ಸ್ಟೇಟಸ್ ಕತೆಗಳು (ಭಾಗ ೯೯೯)- ನೆನಪು

ಸ್ಟೇಟಸ್ ಕತೆಗಳು (ಭಾಗ ೯೯೯)- ನೆನಪು

ನೆನಪುಗಳು ದಾಟಿದ್ದು ಅವರ್ಯಾರಿಗೂ ನೆನಪೇ ಆಗ್ಲಿಲ್ಲ. ಹಾಗೆ ಒಂದು ದಿನಕುಳಿತು ಎಷ್ಟು ದಿನ ಕಳೆದ ದಿನಗಳಲ್ಲ ನೆನಪಿಸಿಕೊಳ್ಳುತ್ತಿದ್ದಾರೆ. ದಾರಿಯಲ್ಲಿ ಸಾಗುವಾಗ ಮೋಸ,ಪ್ರೀತಿ, ಕರುಣೆಯ ದುಃಖ ಎಲ್ಲವೂ ಅವರ ಮಾತಿನೊಳಗೆ ಹಾದು ಹೋಗ್ತಾ ಇದೆ. ಮೊದಲ ದಿನ ಒಳಗೆ ಹೆಜ್ಜೆ ಇಟ್ಟವರಿಗೆ ಕೆಲವು ಮುಖ ಪರಿಚಯ ಬಿಟ್ಟರೆ ಇನ್ಯಾರು ಇದ್ದಾರೆ ಅನ್ನೋದೇ ತಿಳಿದಿರಲಿಲ್ಲ. ದಿನ ಕಳೆದಂತೆ ದೂರ ಇದ್ದವರು ಹತ್ತಿರವಾಗಿ ಬಾಂಧವ್ಯ ಬೆಳೆಸಿಕೊಳ್ಳುತ್ತಾರೆ. ಕಷ್ಟ ಸುಖ ಹಂಚಿಕೊಳ್ಳುತ್ತಾರೆ. ಈಗ ಎಲ್ಲರನ್ನೂ ತೊರೆದು ತಮ್ಮ ಬದುಕಿನ ಕಡೆಗೆ ಹೋಗಲೇ ಬೇಕು. ಆಗ ನೆನಪುಗಳು ಮಾತ್ರ ಸಹಾಯ ಮಾಡುತ್ತವೆ. ಆದರೆ ಮನಸು ಹಣ್ಣೀರಾಗುತ್ತದೆ. ಜೊತೆಗಿದ್ದವನನ್ನು ದೂರಮಾಡಬೇಕಲ್ಲಾ ಅನ್ನೋ ನೋವು ಕಾಡುತ್ತದೆ. ಆದರೆ ಆಗಾಗ ಬದುಕಿನ ಜವಾಬ್ದಾರಿ ಎಚ್ಚರಿಸುತ್ತದೆ. ಇನ್ನು ಹೆಚ್ಚು ಸಾಮರ್ಥ್ಯವಂತರಾಗಿದ್ದರೆ ಎಕೆಂದರೆ ಸಾಗುವ ದಾರಿ ತುಂಬಾ ದೂರ ಇದೆ... 

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ