ಸ್ಟೇಟಸ್ ಕತೆಗಳು (ಭಾಗ ೯೯೩)- ಬೆಕ್ಕು

ಸ್ಟೇಟಸ್ ಕತೆಗಳು (ಭಾಗ ೯೯೩)- ಬೆಕ್ಕು

ಅಮ್ಮ ತುಂಬಾ ಚಳಿ ಆಗ್ತಾ ಇದೆ. ನಿನ್ನೆಯವರೆಗೂ ಈ ಮಳೆಯ ಅನುಭವ ಆಗಲೇ ಇಲ್ಲ. ಆದರೆ ಈಗ ಮಳೆ ನಿಲ್ತಾನೇ ಇಲ್ಲ. ತಲೆ ಮೇಲೆ ಒಂದು ಸೂರಿಲ್ಲ. ನಿನ್ನೆ ಇದ್ದ ಸ್ಥಳ ಈಗ ಬದಲಾಗಿರುವುದು ಯಾಕೆ? ನಿನ್ನೆ ಮನೆ ತುಂಬೆಲ್ಲಾ ಯಾರ್ಯಾರೋ ಓಡಾಡ್ತಾ ಇದ್ರು. ಅವರನ್ನೆಲ್ಲಾ ಕುತೂಹಲದಿಂದ ನೋಡ್ತಾ ಇದ್ವಿ. ಆದರೆ ಈಗ ಅವರು ಯಾರು ಕಾಣುತ್ತಿಲ್ಲ. ಇಲ್ಲಿ ದೊಡ್ಡ ದೊಡ್ಡ ವಾಹನಗಳು ಓಡಾಡ್ತಾ ಇದ್ದಾವೆ. ತುಂಬಾ ಭಯವಾಗ್ತಿದೆ ಅಮ್ಮ. ಆದ್ದರಿಂದ ನೀನಂತೂ ಎಲ್ಲರ ಬಳಿ ಬೇಡಿಕೊಳ್ತಾ ಇದ್ದೀಯಾ ಆದರೆ ಯಾರು ಕೇಳುವವರಿಲ್ಲ ಯಾಕಮ್ಮ? ಈ ಮನುಷ್ಯರೆಲ್ಲರೂ ಕೆಟ್ಟವರಾ? ಇವರಿಗ್ಯಾಕೆ ನಮ್ಮ ನೋವು ಅರ್ಥವಾಗುವುದಿಲ್ಲ? ಅಮ್ಮ ನಮ್ಮ ಜೀವನ ಮಾತ್ರಾನಾ? ಎಲ್ಲರ ಜೀವನವು ಹೀಗೆನಾ? ಈ ಮನುಷ್ಯರನ್ನು ಕೂಡ ಅವರ ಮನೆಯಿಂದ ತೆಗೆದು ಎಲ್ಲಾದರೂ ರಸ್ತೆ ಬದಿಯಲ್ಲಿ ಅನಾಥರಾಗಿ ನಿಲ್ಲಿಸಿದರೆ ಅವರಿಗೂ ನಮ್ಮ ಯಾತನೆ ಅರ್ಥವಾದಿತೋ ಏನೋ? ಬೆಕ್ಕಿನ ಸಂಕಟದ ಮಾತುಗಳು ದೂರದಲ್ಲಿ ಕೇಳ್ತಾ ಇದ್ದವು...

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ