ಸ್ಟೇಟಸ್ ಕತೆಗಳು (ಭಾಗ ೯೯೭)- ಹಠ
ಹಠ ನಿಲ್ಲುತ್ತಿಲ್ಲ. ತನಗೆ ಬೇಕಾದನ್ನು ಪಡೆದುಕೊಳ್ಳುವವರೆಗೂ ಯಾರ ಮಾತನ್ನೂ ಕೇಳುತ್ತಿಲ್ಲ. ನೋಡಿದವರು ಹೇಳಬಹುದು ಆ ಪುಟ್ಟ ಮಗುವಿಗೆ ಏನು ಬೇಕು ಅದನ್ನು ನೀಡುವುದನ್ನು ಬಿಟ್ಟು ನೀವು ಯಾಕೆ ಹಠ ಮಾಡ್ತಾ ಇದ್ದೀರಾ? ಅಂತ. ಆದರೆ ಆ ಮಗು ಈಗ ಕೇಳುವುದನ್ನು ನೀಡಿದರೆ ಅರ್ಥ ಹಾಳಾದಂತೆಯೇ? ಮುಂದೆ ಅದರ ಎಲ್ಲಾ ಆಸೆಗಳನ್ನು ಈಡೇರಿಸ್ತಾ ಹೋದ ಹಾಗೆ ಮಗು ದಾರಿ ತಪ್ಪುವ ಎಲ್ಲ ಸಾಧ್ಯತೆಗಳು ಗಟ್ಟಿಯಾಗಿ ಇದೆ. ಯಾಕೆಂದರೆ ಮಗು ಕೇಳುತ್ತಿರುವು ತನ್ನ ವಯಸ್ಸಿಗೆ ಮೀರಿದ ಆಸೆಗಳನ್ನು. ಆ ಮಗುವಿನ ಮನಸ್ಸು ಗಟ್ಟಿಯಾಗಿ ಒಂದೇ ಕಡೆ ಸ್ಥಿರವಾಗಿ ನಿಲ್ಲುವಂತದ್ದಲ್ಲ. ಕ್ಷಣ ಕ್ಷಣಕ್ಕೆ ಹೊಸ ಹೊಸ ಆಸೆಗಳನ್ನು, ಆಲೋಚನೆಗಳನ್ನು ತುಂಬುವಂತದ್ದು. ಅದಲ್ಲದೆ ಅದರ ಮನಸ್ಸಿನೊಳಗೆ ಗಟ್ಟಿಯಾಗಿ ನಿಂತಿರುವ ವಿಚಾರ ಏನು ಅಂತ ಅಂದ್ರೆ ನಮಗೆ ಮಾತ್ರ ಎಲ್ಲ ವಿಚಾರಗಳು ತಿಳಿದಿದೆ ಉಳಿದವರಿಗೆ ಏನೂ ಗೊತ್ತಿಲ್ಲ ಅನ್ನುವ ಅಹಂ ಭಾವ ಸ್ಥಿರವಾಗಿದೆ. ಇದು ಮನೆಯವರಿಗೂ ಸಮಸ್ಯೆ ಆ ಮಗುವಿಗೂ ಸಮಸ್ಯೆ. ಮಗುವಿನ ಆಲೋಚನೆಯ ಸ್ಥಿತಿಗತಿಗಳು ಒಳ್ಳೆಯ ದಾರಿಯ ಯಾವ ಸೂಚನೆಯನ್ನೂ ನೀಡುತ್ತಿಲ್ಲ. ಇದು ಆ ತಾಯಿಗೆ ಭಯ. ಮುಂದೆ ತನ್ನ ಮಗು ಕೆಟ್ಟ ದಾರಿ ಹಿಡಿದರೆ ಜೀವನದಲ್ಲಿ ಅದ್ಭುತವಾದ ವಿವೇಚನೆ ಕಳೆದುಕೊಂಡರೆ, ಬದುಕು ಹೇಗೆ? ಅನ್ನೋದು ತಾಯಿಯ ಚಿಂತೆ. ಆದರೆ ಮಗುವಿಗೆ ಇದು ಅರ್ಥವಾಗುತ್ತಿಲ್ಲ. ಅರ್ಥ ಮಾಡಿಸುವ ಎಲ್ಲ ಮನಸ್ಸುಗಳು ಮುಂದೆ ನಿಂತರೂ ಕೂಡ ಮಗುವಿಗೆ ತನ್ನ ಆಸೆಯ ತಪ್ಪು ತಿದ್ದಿ ಹೇಳೋದು ಹೇಗೆ ಅಂತ ಗೊತ್ತಿಲ್ದೆ ಎಲ್ಲರೂ ಮೌನವಾಗಿದ್ದರೆ... ಮಗು ಇನ್ನೂ ಕೂಡ ಹಠ ಮುಂದುವರೆಸುತ್ತಾನೆ ಇದೆ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ