಿ ನಿಂತಿದ್ದವು.ಹಾಗೆ  ಸಂಭ್ರಮದಿಂದ ಆಟ ಆಡಿದರು, ಪ್ರವಾಸದ ಆರಂಭದಿಂದ ಆಗಿರುವ ತೊಂದರೆಗಳನ್ನು ವಿವರಿಸ್ತಾ ಹೋದ ಹಾಗೆ ಎಲ್ಲರಿಗೂ ಅರ್ಥವಾಗಿತ್ತು. ಪ್ರವಾಸವನ್ನ ಇನ್ನಷ್ಟು ಸುಂದರವಾಗಿಸುವುದಕ್ಕೆ ಎಲ್ಲರೂ ಕೈಕಟ್ಟಿ ನಿಂತರು, ಎಲ್ಲರ ಮನಸ್ಸು ಒಂದೇ ರೀತಿಯಲ್ಲಿ ಕೆಲಸ ಮಾಡಿದ ಕಾರಣ ಪ್ರವಾಸವು ಅದ್ಭುತವಾಗಿ ಮನೆಗೊಳ್ಳುವ ಹಂತಕ್ಕೆ ಬಂದಿತ್ತು. ಎಲ್ಲರೂ  ನೆನಪುಗಳ ಮೂಟೆಗಳನ್ನು ತಮ್ಮ ಲಗೇಜ್ ಗಳ ಜೊತೆಗೆ ಹೊತ್ತು ಮನೆಗೆ ಸಾಗುವ ತಯಾರಿಯಲ್ಲಿದ್ದರು. ಪ್ರವಾಸವೊಂದು ನೆನಪಿನ ಗುಚ್ಛಗಳ ಜೊತೆ ಮುಕ್ತಾಯವಾಗಿತ್ತು.ಅದಕ್ಕೆ  ಆಗ ಹೇಳಿದ್ದು ಅರ್ಥ ಮಾಡಿಕೊಳ್ಳೋ ಮನಸುಗಳ ಜೊತೆಗಿದ್ದಾಗ ಸಮಸ್ಯೆಗಳು ದೊಡ್ಡದು ಅನ್ನಿಸೋದಿಲ್ಲ ಅಂತ.. ಇದಕ್ಕೆ ನೀವು ಏನಂತೀರಾ..?

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ