ಸ್ಟೇಟಸ್ ಕತೆಗಳು (ಭಾಗ ೯೯೪)- ವೇದಾಂತಿ

ಸ್ಟೇಟಸ್ ಕತೆಗಳು (ಭಾಗ ೯೯೪)- ವೇದಾಂತಿ

ಊರ ಹೊರಗಿನ ಪುಟ್ಟ ಗುಡಿಯೊಳಗೆ ಕೂತ ವೇದಾಂತಿ ಒಬ್ಬ ಆಗಾಗ ಮಾತಾಡ್ತಾನೆ. ಅವನ ಮಾತು ಕೇಳುವುದೇ ಅಪರೂಪ. ಹೆಚ್ಚಾಗಿ ಮೌನದಿಂದ ನಗುತ್ತಾ ಅವನ ಕೆಲಸವನ್ನು ಮಾಡ್ತಾನೆ ವಿನಃ ಒಳಿತು ಕೆಡುಕು, ಬಾಯಿ ತೆರೆಯುವುದಿಲ್ಲ. ಆದರೆ ಅವನು ಮಾತನಾಡಿದ ಆಗಲಿಲ್ಲ ಹೊಸ ವಿಚಾರಗಳು ಖಂಡಿತವಾಗಿ ಜನರ ಹೃದಯವನ್ನು ತಲುಪುತ್ತೆ ಇತೀಚೆಗೆ ಒಂದು ಮಾತನಾಡಿದ ಎಲ್ಲರೂ ಒಂದಲ್ಲ ಒಂದು ದಿನ ಸಾಯಲೇಬೇಕು ಆ ಸಾವು ಇನ್ನಷ್ಟು ಬೇಗ ಹತ್ತಿರವಾಗುವುದಕ್ಕೆ ಕಾರಣಗಳನ್ನು ಮತ ಹೇಳ್ತಾಯಿದ್ದ ನಿನ್ನ ಕನಸಿನಂತಿದೆ ನೀನು ಬದುಕದಿದ್ದರೆ ಒಂದಷ್ಟು ಹೊಸ ಸ್ಥಳಗಳನ್ನು ನೋಡದಿದ್ದರೆ ಸಹಾಯ ಮಾಡುವ ಸ್ಥಿತಿಯಲ್ಲಿದ್ದು ಮೌನವಾಗಿದ್ದರೆ ಕೆಟ್ಟ ಚಟಗಳಿಗೆ ಬಲಿಯಾಗಿದ್ದರೆ ಪ್ರೀತಿಸುವ ಹೃದಯವಿದು ಮೂಕನಾಗಿ ಬಿಟ್ಟರೆ ಹಲೋ ಕನಸುಗಳು ದೊಡ್ಡದಾಗಿಲ್ಲದಿದ್ದರೆ ಸಾಧಿಸುವ ಮನಸ್ಸಿಲ್ಲದಿದ್ದರೆ ಒಳಗೆ ಕೆಟ್ಟದ್ದನ್ನು ತುಂಬಿ ಹೊರಗಡೆ ನಗುತ್ತಿದ್ದರೆ ನಿನ್ನ ಸ್ವಾರ್ಥಕ್ಕೆ ಇನ್ನೊಬ್ಬರನ್ನು ಬಳಸಿಕೊಳ್ಳುತ್ತಿದ್ದಾರೆ ನೀನು ದೇವರು ಕೊಟ್ತ ಆಯಸ್ಸಿಗಿಂತಲೂ ಬೇಗ ಸಾಯ್ತಿಯ ದೇವರು ಕೊಟ್ಟ ಆಯಸ್ಸಿಗಿಂತಲೂ ಹೆಚ್ಚು ಬದುಕಬೇಕೆಂದಿದ್ದರೆ ಮೇಲೆ ಹೇಳಿದ್ದೆಲ್ಲವನ್ನೂ ಮಾಡುವಂತವನಾಗು. ದೇವರೇ ಖುಷಿ ಪಟ್ಟು ಇನ್ನೊಂದಷ್ಟು ಹೆಚ್ಚು ಸಮಯವನ್ನು ನಿನಗೆ ನೀಡುತ್ತಾನೆ. “ಮಾತು ಮುಂದುವರೆದಿತ್ತು... ನಾನು ಮೌನವಾಗಿಬಿಟ್ಟೆ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ