ಸ್ತ್ರೀಯರಲ್ಲಿ ಏನು ವಿಷೇಶತೆ ಇದೆ..???
ಸ್ತ್ರೀಯರಲ್ಲಿ ಏನು ವಿಷೇಶತೆ ಇದೆ..???
ಗಂಡ ಹೆಂಡತಿ ಟೀವಿ ನೋಡುತ್ತಾ ಇದ್ದರು.
ಪತ್ನಿ ಹೇಳಿದಳು
"ನನಗೆ ಸಾಕಾಯ್ತು, ತುಂಬಾನೇ ಹೊತ್ತಾಯ್ತಲ್ಲ, ನಾನಿನ್ನು ಮಲಗಲು ಹೊರಡುವೆ".
ಅವಳೆದ್ದು ಅಡುಗೆ ಮನೆಗೆ ಹೋಗಿ ಬೆಳಗಿನ ತಿಂಡಿಗಾಗಿ ಅರೆಯುವ ಕಲ್ಲಿನಲ್ಲಿ ಅಕ್ಕಿ ಹಾಕಿ ರುಬ್ಬಲು ಇಟ್ಟಳು.
ಮತ್ತೆ ಅಲ್ಲಿಂದ ಸಿಂಕನಲ್ಲಿ ಹಾಕಿದ್ದ ಊಟದ ತಟ್ಟೆಗಳು ಪಾತ್ರಗಳನ್ನು ತೊಳೆದಳು. ಕಾಫಿ ಫಿಲ್ಟರ್ನಲ್ಲಿ ಕಾಫಿ ಸುರಿದು ಬಿಸಿ ನೀರು ಮಾಡಿ ಅದಕ್ಕೆ ಹಾಕಿದಳು. ಫ್ರಿಡ್ಜ್ ನಿಂದ ತರಕಾರಿ ತೆಗೆದು ಹೊರಗಿಟ್ಟಳು. ಸಕ್ಕರೆ ಕರಡಿಗೆ ಖಾಲಿಯಾದುದನ್ನು ನೋಡಿ ಅದಕ್ಕೆ ಸಕ್ಕರೆ ತುಂಬಿ ಚಮಚ ಅದರಲ್ಲಿಟ್ಟಳು.
ನಾಳೆಯ ತನ್ನ ಹಾಗೂ ತನ್ನ ಪತಿಯ ಧಿರುಸನ್ನು ಅದರ ಹರಿದ ಗುಂಡಿಯನ್ನು ಹೊಲಿದು ಇಸ್ತ್ರಿ ಮಾಡಿಟ್ಟಳು. ಬೆಳಿಗ್ಗೆ ಬೇಕಾದ ಟವೆಲ್, ಕರವಸ್ತ್ರ ಪಾಕೀಟು ಎಲ್ಲವನ್ನೂ ಸಿದ್ಧ ಮಾಡಿಟ್ಟಳು.
ಪಕ್ಕದ ನೆಲದಲ್ಲಿ ಬಿದ್ದ ಪೇಪರ್ ಎತ್ತಿ ಸೆಲ್ನಲ್ಲಿಟ್ಟು, ಕೆಳಗೆ ಅನಾಥವಾಗಿ ಬಿದ್ದಿದ್ದ ದಿಂಬನ್ನೆತ್ತಿ ಸೋಫ಼್ಹಾದಲ್ಲಿಟ್ಟಳು. ಬಟ್ಟೇ ತೊಳೆಯುವ ಯಂತ್ರದಿಂದ ಬಟ್ಟೆಯೆಲ್ಲವನ್ನೆತ್ತಿ ಹಿಂಡಿ ತಂತಿಯಲ್ಲಿ ಒಣಗ ಹಾಕಿದಳು.
ಮೈ ಮುರಿಯುತ್ತಾ ಶಯನ ಕೋಣೆಯ ಕಡೆ ಹೆಜ್ಜೆ ಹಾಕಿದಳು.
ಅಲ್ಲೇ ನಿಂತು ಅಲ್ಲೇ ಮೇಜಿನ ಮೇಲಿದ್ದ ಮಗನ ಡೈರಿಯನ್ನೆತ್ತಿ ಅದರಲ್ಲೊಂದು ಕಾಗದವನ್ನಿರಿಸಿದಳು ಅದು ಆತನ ರಜೆ ಅರ್ಜಿ, ಮಾರನೆಯ ದಿನ ಅವನ ಟೀಚರಿಗೆ ಕೊಡಲೇ ಬೇಕು.
ತನ್ನ ಗೆಳತಿಯೊಬ್ಬಳಿಗೆ ಹುಟ್ಟು ಹಬ್ಬದ ಕಾರ್ಡ್ ನಲ್ಲಿ ಹಾರೈಕೆ ಬರೆದು ತೆಗೆದಿಟ್ಟಳು. ಮಗನ ತಿಂಗಳ ಫೀಸನ್ನು ಮರೆಯದೇ ಪೈಸೆ ಪೈಸೆ ಸಹಾ ಲೆಕ್ಕ ಮಾಡಿ ಎತ್ತಿ ಅವನ ಸ್ಕೂಲ್ ಬ್ಯಾಗ್ ಗೆ ಹಾಕಿದಳು.
ನಾಳೆ ಕಟ್ಟ ಬೇಕಾದ ಕ್ರೆಡಿಟ್ ಕಾರ್ಡ್ ಚೆಕ್ ಬರೆದು ಅದಕ್ಕೆ ರುಜು ಹಾಕಿ ತನ್ನ ಪರ್ಸ್ ನಲ್ಲಿಟ್ಟಳು.
ರುಬ್ಬುತ್ತಿದ್ದ ಕಲ್ಲನ್ನು ನಿಲ್ಲಿಸಿ ಹಿಟ್ಟನ್ನು ಒಂದು ಪಾತ್ರೆಗೆ ಸುರುವಿ ಸ್ವಚ್ಚ ಮಾಡಿಟ್ಟಳು. ಮುಖ ತೊಳೆದು ಹಲ್ಲು ತಿಕ್ಕಿದಳು
ಆಗಲೇ ಪತಿರಾಯ ಕರೆದ " ನಾನೇನೋ ನೀನು ಮಲಗಲು ಹೊರಟೆ ಅಂತ ತಿಳಿದಿದ್ದೆ"
"ಹೌದು ಈಗ ಹೋಗುತ್ತಿದ್ದೇನೆ", ಉತ್ತರಿಸಿದಳವಳು.
ಬೆಕ್ಕಿಗೆ, ನಾಯಿಗೆ ಪಿಡಿಗ್ರೀ ತಿಂಡಿಗಳನ್ನು ಅವುಗಳ ತಟ್ಟೆಯಲ್ಲಿ ತುಂಬಿಸಿಟ್ಟಳು, ಪಕ್ಕದ ಬೌಲ್ ನಲ್ಲಿ ನೀರನ್ನೂ.
ಹೊರಗೆ ಕಾರಿನ ಗಾಜುಗಳೆಲ್ಲವೂ ಸರಿಯಾಗಿ ಮೇಲೇರಿಸಿದ್ದವೇ ಎಂದು ನೋಡಿ, ಹೊರಗೆ ಒಣಗಿಸಿದ್ದ ಬಟ್ಟೆಗಳನ್ನು ಒಳ ತಂದಿಟ್ಟು ಹೊರ ಬಾಗಿಲು ಹಾಕುತ್ತಾ ಭದ್ರವೇ ಎಂದು ಪರೀಶೀಲಿಸಿದಳು.
ಮಕ್ಕಳ ಕೋಣೆಗೆ ಬಂದು ಅವಕ್ಕೆ ಸರಿಯಾಗಿ ಹೊದೆಸಿದಳು, ಪಕ್ಕದಲ್ಲೆಲ್ಲಾ ನೆಲದಲ್ಲಿ ಬಿಸುಡಿದ್ದ ಕಾಲುಚೀಲ, ಪುಸ್ತಕಗಳನ್ನೆತ್ತಿ ಅವವುಗಳ ಜಾಗದಲ್ಲಿಟ್ಟು, ಅರೆ ನಿದ್ದೆಯಲ್ಲಿ ಎಚ್ಚರಾದ ಮಗುವನ್ನು ತಟ್ಟಿ ಮುದ್ದು ಮಾಡಿ ಮಲಗಿಸಿದಳು.
ಒಳ ತಂದಿಟ್ಟ ಬಟ್ಟೆಯನ್ನು ಮಡಚಿಟ್ಟು, ಮಕ್ಕಳ ನಾಳೆಯ ದಿರುಸನ್ನೂ ಇಸ್ತ್ರಿ ಹಾಕಿ ಇಟ್ಟಳು.
ತನ್ನ ರೂಮಿನಲ್ಲಿ ಇವತ್ತಿನ ತನ್ನ ಎಲ್ಲಾ ಕೆಲಸಗಳೂ ಮುಗಿದವೇ, ಯಾವುವಾದರೂ ಬಾಕಿ ಇವೆಯೇ ಎಂದು ಬೋರ್ಡ್ ನೋಡಿ ಪರಿಶೀಲಿಸಿದಳು.
ನಂತರ ಕುಳಿತು ಆ ದಿನದ ಮನೆಯ ಖರ್ಚು ವಿವರಗಳನ್ನು ಡೈರಿಯಲ್ಲಿ ಬರೆದಿಟ್ಟಳು.
ಅಷ್ಟಾಗುವಾಗ ಗಂಡ ಟಿ ವಿ ಯನ್ನು ಬಂದ್ ಮಾಡಿ’ ನಾನು ಮಲಗಲು ಹೋಗುತ್ತಿದ್ದೇನೆ ’ ಎಂದು ಯಾರನ್ನೂ ಉದ್ದೇಶಿಸದೇ ಹೇಳಿ ಅಂತೆಯೇ ಮಾಡಿದ ಕೂಡಾ.
ಇದರಲ್ಲೇನಾದರೂ ವಿಶೇಷ ಕಂಡಿರಾ..?
ಇದನ್ನ ವಿಶೇಷವಾದ ಸ್ತ್ರೀಯರಿಗೆ ರವಾನಿಸಿ ಅವರು ಇದಕ್ಕೆ ಅರ್ಹರು
ಇದನ್ನು ಆದಷ್ಟು ಗಂಡಸರಿಗೂ ರವಾನಿಸಿ, ಅವರೂ ತಿಳಿದುಕೊಳ್ಳಲಿ ಯಾಕೆ ತಮ್ಮ ಹೆಂಗಸರು ವಿಶಿಷ್ಟ ವಿಶೇಷ ಎಂದು.
Comments
ಉ: ಸ್ತ್ರೀಯರಲ್ಲಿ ಏನು ವಿಷೇಶತೆ ಇದೆ..???
In reply to ಉ: ಸ್ತ್ರೀಯರಲ್ಲಿ ಏನು ವಿಷೇಶತೆ ಇದೆ..??? by makara
ಉ: ಸ್ತ್ರೀಯರಲ್ಲಿ ಏನು ವಿಷೇಶತೆ ಇದೆ..???
In reply to ಉ: ಸ್ತ್ರೀಯರಲ್ಲಿ ಏನು ವಿಷೇಶತೆ ಇದೆ..??? by makara
ಉ: ಸ್ತ್ರೀಯರಲ್ಲಿ ಏನು ವಿಷೇಶತೆ ಇದೆ..???
ಉ: ಸ್ತ್ರೀಯರಲ್ಲಿ ಏನು ವಿಷೇಶತೆ ಇದೆ..???
In reply to ಉ: ಸ್ತ್ರೀಯರಲ್ಲಿ ಏನು ವಿಷೇಶತೆ ಇದೆ..??? by ಗಣೇಶ
ಉ: ಸ್ತ್ರೀಯರಲ್ಲಿ ಏನು ವಿಷೇಶತೆ ಇದೆ..???
ಉ: ಸ್ತ್ರೀಯರಲ್ಲಿ ಏನು ವಿಷೇಶತೆ ಇದೆ..???
In reply to ಉ: ಸ್ತ್ರೀಯರಲ್ಲಿ ಏನು ವಿಷೇಶತೆ ಇದೆ..??? by bhalle
ಉ: ಸ್ತ್ರೀಯರಲ್ಲಿ ಏನು ವಿಷೇಶತೆ ಇದೆ..???
In reply to ಉ: ಸ್ತ್ರೀಯರಲ್ಲಿ ಏನು ವಿಷೇಶತೆ ಇದೆ..??? by RAMAMOHANA
ಉ: ಸ್ತ್ರೀಯರಲ್ಲಿ ಏನು ವಿಷೇಶತೆ ಇದೆ..???
In reply to ಉ: ಸ್ತ್ರೀಯರಲ್ಲಿ ಏನು ವಿಷೇಶತೆ ಇದೆ..??? by RAMAMOHANA
ಉ: ಸ್ತ್ರೀಯರಲ್ಲಿ ಏನು ವಿಷೇಶತೆ ಇದೆ..???
In reply to ಉ: ಸ್ತ್ರೀಯರಲ್ಲಿ ಏನು ವಿಷೇಶತೆ ಇದೆ..??? by ಗಣೇಶ
ಉ: ಸ್ತ್ರೀಯರಲ್ಲಿ ಏನು ವಿಷೇಶತೆ ಇದೆ..???
In reply to ಉ: ಸ್ತ್ರೀಯರಲ್ಲಿ ಏನು ವಿಷೇಶತೆ ಇದೆ..??? by bhalle
ಉ: ಸ್ತ್ರೀಯರಲ್ಲಿ ಏನು ವಿಷೇಶತೆ ಇದೆ..???
ಉ: ಸ್ತ್ರೀಯರಲ್ಲಿ ಏನು ವಿಷೇಶತೆ ಇದೆ..???
In reply to ಉ: ಸ್ತ್ರೀಯರಲ್ಲಿ ಏನು ವಿಷೇಶತೆ ಇದೆ..??? by nageshamysore
ಉ: ಸ್ತ್ರೀಯರಲ್ಲಿ ಏನು ವಿಷೇಶತೆ ಇದೆ..???