ಸ್ತ್ರೀಯರಲ್ಲಿ ಏನು ವಿಷೇಶತೆ ಇದೆ..???

ಸ್ತ್ರೀಯರಲ್ಲಿ ಏನು ವಿಷೇಶತೆ ಇದೆ..???

ಸ್ತ್ರೀಯರಲ್ಲಿ  ಏನು ವಿಷೇಶತೆ ಇದೆ..???

 

ಗಂಡ ಹೆಂಡತಿ ಟೀವಿ ನೋಡುತ್ತಾ ಇದ್ದರು.

ಪತ್ನಿ ಹೇಳಿದಳು

"ನನಗೆ ಸಾಕಾಯ್ತು, ತುಂಬಾನೇ ಹೊತ್ತಾಯ್ತಲ್ಲ, ನಾನಿನ್ನು ಮಲಗಲು ಹೊರಡುವೆ".

ಅವಳೆದ್ದು ಅಡುಗೆ ಮನೆಗೆ ಹೋಗಿ ಬೆಳಗಿನ ತಿಂಡಿಗಾಗಿ ಅರೆಯುವ ಕಲ್ಲಿನಲ್ಲಿ ಅಕ್ಕಿ ಹಾಕಿ ರುಬ್ಬಲು ಇಟ್ಟಳು.

ಮತ್ತೆ ಅಲ್ಲಿಂದ ಸಿಂಕನಲ್ಲಿ ಹಾಕಿದ್ದ ಊಟದ ತಟ್ಟೆಗಳು ಪಾತ್ರಗಳನ್ನು ತೊಳೆದಳು. ಕಾಫಿ ಫಿಲ್ಟರ್ನಲ್ಲಿ ಕಾಫಿ ಸುರಿದು ಬಿಸಿ ನೀರು ಮಾಡಿ ಅದಕ್ಕೆ ಹಾಕಿದಳು. ಫ್ರಿಡ್ಜ್ ನಿಂದ ತರಕಾರಿ ತೆಗೆದು ಹೊರಗಿಟ್ಟಳು. ಸಕ್ಕರೆ ಕರಡಿಗೆ ಖಾಲಿಯಾದುದನ್ನು ನೋಡಿ ಅದಕ್ಕೆ ಸಕ್ಕರೆ ತುಂಬಿ ಚಮಚ ಅದರಲ್ಲಿಟ್ಟಳು.

ನಾಳೆಯ ತನ್ನ ಹಾಗೂ ತನ್ನ ಪತಿಯ ಧಿರುಸನ್ನು  ಅದರ ಹರಿದ ಗುಂಡಿಯನ್ನು ಹೊಲಿದು  ಇಸ್ತ್ರಿ ಮಾಡಿಟ್ಟಳು. ಬೆಳಿಗ್ಗೆ ಬೇಕಾದ ಟವೆಲ್, ಕರವಸ್ತ್ರ ಪಾಕೀಟು ಎಲ್ಲವನ್ನೂ ಸಿದ್ಧ ಮಾಡಿಟ್ಟಳು.

ಪಕ್ಕದ ನೆಲದಲ್ಲಿ ಬಿದ್ದ ಪೇಪರ್ ಎತ್ತಿ ಸೆಲ್ನಲ್ಲಿಟ್ಟು, ಕೆಳಗೆ ಅನಾಥವಾಗಿ ಬಿದ್ದಿದ್ದ ದಿಂಬನ್ನೆತ್ತಿ ಸೋಫ಼್ಹಾದಲ್ಲಿಟ್ಟಳು.  ಬಟ್ಟೇ ತೊಳೆಯುವ ಯಂತ್ರದಿಂದ ಬಟ್ಟೆಯೆಲ್ಲವನ್ನೆತ್ತಿ ಹಿಂಡಿ ತಂತಿಯಲ್ಲಿ ಒಣಗ ಹಾಕಿದಳು.

ಮೈ ಮುರಿಯುತ್ತಾ ಶಯನ ಕೋಣೆಯ ಕಡೆ ಹೆಜ್ಜೆ ಹಾಕಿದಳು.

ಅಲ್ಲೇ ನಿಂತು ಅಲ್ಲೇ ಮೇಜಿನ ಮೇಲಿದ್ದ ಮಗನ ಡೈರಿಯನ್ನೆತ್ತಿ ಅದರಲ್ಲೊಂದು ಕಾಗದವನ್ನಿರಿಸಿದಳು ಅದು ಆತನ ರಜೆ ಅರ್ಜಿ, ಮಾರನೆಯ ದಿನ ಅವನ ಟೀಚರಿಗೆ ಕೊಡಲೇ ಬೇಕು.

ತನ್ನ ಗೆಳತಿಯೊಬ್ಬಳಿಗೆ ಹುಟ್ಟು ಹಬ್ಬದ ಕಾರ್ಡ್ ನಲ್ಲಿ ಹಾರೈಕೆ ಬರೆದು ತೆಗೆದಿಟ್ಟಳು. ಮಗನ ತಿಂಗಳ ಫೀಸನ್ನು ಮರೆಯದೇ ಪೈಸೆ ಪೈಸೆ ಸಹಾ ಲೆಕ್ಕ ಮಾಡಿ ಎತ್ತಿ ಅವನ ಸ್ಕೂಲ್ ಬ್ಯಾಗ್ ಗೆ ಹಾಕಿದಳು.

ನಾಳೆ ಕಟ್ಟ ಬೇಕಾದ ಕ್ರೆಡಿಟ್ ಕಾರ್ಡ್ ಚೆಕ್ ಬರೆದು ಅದಕ್ಕೆ ರುಜು ಹಾಕಿ ತನ್ನ ಪರ್ಸ್ ನಲ್ಲಿಟ್ಟಳು.

ರುಬ್ಬುತ್ತಿದ್ದ ಕಲ್ಲನ್ನು ನಿಲ್ಲಿಸಿ ಹಿಟ್ಟನ್ನು ಒಂದು ಪಾತ್ರೆಗೆ ಸುರುವಿ ಸ್ವಚ್ಚ ಮಾಡಿಟ್ಟಳು. ಮುಖ ತೊಳೆದು ಹಲ್ಲು ತಿಕ್ಕಿದಳು

ಆಗಲೇ ಪತಿರಾಯ ಕರೆದ " ನಾನೇನೋ ನೀನು ಮಲಗಲು ಹೊರಟೆ ಅಂತ ತಿಳಿದಿದ್ದೆ"

"ಹೌದು ಈಗ ಹೋಗುತ್ತಿದ್ದೇನೆ", ಉತ್ತರಿಸಿದಳವಳು.

ಬೆಕ್ಕಿಗೆ, ನಾಯಿಗೆ  ಪಿಡಿಗ್ರೀ ತಿಂಡಿಗಳನ್ನು ಅವುಗಳ ತಟ್ಟೆಯಲ್ಲಿ ತುಂಬಿಸಿಟ್ಟಳು, ಪಕ್ಕದ ಬೌಲ್ ನಲ್ಲಿ ನೀರನ್ನೂ. 

ಹೊರಗೆ ಕಾರಿನ ಗಾಜುಗಳೆಲ್ಲವೂ ಸರಿಯಾಗಿ ಮೇಲೇರಿಸಿದ್ದವೇ ಎಂದು ನೋಡಿ, ಹೊರಗೆ ಒಣಗಿಸಿದ್ದ ಬಟ್ಟೆಗಳನ್ನು ಒಳ ತಂದಿಟ್ಟು ಹೊರ ಬಾಗಿಲು  ಹಾಕುತ್ತಾ ಭದ್ರವೇ ಎಂದು ಪರೀಶೀಲಿಸಿದಳು. 

ಮಕ್ಕಳ ಕೋಣೆಗೆ ಬಂದು ಅವಕ್ಕೆ ಸರಿಯಾಗಿ ಹೊದೆಸಿದಳು, ಪಕ್ಕದಲ್ಲೆಲ್ಲಾ ನೆಲದಲ್ಲಿ ಬಿಸುಡಿದ್ದ ಕಾಲುಚೀಲ, ಪುಸ್ತಕಗಳನ್ನೆತ್ತಿ ಅವವುಗಳ ಜಾಗದಲ್ಲಿಟ್ಟು, ಅರೆ ನಿದ್ದೆಯಲ್ಲಿ ಎಚ್ಚರಾದ ಮಗುವನ್ನು ತಟ್ಟಿ ಮುದ್ದು ಮಾಡಿ ಮಲಗಿಸಿದಳು.

ಒಳ ತಂದಿಟ್ಟ ಬಟ್ಟೆಯನ್ನು ಮಡಚಿಟ್ಟು, ಮಕ್ಕಳ  ನಾಳೆಯ ದಿರುಸನ್ನೂ ಇಸ್ತ್ರಿ ಹಾಕಿ ಇಟ್ಟಳು.

 

ತನ್ನ ರೂಮಿನಲ್ಲಿ ಇವತ್ತಿನ ತನ್ನ ಎಲ್ಲಾ ಕೆಲಸಗಳೂ ಮುಗಿದವೇ, ಯಾವುವಾದರೂ ಬಾಕಿ ಇವೆಯೇ ಎಂದು ಬೋರ್ಡ್ ನೋಡಿ ಪರಿಶೀಲಿಸಿದಳು.

ನಂತರ ಕುಳಿತು ಆ ದಿನದ ಮನೆಯ ಖರ್ಚು ವಿವರಗಳನ್ನು ಡೈರಿಯಲ್ಲಿ ಬರೆದಿಟ್ಟಳು.

 

ಅಷ್ಟಾಗುವಾಗ ಗಂಡ ಟಿ ವಿ ಯನ್ನು ಬಂದ್ ಮಾಡಿ’ ನಾನು ಮಲಗಲು ಹೋಗುತ್ತಿದ್ದೇನೆ ’ ಎಂದು ಯಾರನ್ನೂ ಉದ್ದೇಶಿಸದೇ ಹೇಳಿ ಅಂತೆಯೇ ಮಾಡಿದ ಕೂಡಾ.

 

ಇದರಲ್ಲೇನಾದರೂ ವಿಶೇಷ ಕಂಡಿರಾ..?

ಇದನ್ನ ವಿಶೇಷವಾದ ಸ್ತ್ರೀಯರಿಗೆ ರವಾನಿಸಿ ಅವರು ಇದಕ್ಕೆ ಅರ್ಹರು

ಇದನ್ನು ಆದಷ್ಟು ಗಂಡಸರಿಗೂ ರವಾನಿಸಿ, ಅವರೂ ತಿಳಿದುಕೊಳ್ಳಲಿ ಯಾಕೆ ತಮ್ಮ ಹೆಂಗಸರು ವಿಶಿಷ್ಟ  ವಿಶೇಷ ಎಂದು.

 

Comments

Submitted by makara Sun, 07/28/2013 - 20:45

ಗೋಪೀನಾಥ ಸ್ತ್ರೀಯರ ಕುರಿತಾದ ಒಳ್ಳೆಯ ಬರಹ. ಸ್ತ್ರೀಯರು ಮಲ್ಟಿ ಟಾಸ್ಕಿಂಗ್ - ಏಕಕಾಲಕ್ಕೆ ಅನೇಕ ಕಾರ್ಯಗಳನ್ನು ತಾಳ್ಮೆಯಿಂದ ನಿರ್ವಹಿಸಬಲ್ಲ ಚತುರೆಯರು. ಗಂಡಸರು ಒಂದು ಕಾಲಕ್ಕೇ ಕೇವಲ ಒಂದೇ ಕೆಲಸ ಮಾಡಬಲ್ಲ ತಾಳ್ಮೆಯಿಲ್ಲದ ಸಿಡುಕರು :( ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ
Submitted by makara Sun, 07/28/2013 - 20:47

In reply to by makara

ಮೇಲಿನ ಪ್ರತಿಕ್ರಿಯೆಯಲ್ಲಿ ಗೋಪೀನಾಥ ಸರ್, ಎನ್ನುವಲ್ಲಿ ಕೇವಲ ಗೋಪೀನಾಥ ಎಂದು ತಪ್ಪಾಗಿ ಅಚ್ಚಾಗಿದೆ; ಅದಕ್ಕಾಗಿ ಕ್ಷಮೆಯಿರಲಿ.
Submitted by gopinatha Tue, 07/30/2013 - 18:46

In reply to by makara

ಏನೂ ತೊಂದರೆಯಿಲ್ಲ‌, ಮಕರ‌ ಅವರೇ, ಭಾವ‌ ಮುಖ್ಯ‌, ನಿಮ್ಮ‌ ಪ್ರೋತ್ಸಾಹನೆಯ‌ ಮ್ಮೇಚ್ಛ್ಛುಚ್ಗೆಉಗ್ಗೇಗೆ ನನ್ನಿ
Submitted by ಗಣೇಶ Sun, 07/28/2013 - 21:04

ಅಷ್ಟಾಗುವಾಗ ಗಂಡ ಟಿ ವಿ ಯನ್ನು ಬಂದ್ ಮಾಡಿ’ ನಾನು ಮಲಗಲು ಹೋಗುತ್ತಿದ್ದೇನೆ ’ ಎಂದು ಯಾರನ್ನೂ ಉದ್ದೇಶಿಸದೇ ಹೇಳಿ ಅಂತೆಯೇ ಮಾಡಿದ ಕೂಡಾ. ಇದರಲ್ಲೇನಾದರೂ ವಿಶೇಷ ಕಂಡಿರಾ..? ಕಂಡಿದ್ದೇನೆ. ಟಿ.ವಿ ಮುಂದೇನೇ ಮಲಗಲಿಲ್ಲವಲ್ಲ. " ಏಳ್ರೀ..ಹಾಸಿಗೆಗೆ ಹೋಗಿ ಮಲಗಿಕೊಳ್ಳಿ" ಎಂದು ಗಂಡನ ಬಳಿ ದಮ್ಮಯ್ಯ ಹಾಕುವ ಕೆಲಸ ಉಳಿಸಿದ.:)
Submitted by gopinatha Tue, 07/30/2013 - 18:48

In reply to by ಗಣೇಶ

ಇಲ್ಲ‌, ಇಲ್ಲಿ ಹಾಗಾಗಲಿಲ್ಲ‌ ನಿಜ‌, ಕೆಲವೊಮ್ಮೆ ನೀವು ಅಂದ‌ ಹಾಗೇ ಟಿ ವಿ ಯ‌ ಮುಂದೇನೇ ಮಲಗಲೂ ಬಹುದು, ಉದಾ: ಚುನಾವಣೆ, ಕ್ರಿಕೆಟ್...ಇತ್ಯಾದಿ ಇತ್ಯಾದಿ. ಆಗಲೂ ಇವರು ತಮ್ಮ‌ ಕೆಲಸ‌ ತಾವು ಮುಂದುವರಿಸಿಕೊಂಡು ಹೋಗುತ್ತಾರೆ. ಈ ಲೇಖನ‌ ಅಂತವರಿಗೆ ಮೀಸಲು. ನಿಮಗೆ...?
Submitted by bhalle Mon, 07/29/2013 - 21:35

ತಾನು ಮಲಗುತ್ತೇನೆ ಎಂದು ಯಾರನ್ನೋ ಉದ್ದೇಶಿಸಿ ಯಾಕೆ ನುಡಿದ ಅಂದರೆ ಅವನಿಗೆ ಸಿಟ್ಟು ಬಂದಿತ್ತು ... ಹೆಂಡತಿ ಟಿ.ವಿ ಬಂದ್ ಮಾಡುವ ಕೆಲಸ ಅವನಿಗೇ ಬಿಟ್ಟಳು ಎಂದು ...
Submitted by RAMAMOHANA Tue, 07/30/2013 - 12:16

In reply to by bhalle

ಸಾಕು ಸಾಕು _ ಹೆಂಡ್ತೀರ್ನ‌ ಹೊಗಳಿ ಅಟ್ಟಕ್ಕೆ ಏರಿಸೋ ಕೆಲ್ಸ _ ಎಷ್ಟೇ ಹೊಗ್ಳಿದ್ರೂ _ ನಮ್ಮಿಂದ‌ ಮಾಡ್ಸೋ ಕೆಲ್ಸ ಏನೇನೂ ಕಡ್ಮೆ ಆಗೋಲ್ಲ ರಾಯ್ರೆ........ ಗಣೇಶ್ ಜಿನ ಕೇಳಿ ಹೇಳ್ತರೆ. ಉಳ್ದಿರೋ ಬಾಕಿ ಕೆಲ್ಸ ನಾವೇ ಮಾಡ್ಬೇಕು ಉಷ್ ಅಪ್ಪ _ ಬರ್ತೀನಿ. ಚೆನ್ನಾಗಿದೆ ರಾಯ್ರೆ ಧನ್ಯವಾದಗಳು. ರಾಮೋ.
Submitted by gopinatha Tue, 07/30/2013 - 18:53

In reply to by RAMAMOHANA

ನಮ್ಮ ನಮ್ಮ ಕೆಲಸ ಮಾಡಬೇಕಾದರೆ ರಾಮೋ ಅವರೇ ಈ ಕೆಲ್ಸವೂ ಮಾಡಲೇ ಬೇಕು. ಹೊರಗಡೆ ಕೂಡಾ ಇದೇ ಕೆಲ್ಸ ಮಾಡುತ್ತೇವಲ್ಲ. ದೂರ ಹೋದವರು ಪತ್ತೆನೇ ಇಲ್ಲ ಮಾಹಾರಾಯರೇ ನೀವು.. ಮೆಚ್ಚಿ ಪ್ರತಿಕ್ರಯಿಸಿದ ಎಲ್ಲರಿಗೂ ನನ್ನಿ
Submitted by ಗಣೇಶ Wed, 07/31/2013 - 23:22

In reply to by RAMAMOHANA

ಉಷ್ ಅಪ್ಪ _ ಬರ್ತೀನಿ. :) :) ರಾಮಮೋಹನರೆ, ರಾಯ್ರು ಸತ್ಯ ಹೇಳುತ್ತಿಲ್ಲ ಅಂತ ಡೌಟು ಇತ್ತು. ಈಗ ಅರ್ಧಸತ್ಯ ಹೊರಬಿಟ್ಟಿದ್ದಾರೆ, ತಮ್ಮ "ಜತೆಯೋದು ಮತ್ತು ಗಂಡಸರ ಅಡುಗೆ" ಲೇಖನದಲ್ಲಿ.. :)
Submitted by gopinatha Thu, 08/01/2013 - 16:57

In reply to by ಗಣೇಶ

ಗಣೇಶರೇ ನಿಮಗೆ ಮುಂದೆ ಮಾತ್ರ ಕಾಣ್ಸತ್ತೆ ಅಂದ್ಕೊಂಡಿದ್ದೆ ತಪ್ಪಾಯ್ತು, ಮುಂದಿನ ಲೇಖ್ಹನ ಓದಿ ಪುನಃ ಹಿಂದೆ ಬಂದು ಇಲ್ಲೇನೋ ಹೊಗೆ ಹಾಕ್ಸಿದ್ದೀರಾ.. ಎಂಚಿನು ಮಾರಾಯರೇ..??
Submitted by gopinatha Tue, 07/30/2013 - 18:51

In reply to by bhalle

ಹೌದು ಭಲ್ಲೆಯವರೇ ಈ ಕೊನೆಯದಾಗಿ ಉಳಿಯುವ ಕೆಲಸದ ಕಥೆ ಬೇರೆಯೇ. ಉದಾ, ಕೊನೆಯಲ್ಲಿ ಬಂದವರು ಲೈಟು ಆರಿಸಬೇಕು, ಟೀ ವಿ ಬಂದು ಮಾಡಬೇಕು ಇತ್ಯಾದಿ.. ಕೆಲವರಿ ಆರಿಸಬೇಕಾಗುತ್ತದಲ್ಲ ಅಂತ ಮೊದಲು ನಿದ್ರಿಸುವವರೂ ಇದ್ದಾರೆನ್ನಿ.
Submitted by nageshamysore Thu, 08/01/2013 - 01:38

ಸ್ತ್ರೀಯರು ಮಲ್ಟಿ ಟಾಸ್ಕಿಂಗ್ ಚತುರರು, ಪುರುಷರು 'ಮಲ್ಟಿ ಚಾನಲ್' ಚತುರರು - ಕೈಗೆ ಟೀವಿ ರಿಮೋಟಿಟ್ಟು ನೋಡಿ ... ಗೋಪಿನಾಥರೆ ಒಂದು ಸಣ್ಣ ಟಿಪ್ಸ್ - ಎರಡನೆ ಲೋಟ ಕಾಫಿ ಬೇಕಾದಾಗ ಬಳಸಲು (ಎಲ್ಲಾ ವನಿತೆಯರಲ್ಲೂ ಕೆಲಸ ಮಾಡುವುದೆಂದು ಗ್ಯಾರಂಟಿ ಕೊಡಲಾಗದಿದ್ದರೂ) :-) ಹೇಗೆ ಬಣ್ಣಿಸಲಿ ನಿನ ಮನೆ ವಾರ್ತೆ ಕೌಶಲವ ವನಿತೆ ಕುಡಿದ ಕಾಫಿ ಲೋಟ ಎತ್ತಿಡಲು ನನಗಾಗದ ಮಾತೆ ಎತ್ತಿ ಗಲಬರಿಸಿ ತೊಳೆದು ಜೋಡಿಸಿಟ್ಟುಬಿಡೊ ಕವಿತೆ ನಿನ ಸಿದ್ದಿಗೆ ಶರಣು ಮತ್ತೊಂದು ಲೋಟ ಕೊಡು ಮತ್ತೆ!
Submitted by gopinatha Thu, 08/01/2013 - 16:59

In reply to by nageshamysore

ನಿಜ ನಾಗೇಶರೇ ನಿಮ್ಮ ಮಾತು ನಿಜ ನಮಗೇನಾದರು ಬೇಕಾದಲ್ಲಿ ನೀವು ಹೇಳಿದ ಉದಾಹರಣೆಯನ್ನು ಉಪಯೋಗಿಸಿಕೊಳ್ಳಬಹುದೆನ್ನಿಸುತ್ತಿದೆ. ನಿಮ್ಮ ಅನಿಸಿಕೆ ಮೆಚ್ಚುಗೆ ಹಾಗೂ ಸಲಹೆಗೆ ನಮೋ ನಮಃ