ಸ್ಟೇಟಸ್ ಕತೆಗಳು (ಭಾಗ ೯೯೬)- ಚಿಂತನೆ

ಸ್ಟೇಟಸ್ ಕತೆಗಳು (ಭಾಗ ೯೯೬)- ಚಿಂತನೆ

ಇವತ್ತು ನೆಮ್ಮದಿಯು ಅವನನ್ನು ಹುಡುಕಿಕೊಂಡು ಬಂದಿತ್ತು. ಇಷ್ಟು ದಿನಗಳವರೆಗೆ ನೆಮ್ಮದಿ ಇಲ್ಲ ಅಂತಲ್ಲ ಆದರೆ ಜವಾಬ್ದಾರಿಯೊಂದನ್ನು ನಿರ್ವಹಿಸಿದಾಗ ಅದರಲ್ಲಿ ಅಲ್ಲಲ್ಲಿ ತಪ್ಪುಗಳು ಹಾದು ಹೋಗುತ್ತಾ ಆತನಿಗೆ ತಾನು ಮಾಡಿದ ಕೆಲಸದಲ್ಲಿ ಶುದ್ಧತೆ ಇಲ್ವಲ್ಲ ಅನ್ನುವ ನೋವು ಕಾಡ್ತಾ ಇತ್ತು. ಆದರೆ ಈ ದಿನ ಆತನಿಗೆ ವಹಿಸಿದ ಜವಾಬ್ದಾರಿಯನ್ನು ತುಂಬ ಜತನದಿಂದ ಹಲವರ ಸಹಕಾರದಿಂದ ಅಚ್ಚುಕಟ್ಟಾಗಿ ನಿರ್ವಹಿಸಿದ. ನಂತರ ಆತನೊಳಗೆ ಧೈರ್ಯವೊಂದು ಗಟ್ಟಿಯಾಗಿ ಮನೆ ಮಾಡಿತ್ತು. ಯಾವುದೇ ಕೆಲಸಕ್ಕೆ ಜೊತೆಗಾರರನ್ನು ನಂಬಿಕಸ್ತರನ್ನು ಗಟ್ಟಿಯಾಗಿ ನಂಬಿಕೊಂಡ್ರೆ ಖಂಡಿತವಾಗಿಯೂ ಗೆಲುವು ನಮ್ಮದು ಅಂತ. ಹಾಗಾಗಿ ಆತ ಇವತ್ತು ಗೆಲುವಿನ ಮೆಟ್ಟಲೇರಿದ. ಇದನ್ನೊಂದಷ್ಟು ಹೊಸ ಯೋಜನೆಗಳನ್ನು ರೂಪಿಸುವ ಧೈರ್ಯವನ್ನು ತಂದುಕೊಂಡಿದ್ದ. ಎಲ್ಲದಕ್ಕೂ ಸಹಕಾರವಾದದ್ದು ಆತನ ಸುತ್ತಮುತ್ತ ನಿಂತ ನಂಬಿಕಸ್ಥರು. ಹಾಗಾಗಿ ಕೆಲಸಕ್ಕಿಳಿಯುವ ಮೊದಲು ನಮ್ಮ ಸುತ್ತ ನಮ್ಮ ಕೆಲಸಕ್ಕೆ ಸಹಕಾರ ನೀಡುವವರೋ, ಅಸಹಕಾರ ನೀಡುವವರೋ ಯಾರಿದ್ದಾರೆ ಅನ್ನೋದನ್ನ ತಿಳಿದುಕೊಳ್ಳುವುದು ಅವಶ್ಯ. ಆತ ಇಷ್ಟೆಲ್ಲ ವಿಚಾರವನ್ನು ತನ್ನ ಸಹವರ್ತಿಗಳಿಗೆ ಹೇಳ್ತಾ ಇದ್ದ ಯಾಕೆಂದರೆ ಅವರು ಹಲವು ದಿನದಿಂದ ಕಾರ್ಯವನ್ನು ಸರಿಯಾಗಿ ಮಾಡಲಾಗುತ್ತಿಲ್ಲ ಅನ್ನುವ ಯೋಚನೆಯಲ್ಲಿ ಇದ್ದರು. ಈತನಿಗೆ ಕಣ್ಣಮುಂದೆ ಉತ್ತರ ದೊರಕಿದ ಕಾರಣ ಉತ್ತರವನ್ನು ತನ್ನ ಸಹವರ್ತಿಗಳಿಗೆ ದಾಟಿಸಿಬಿಟ್ಟ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ