ಸ್ನೇಹಿತೆಯಲ್ಲೊಂದು ನಿವೇದನೆ

ಸ್ನೇಹಿತೆಯಲ್ಲೊಂದು ನಿವೇದನೆ

 

.

 

 



ಗೆಳತಿ 

 

  ತುಂಬಾ ದಿನದಿಂದ ಹೇಳಲೇ ಬೇಕೆಂದಿದ್ದ ಕೆಲವು ವಿಷಯವನ್ನು ಹೇಳಲಾಗದೆ ಮನದಲ್ಲೇ ಮುಚ್ಚಿಟ್ಟಿದ್ದೆಕೆಲವೊಂದು ವಿಷಯವನ್ನು ಹೇಗೆ ಹೇಳಬೇಕೆಂದೇ ಗೊತ್ತಾಗುವುದಿಲ್ಲ ಒಮ್ಮೊಮ್ಮೆ ನೋವು ಹಂಚಿಕೊಳ್ಳಲು ಸರಿಯಾದ ಅವಕಾಶ ಸಿಗದೇ ಮನಸಲ್ಲೇ ಕೊರಗುವ ಸನ್ನಿವೇಶ ನಿನಗೂ ಆಗಿರಬಹುದು ಅದಕ್ಕೆಂದೇ ಪತ್ರದ ಮೂಲಕ ತಿಳಿಸುವ ಪ್ರಯತ್ನ ಮಾಡಿದ್ದೇನೆ . ಆಗಲಾದರೂ ನೋವು ಶಮನ ಅಗುವುದೇನೋ ಎಂಬ ಚಿಕ್ಕ ಆಸೆ.ಮೊನ್ನೆ ನೀನು ಫೋನ್ ನಲ್ಲಿ ಹೇಳಿದೆಯಲ್ಲ ಯಾಕೊ ಬೇಜಾರು ಎಂದು ಆಗ ನನಗು ಹಾಗೆ ಅನ್ನಿಸ್ತು .ಇತ್ತೀಚಿಗೆ ಮನಸ್ಸು ಯಾಕೋ ತುಂಬಾ ಸೂಕ್ಷ್ಮ ಆಗುತ್ತಿದೆ ಕೆಲವೊಮ್ಮೆ ವಿನಾಕಾರಣ ಮುನಿಸು ಅಳು ಬರುತ್ತಿದೆ ಕಾರಣ ಹುಡುಕುವ ಪ್ರಯತ್ನ ನಾ ಮಾಡಲಾರೆ .ಒಟ್ಟಿಗೆ ಕಳೆದಂತ ದಿನಗಳನ್ನು ಖಂಡಿತ ಮರೆಯಲಾರೆ.ಕೆಲವೊಮ್ಮೆ ಲೇಖನಿ ಎಷ್ಟು ಸಹಾಯಕ್ಕೆ ಬರುತ್ತೆ ಅಲ್ವಾ ?

 ಗೆಳತಿ ಪ್ರತಿದಿನ ಕಿಟಕಿ ಬಳಿ ಕುಳಿತು ಹೊರನೋಡುತ್ತಿದ್ದರೆ ಕಣ್ಣಮುಂದೆ ನಮ್ಮೂರ (ಮಲೆನಾಡು ) ಬೋರ್ಗರೆವ ಮಳೆ, ಹಸಿರು ಗದ್ದೆ  ಕಣ್ಮುಂದೆ ಬರುತ್ತೆ .ದಾರಿಯಲ್ಲಿ ಹೋಗುವಾಗ ಯಾರೋ ಸಣ್ಣದೊಂದು ಸ್ಮೈಲ್ ಮಾಡಿದರೆ ನಮ್ಮಪ್ಪನೆ ಕಣ್ಣೆದುರು ಬಂದಂತಾಗುತ್ತದೆ.  ನಿನ್ನೆ ಮನೆಗೆ ಫೋನ್ ಮಾಡಿದ್ದೆ ಅಪ್ಪ ನಾನು ಫೋನ್ ಮಾಡಿದರೆ ದೇವರಿಗೆ ಹೂವು ಕೊಯ್ದುಕೊಡುವುದಾಗಿ ಹೇಳಿಕೊಂಡಿದ್ದರಂತೆ. ನನಗೆ ಮಾತೇ ಹೊರಡಲಿಲ್ಲ ಪರಿಯ ಪ್ರೀತಿಯನ್ನು ಬಿಟ್ಟು ಎಷ್ಟೊಂದು ದೂರ ಬಂದುಬಿತ್ತಿದ್ದೀನಿ.ಎಲ್ಲ ಬಿಟ್ಟು ತುಂಬಾ ದೂರ ಬಂದು ಬಿಟ್ಟಿದ್ದೀನಿ .ಬರುವಾಗ ಇದ್ದ ಸಂತೋಷ ಈಗಿಲ್ಲ .ಮೊದಲೆಲ್ಲ ಅಂದುಕೊಳ್ಳುತ್ತಿದ್ದೆ ಯಾರ ಗೊಡವೆಯು ಬೇಡ ಎಲ್ಲಬಿಟ್ಟು ದೂರ ಹೋಗಿಬಿಡಬೇಕು ಎಂದು .ಈಗ ದೇಶ ಬಿಟ್ಟು  ದೂರ ಬಂದಾಗಿದೆ ಏಕಾಂಗಿ ಎನಿಸುತ್ತಿದೆ .ಬರಿ ನೆನಪುಗಳೇ ಹೊಸಬೆಳಕು.ನಾ ಮಡಿದ ತಪ್ಪು ನೀ ಮಾಡಬೇಡ ನಮ್ಮವರೆಲ್ಲರೊಡನೆ ನಗುನಗುತ್ತ ಇರುವ ಸುಖ ಏಕಾಂಗಿತನದಲ್ಲಿರುವುದಿಲ್ಲ .

 

 

Comments