ಸ್ಟೇಟಸ್ ಕತೆಗಳು (೫) - ನೆರಳು ಕಾಣೆಯಾಗಿದೆ

ಸ್ಟೇಟಸ್ ಕತೆಗಳು (೫) - ನೆರಳು ಕಾಣೆಯಾಗಿದೆ

ಎಷ್ಟು ಅರಸಿದರೂ ಸಿಗುತ್ತಿಲ್ಲ. ನನ್ನ ತೊರೆದು ಚಲಿಸಿದವನನ್ನ ಕರೆದು ಕೇಳೋಣವೆಂದರೆ ಎಲ್ಲಿ ಅಂತ ಹುಡುಕುವುದು . ನಿಮಗೆ ಹೇಗೆ ಹೇಳುವುದು ? "ನನ್ನ ನೆರಳು ಕಾಣೆಯಾಗಿದೆ "

ನಿಜ ಸಾರ್ ನನ್ನ ಮಾತು! ನಿಮಗೆ ನಂಬಿಕೆನೇ ಬರುತ್ತಿಲ್ಲ ಅಲ್ವಾ ?

ಬೆಳಕಿನ ಕಿರಣ ವಸ್ತುವಿನ ಅಥವಾ ಜೀವಿ ಮೇಲೆ ಬಿದ್ದರೆ ಅದರ ವಿರುದ್ಧ ದಿಕ್ಕಿಗೆ ನೆರಳು ಬೀಳೋದು ಸಾಮಾನ್ಯ. ಆದರೆ ನನ್ನ ನೆರಳು ಕಾಣುತ್ತಿಲ್ಲ. ಬಿಸಿಲಲ್ಲಿ ನಿಂತು ಕಾದು ಬೆವರಿಳಿಯಿತೇ ಹೊರತು  ನೆರಳು ಹುಟ್ಟಲಿಲ್ಲ. ಬೇರೆ ಯಾರಿಗೂ ಹೀಗಾಗಿಲ್ಲ ನನಗೆ ಮಾತ್ರ ಏಕೆ?

ಯಾಕೋ ಸಮಾಜದ ಮುಂದೆ ನಗ್ನನಾಗಿ ನಿಂತಾಗ ನನ್ನ ನೋಡುವ ದೃಷ್ಟಿಯ ತರಹ ಗಮನಿಸುತ್ತಿದ್ದಾರೆ .ಅಸಹ್ಯ ಎನಿಸುತ್ತಿದೆ. ನನ್ನ ಉಸಿರಾಟದ ಚಲನೆ ಯಥಾವತ್ತಾಗಿದೆ. ಸತ್ತರೂ ನೆರಳು ಸುಡುವವರೆಗಾದರೂ ಜೊತೆಗಿರಬೇಕಲ್ಲ. ಅಮ್ಮನ ಗರ್ಭದಿಂದ ಹೊರಬಂದ ಕ್ಷಣದಿಂದ ನನ್ನ ಒಪ್ಪಿ, ಅಪ್ಪಿಕೊಂಡು  ಹೆಜ್ಜೆಹಾಕಿದ ನೆರಳು ನನ್ನ ತೊರೆದಿದೆ ಎಂದರೆ ನಾನೇನು "ಒಪ್ಪತಕ್ಕದ "ಕೆಲಸ ಮಾಡಿದ್ದೇನೆ ಎನಿಸುತ್ತಿದೆ. ಭೌತಿಕವಾಗಿ ನಗ್ನನಾದ ಭಾವ ನನ್ನ ದೊರೆಯಬೇಕಾದರೆ, ನಾನು ತಿದ್ದಿಕೊಳ್ಳಲೇಬೇಕು. ಮತ್ತೆ ಹೆಜ್ಜೆ ಇರಿಸಲು ಅವನ ಕೂಗಿ ಕರೆಯಬೇಕು. ಬರುತ್ತಾನೆ ಎಂಬ ನಂಬಿಕೆಯೊಂದಿಗೆ ನೆರಳಿಲ್ಲದ ಬರಿದಾಗಿ ಚಲಿಸುತ್ತಿದ್ದೇನೆ.

-ಧೀರಜ್ ಬೆಳ್ಳಾರೆ

ಇಂಟರ್ನೆಟ್ ಚಿತ್ರ ಕೃಪೆ