ಸ್ಟೇಟ್ ಲೆಸ್ ಉಗ್ರವಾದಿಗಳು ಬರುವುದು ಸ್ವರ್ಗದಿಂದ

ಸ್ಟೇಟ್ ಲೆಸ್ ಉಗ್ರವಾದಿಗಳು ಬರುವುದು ಸ್ವರ್ಗದಿಂದ

ಬರಹ

(ನಗೆ ನಗಾರಿ ನೆರೆ ಹೊರೆಬ್ಯೂರೋ)

ದೊಡ್ಡಣ್ಣನೊಂದಿಗೆ ಇದ್ದರೆ ತಾನು ಉದ್ಧಾರವಾಗುವುದಿಲ್ಲ. ಸದಾ ಆತ ತೊಟ್ಟು ಬಿಟ್ಟ ಅಂಗಿಯನ್ನು, ಆತ ಬಳಸಿ ಬಿಟ್ಟ ಪಾಠಿ ಚೀಲವನ್ನು ಸಹಿಸಿಕೊಳ್ಳುತ್ತಾ ಎರಡನೆಯ ದರ್ಜೆಯವನಾಗಿ ಬದುಕಬೇಕು. ನಾನು ಬೇರೆಯಾಗಿ ಹೋಗುತ್ತೇನೆ. ನನ್ನ ಬದುಕನ್ನು ನಾನು ಕಟ್ಟಿಕೊಳ್ಳುತ್ತೇನೆ. ನನ್ನ ಕಾಲುಗಳ ಮೇಲೆ ನಾನು ನಿಲ್ಲುತ್ತೇನೆ, ಯಾರ ಹಂಗೂ ಇಲ್ಲದೆ ಬೆಳೆದು ನಿಂತು ನಾನು ಜಗತ್ತಿಗೆ ಮಾದರಿಯಾಗುತ್ತೇನೆ ಎಂದು ತನ್ನನ್ನು ಭಾರತವೆಂಬ ದೇಶದಿಂದ ಬೇರ್ಪಡಿಸಿಕೊಂಡು ಪಾಕ್(ಪವಿತ್ರ)ಸ್ಥಾನ್(ನೆಲ) ಎಂದು ಕರೆದುಕೊಂಡ ದೇಶದಲ್ಲಿ ಮಣ್ಣಿನ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿರುವುದು ನಮ್ಮ ನಾಡಿನ ಮಣ್ಣಿನ ಮಕ್ಕಳು, ದತ್ತು ಮಕ್ಕಳು, ಸಾಕು ಮಕ್ಕಳು, ಕಳ್ನನ್ಮಕ್ಕಳ ಗಮನವನ್ನೆಲ್ಲಾ ಸೆಳೆದಿದೆ.


 

ಭಾರತದಲ್ಲಿ
ಭಯೋತ್ಪಾದಕ ಕೃತ್ಯಗಳನ್ನು ನಡೆಸುತ್ತಿರುವವರು ಸ್ಟೇಟ್ ಲೆಸ್ ಮನುಷ್ಯರು ಎಂದು
ಪಾಕಿಸ್ತಾನದ ಪ್ರಧಾನಿ ಹಾಗೂ ಅದರ ದಿವಂಗತ ಮಾಜಿ ಪ್ರಧಾನಿಯ ವಿಧುರ
ರಾಷ್ಟ್ರ್ಯಾಧ್ಯಕ್ಷರು ಗ್ರಾಮಾಫೋನು ಹಚ್ಚಿ ಹಾಡಿದ್ದನ್ನು ತರಾಟೆಗೆ ತೆಗೆದುಕೊಂಡ ನಮ್ಮ
ದೇಶದ ವಿದೇಶಾಂಗ ವ್ಯವಹಾರ ಸಚಿವರು
ಸ್ಟೇಟ್ ಲೆಸ್ ಮನುಷ್ಯರು ಸ್ವರ್ಗದಿಂದ ಇಳಿದು ಬರುವುದಕ್ಕೆ ಸಾಧ್ಯವೇ?’ ಎಂದು ಕೇಳಿದ ಪ್ರಶ್ನೆಗೆ ಉತ್ತರ ದೊರಕದೆ ಪಾಕಿಸ್ತಾನದ ಸಮಸ್ತ ಗ್ರಾಮಾಫೋನುಗಳು ಬಾಯ್ಮುಚ್ಚಿಕೊಂಡಿದ್ದಾಗ ಸಾಮ್ರಾಟರು ಹೌದು ಅವರು ಸ್ವರ್ಗದಿಂದದಲೇ ಬರುವುದು…’ ಎಂದು ವಾದಿಸಿ ಅಂತರಾಷ್ಟ್ರೀಯ ಮಟ್ಟದ ಮಾಧ್ಯಮಗಳಲ್ಲಿ ಸುದ್ದಿ ಮಾಡಿದ್ದರು. ಭೂಮಿಯ ಮೇಲೆ ಪವಿತ್ರವಾದ ನೆಲ ಎಂದು ತನ್ನ ತಾನೇ ಕರೆದುಕೊಂಡಿರುವ ನಮ್ಮ ನೆರೆಯ ಹೊರೆಯ ರಾಷ್ಟ್ರದ ಮುಷ್ಟಿಯಲ್ಲಿರುವ ಭೂಲೋಕದ ಸ್ವರ್ಗ ಕಾಶ್ಮೀರದ ಮಣ್ಣಿನಿಂದಲೇ ಈ ಸ್ಟೇಟ್ ಲೆಸ್ ಮನುಷ್ಯರು ಭಾರತಕ್ಕೆ ಬರುತ್ತಿರುವುದು ಎಂದು ಅವರು ವಿವರಿಸಿ ಹೇಳಿದ್ದನ್ನು ಗ್ರಾಮಾಫೋನುಗಳು ರೆಕಾರ್ಡು ಮಾಡಿಕೊಂಡಿವೆ.


 

pakistan_alqaeda_terror



 

ಪಾಕಿಸ್ತಾನವೆಂಬ ಪವಿತ್ರ ನೆಲ ತನ್ನ ರಾಷ್ಟ್ರದ ಅಧ್ಯಕ್ಷರನ್ನು, ಪ್ರಧಾನಿಯನ್ನು
ಪಡೆಯುವುದಕ್ಕೆ ಎಷ್ಟೆಲ್ಲಾ ತ್ಯಾಗಗಳನ್ನು ಮಾಡಬೇಕಾಯಿತು ಎಂಬುದು ಇತಿಹಾಸವನ್ನು
ಅರೆದುಕುಡಿದು ಅಜೀರ್ಣದಿಂದ ಬಳಲುತ್ತಿರುವವರಿಗೆಲ್ಲಾ ತಿಳಿದಿರುವ ಸಂಗತಿ
. ಎಷ್ಟೋ ವೇಳೆ ಆ ದೇಶ ತನ್ನ ಹಾಲಿ ಅಧ್ಯಕ್ಷ, ಪ್ರಧಾನಿಯನ್ನೇ ಬಲಿದಾನ ಮಾಡಬೇಕಾಯಿತು. ಈ ನೆಲದ ಮಹತ್ವ ಸಾಮಾನ್ಯವಾದದ್ದಲ್ಲ. ಈ ನೆಲ ಸ್ಪೂರ್ತಿಯ ಸೆಲೆ. ಜಗತ್ತಿನ
ಮೂಲೆ ಮೂಲೆಯಲ್ಲಿ ಬೆನ್ನ ಹಿಂದಿರುವ ತೊಗಲಿನ ಚೀಲದಲ್ಲಿ ಅಡಗಿಸಿಟ್ಟುಕೊಂಡ ಬಾಂಬನ್ನು
ನೇವರಿಸುತ್ತಾ ಕನವರಿಸುವ ಎಲ್ಲಾ ಜೀವಂತ ಬಾಂಬುಗಳಿಗೆ ಏಕೈಕ ಸ್ಪೂರ್ತಿಯ ಸೆಲೆಯಾಗಿ
ಪಾಕಿಸ್ತಾನ ಕಾರ್ಯ ನಿರ್ವಹಿಸುತ್ತಿದೆ
. ಇಡೀ ಜಗತ್ತಿಗೆ ತೈಲವನ್ನು ಪೂರೈಸುತ್ತೇವೆ ಎಂದು ಹುಮ್ಮಸ್ಸಿನಿಂದ ಹೊರಟು ಅರ್ಧ ದಾರಿಯಲ್ಲಿ ದಣಿದು ಕುಳಿತ ಅರಬ್ ದೇಶಗಳು, ವಿಶ್ವದ ಪ್ರತಿಯೊಂದು ದೇಶಕ್ಕೂ ಕಂಪ್ಯೂಟರನ್ನು ಒದಗಿಸುತ್ತೇವೆ ಎಂದು ಪ್ರತಿಜ್ಞೆ ಮಾಡಿ ಹೊರಟ ಅಮೇರಿಕಾದಂತಹ ದೇಶಗಳು, ಜಗತ್ತಿಗೆ ಶಾಂತಿಯನ್ನು ಬೋಧಿಸುತ್ತೇವೆ ಎಂದು ಹೊರಟು ಕೈಸೋತ ಶಾಂತಿ ಪ್ರಿಯ ಆಲಿಪ್ತ ರಾಷ್ಟ್ರಗಳು ಪಾಕಿಸ್ತಾನವನ್ನು ಅಚ್ಚರಿಯ ಕಣ್ಣುಗಳಿಂದ ನೋಡುತ್ತಿವೆ. ಅಂಗೈ ಅಗಲದ ಪುಟ್ಟ ದೇಶ ಇಡೀ ಜಗತ್ತಿಗೆ ಬೇಕಾಗುವಷ್ಟು ಮಾತ್ರವಲ್ಲದೆ ಜಗತ್ತು ಸಾಕು ಸಾಕೆಂದು ಬೇಡಿಕೊಳ್ಳುವಷ್ಟು ಭಯೋತ್ಪಾದಕರನ್ನು, ಜಿಹಾದಿಗಳನ್ನು, ಮೆದುಳು ತೊಳೆಸಿಕೊಂಡ ಪಡ್ಡೆಗಳನ್ನು, ಕಲಾಶ್ನಿಕೋವ್ ವೀರರನ್ನು, ಮಾನವ ಬಾಂಬುಗಳನ್ನು, ಉನ್ಮತ್ತ ಏರೋಪ್ಲೇನುಗಳನ್ನು ಸರಬರಾಜು ಮಾಡುತ್ತಲೇ ಇದೆ. ಅದಕ್ಕೆ ಸುಸ್ತೆಂಬುದು ಇಲ್ಲವೇ ಇಲ್ಲ. ಜಗತ್ತಿನ ಎಲ್ಲಾ ರಾಷ್ಟ್ರಗಳಿಗೂ ಭಯೋತ್ಪಾದನೆಯನ್ನು ಇಷ್ಟು ವರ್ಷಗಳ ಕಾಲ ಸಮರ್ಪಕವಾಗಿ ರಫ್ತು ಮಾಡಿರುವ, ಮಾಡುತ್ತಿರುವ
ಪಾಕಿಸ್ತಾನದ ಗುಣವಿಶೇಷಗಳನ್ನು ಅಧ್ಯಯನ ಮಾಡಲು ನಮ್ಮ ದೇಶದಲ್ಲಿ ಕೆಲಸ ಸಿಕ್ಕದ ಎಂಬಿಎ
ಪದವೀಧರರನ್ನು ಅಟ್ಟಬಹುದು ಎಂದು ಸಾಮ್ರಾಟರು ಶಿಫಾರಸ್ಸು ಮಾಡಿರುವುದು ಅಂತರಾಷ್ಟ್ರೀಯ
ಮಾಧ್ಯಮದಲ್ಲಿ ವರದಿಯಾಗಿದೆ
.


 

ತನ್ನ
ದೇಶದ ಮಣ್ಣಿನಿಂದ ಯಾವೊಬ್ಬ ಭಯೋತ್ಪಾದಕನೂ ಹುಟ್ಟಲು ಸಾಧ್ಯವಿಲ್ಲ ಎಂದು ಪಾಕಿಸ್ತಾನದ
ಅಧ್ಯಕ್ಷರು ತುಂಬು ಆತ್ಮವಿಶ್ವಾಸದಿಂದ ನೀಡಿರುವ ಹೇಳಿಕೆ ಜಗತ್ತಿನಾದ್ಯಂತ
ಅಪಹಾಸ್ಯವನ್ನಲದೇ ಬೇರೇನನ್ನು ಹುಟ್ಟು ಹಾಕದಿದ್ದರೂ ನಮ್ಮ ನಾಡಿನಲ್ಲಿ ಥರೇವಾರಿ
ಪ್ರತಿಕ್ರಿಯೆಗಳನ್ನು ಪಡೆದಿರುವುದು ಅಚ್ಚರಿ ಉಂಟು ಮಾಡಿದೆ
. ನಮ್ಮ ನಾಡಿನ ಏಕೈಕ ಮಣ್ಣಿನ ಮಗನಾದ ವೇದನೇ ಗೌಡರು ನಗೆ ನಗಾರಿ ಪ್ರತಿನಿಧಿಯೊಂದಿಗೆ ಮಾತನಾಡುತ್ತಾ ಹೀಗೆಂದರು: “ಪಾಕಿಸ್ತಾನದ ನೆಲದಿಂದ ಭಯೋತ್ಪಾದಕ ಹುಟ್ಟುತ್ತಾನೋ ಇಲ್ಲವೋ ಎಂಬುದು ನನಗೆ ಸಂಬಂಧಿಸಿದ ಸಂಗತಿಯಲ್ಲ. ಅದರ ಬಗ್ಗೆ ನಮ್ಮ ಪಕ್ಷದ ನಿಲುವನ್ನು ಪ್ರಕಟ ಪಡಿಸುವುದಕ್ಕೆ ಇನ್ನೂ ಲೋಕ ಸಭೆ ಚುನಾವಣೆಯವರೆಗೆ ಕಾಯಬೇಕು. ಆದರೆ ಇಲ್ಲಿ ಮಣ್ಣಿನ ವಿಚಾರ ಬಂದಿರುವುದರಿಂದ ಹೇಳುತ್ತಿದ್ದೇನೆ, ಪಾಕಿಸ್ತಾನದ ಮಣ್ಣಿಗಿಂತ ಕರ್ನಾಟಕದ ಮಣ್ಣು ವಿಶಿಷ್ಟ. ಏಕೆಂದರೆ ಈ ಮಣ್ಣು ನನ್ನಂಥ ಮಗನನ್ನು ಹುಟ್ಟುಹಾಕಿದೆ.”

 

ಗೌಡರ ಹೇಳಿಕೆಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ನೂತನ ಡಾಕ್ಟರ್ಬಿಎಸ್‌ವೈರವರು ಮಣ್ಣು ಮಸಿ ಎಲ್ಲಾ ನನ್ನ ಹತ್ತಿರ ತರಬೇಡಿ ಹೊಸ ಸಫಾರಿ ಕೋಟು ಮಲಿನವಾಗುತ್ತದೆ ಎಂದು ಎಚ್ಚರಿಸಿದರು.

 

(ಚಿತ್ರ ಕೃಪೆ: ಗೂಗಲ್)