ಸ್ಟೇಟಸ್ ಕತೆಗಳು (ಭಾಗ ೯೯೫)- ಸುತ್ತಮುತ್ತ

ಸ್ಟೇಟಸ್ ಕತೆಗಳು (ಭಾಗ ೯೯೫)- ಸುತ್ತಮುತ್ತ

ನಿನ್ನ ಮನೆಯ ದಾರಿಗೆ ಬೆಳಕು ಚೆಲ್ಲಬೇಕಾದ ಜವಾಬ್ದಾರಿ ನಿನ್ನದು. ನಿನ್ನ ನಂಬಿ ನಿನ್ನ ಹಿಂದೆ ಒಂದಷ್ಟು ಜನ ಬದುಕ್ತಾ ಇರ್ತಾರೆ, ಹಾಗಿರುವಾಗ ಅವರ ಬದುಕನ್ನ ಅರ್ಧ ನೀರಿನಲ್ಲಿ ಬಿಟ್ಟು ಹೋಗುವ ಕೆಟ್ಟ ಕೆಲಸವನ್ನು ನೀನು ಮಾಡಬಾರದು. ಅದಲ್ಲದೆ ನಿನ್ನಿಂದ ಇನ್ನೊಬ್ಬರಿಗೆ ಏನೋ ತೊಂದರೆಯಾಗುತ್ತಿದೆ ಎನ್ನುವ ಸ್ಥಿತಿಯೂ ನಿರ್ಮಾಣವಾಗಬಾರದು. ನಿನ್ನಿಂದ ಯಾರ ಬದುಕೂ ಅನರ್ಥವಾಗಬಾರದು. ನಿನ್ನ ಜೀವನ ಮೌಲ್ಯ ಅದು ನಿನ್ನ ವ್ಯಕ್ತಿತ್ವವನ್ನು ನಿರ್ಧರಿಸಬೇಕು. ನಿನ್ನ ಇಷ್ಟು ದಿನದ ಬದುಕಿನ ರೀತಿ ನೀತಿಗಳನ್ನು ಅದು ಪ್ರತಿನಿಧಿಸಬೇಕು. ನಿನ್ನ ಬದುಕಿನಲ್ಲಿ ಯಾವುದೇ ಬದಲಾವಣೆಯಾದರೂ ನಿನ್ನ ವ್ಯಕ್ತಿತ್ವ ಹಾಗೆ ಉಳಿದುಕೊಳ್ಳಬೇಕು. ಹಾಗಿದ್ದಾಗ ಮಾತ್ರ ನೀನು ಅದ್ಭುತ ಅನ್ನಿಸಿಕೊಳ್ಳುತ್ತೀಯಾ. ನಿನಗೆ ಇಷ್ಟೆಲ್ಲಾ ವಿಚಾರಗಳನ್ನು ಮತ್ತೆ ಮತ್ತೆ ಹೇಳುವುದಕ್ಕೆ ಕಾರಣ ಏನಂತಂದ್ರೆ ನಮ್ಮ ಸುತ್ತಮುತ್ತ ಅಂಧ ಅಭಿಮಾನ ಕೆಟ್ಟದ್ದನ್ನು ಸರಿ ಎಂದು ಬಿಂಬಿಸುವ ಮಟ್ಟಕ್ಕೆ ಇಳಿಯುತ್ತಿದೆ. ಅದಕ್ಕೆ ಜಾಗೃತವಾಗಿರು. ಅಪ್ಪ ಫೋನಿನಲ್ಲಿ ಇಷ್ಟೆಲ್ಲಾ ಮಾತುಗಳನ್ನು ಮತ್ತೆ ಮತ್ತೆ ಒತ್ತಿ ಹೇಳುತ್ತಿದ್ದರು. ಯಾಕೆಂದರೆ ಸುತ್ತಲಿನ ಘಟನೆಗಳು ಅವರಿಗೂ ಅರ್ಥವಾಗುತ್ತಿದೆ... 

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ