ಸ್ತ್ರೀಯೊಬ್ಬಳ ವಿವಿಧ ಪಾತ್ರಗಳು

ಸ್ತ್ರೀಯೊಬ್ಬಳ ವಿವಿಧ ಪಾತ್ರಗಳು

ಕವನ

ಸ್ತ್ರೀ ಎಂದರೆ ಹಾಗೆ ಅಲ್ಲವೇ

ತಾಯಿಯಾಗಿ ವಾತ್ಸಲ್ಯ ಮೂರುತಿ

ಪತ್ನಿಯಾಗಿ ಮನೋವಲ್ಲಭೆ ಕೀರುತಿ

ಸೋದರಿಯಾಗಿ ಪ್ರೀತಿ ಗೌರವ ನೀಡುತಿ

 

ಗೆಳತಿ ಸ್ನೇಹ ಹಸ್ತ ಸದಾ ಚಾಚುತಿ

ಬಾಳ ಪುಟದಿ ಶಾಶ್ವತವಾಗಿ ನಿಲ್ಲುತಿ

ಅಮ್ಮನ ಮಮತೆಯ ತೋರುತಿ

ಅಕ್ಕನಾಗಿ ಆಶೀರ್ವಾದ ಮಾಡುತಿ

 

ತಂಗಿ ಪಟ್ಟ ಸಾಮಾನ್ಯವೇ ಈ ಜಗದಿ

ಕೀಟಲೆ ದೂರು ಎಲ್ಲಾ ಕ್ಷಣಿಕ ಮನದಿ

ಆಹಾ!ಎಂಥ ಸಿಂಚನ ತಂಗಿಯ  ಸನಿಹದಿ

ಪುಣ್ಯ ಶರಧಿಯಲಿ ತೇಲುವ ಅಲೆಯಂದದಿ

 

ಅಜ್ಜಿ ಮುತ್ತಜ್ಜಿಯ ಸ್ಥಾನಮಾನ ಹಿರಿದು

ಮಡಿಲ ಸಾಂತ್ವನಕೆ ಎಂದೂ ಕೊನೆಯಿರದು

ಕಥೆ ಕೊಂಡಾಟಗಳ ಆಗರವಿಹುದು

ಜಗದ ಜೀವಂತ ದೇವತೆ ಅಹುದು

 

ಕ್ಷಮಯಾಧರಿತ್ರಿ ಭೂಮಿತೂಕದವಳು

ಪಾಲಿಗೆ ಬಂದದ್ದು ಪಂಚಾಮೃತ ಎಂದವಳು

ಕಷ್ಟ ಸುಖ ನೋವು ನಲಿವುಗಳ

ಸಮಾನವಾಗಿ ಸ್ವೀಕರಿಸಿ ಸೈ ಎನಿಸಿದವಳು ಸ್ತ್ರೀ.

 

-ರತ್ನಾ ಕೆ.ಭಟ್, ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ

 

ಚಿತ್ರ್