'ಸ್ನೋಕಾಲ್ಮಿ ಫಾಲ್ಸ್', ಸಿಯಾಟಲ್ ನಗರದ ಬಳಿಯ ಪ್ರಮುಖ ಜಲವಿದ್ಯುತ್ ತಯಾರಿಕೆಯ ಘಟಕಗಳಲ್ಲೊಂದು !

'ಸ್ನೋಕಾಲ್ಮಿ ಫಾಲ್ಸ್', ಸಿಯಾಟಲ್ ನಗರದ ಬಳಿಯ ಪ್ರಮುಖ ಜಲವಿದ್ಯುತ್ ತಯಾರಿಕೆಯ ಘಟಕಗಳಲ್ಲೊಂದು !

ಬರಹ

ಸ್ನೋಕಾಲ್ಮಿ ಫಾಲ್ಸ್ ಇದು ಅಮೆರಿಕದ ಸಿಯಾಟಲ್ ನಗರದ ಅತಿ ಮುಖ್ಯ ಆಕರ್ಷಣೆಯ ಕೇಂದ್ರ. ಅದೇಹೆಸರಿನ ಸ್ನೊಕುಲ್ಮಿ ನದಿಯಪಾತ್ರದಲ್ಲಿ ದೈವ -ನಿರ್ಮಿತ ಜಲಪಾತದ ಅದ್ಭುತ ದೃಷ್ಯ. ಅಮೆರಿಕದ ’ಕಲ್ಟ್ ಟೆಲಿವಿಶನ್ ಧಾರಾವಾಹಿಯಲ್ಲಿ ’ಟ್ವಿನ್ ಪೀಕ್ಸ್’ ಎಂಬ ಶೀರ್ಷಿಕೆಯಲ್ಲಿ ಈ ಜಲಪಾತ ಪ್ರಪ್ರಥಮವಾಗಿ ಕಾಣಿಸಿಕೊಂಡಮೇಲೆ ಜನರ ಗಮನ ಸ್ನೊಕುಲ್ಮಿ ಫಾಲ್ಸ್ ನ ಮೇಲೆ ಕೇಂದ್ರೀಕೃತವಾಯಿತು.

ಪ್ರತಿವರ್ಷ ಇಲ್ಲಿಗೆ ಸುಮಾರು ೧.೫ ಮಿಲಿಯನ್ ಜನ ಪರ್ಯಟಕರು ಬರುತ್ತಾರೆ. ೨ ಎಕರೆ [೮,೦೦೦ ಚ. ಮೀ]ವೀಕ್ಷಣಾಪ್ರದೇಶದ ಸ್ಥಳವಿದೆ. ಇಲ್ಲಿ ಸುಪ್ರಸಿದ್ಧವಾದ ಒಂದು ಗಿಫ್ಟ್ ಶಾಪ್, ಇದೆ. ನವೆಂಬರ್-ಮಾರ್ಚ್ ತಿಂಗಳಲ್ಲಿ ಮಳೆ, ಅಥವ ಹಿಮ-ಕರಗುವಿಕೆಯಿಂದ ನೀರಿನ ಭರಸ ಹೆಚ್ಚಾಗಿರುತ್ತದೆ. ವಿದ್ಯುತ್ ನಿರ್ಮಾಣದ ೨ ಕೇಂದ್ರಗಳಿವೆ. ಹೀಗೆ ಭೂಮಿಯಲ್ಲಿ ಒಳಗೆ ಸುರಂಗ ನಿರ್ಮಿಸಿ ಕಟ್ಟಲಾದ ವಿಶ್ವದ ಪ್ರಥಮ ಜಲವಿದ್ಯುತ್ ಕಾರಾಗಾರ, ೧೮೯೮ ರಲ್ಲಿ ಶುರುವಾಯಿತು. ಎರಡನೆಯ ಘಟಕ ೧೯೧೦ ರಲ್ಲಿ , ಆಯಿತು. ೧೯೫೭ ರಲ್ಲಿ ಇದರ ವಿಸ್ತಾರವನ್ನು ಹೆಚ್ಚಿಸಿದರು. ಎರಡೂ ವಿದ್ಯುತ್ ಸ್ತಾವರಗಳಿಂದ ಒಟ್ಟಿಗೆ ಸರಾಸರಿ ೪೪,೦೦೦ ಕಿ. ವ್ಯಾಟ್ ವಿದ್ಯುತ್ ಉತ್ಪಾದನೆಯಾಗುತ್ತಿದೆ.

’ಸ್ನೋಕಾಲ್ಮಿ ಫಾಲ್ಸ್’ ನ ಎತ್ತರ ೨೭೦ ಅಡಿ. ವಿಶ್ವ ವಿಖ್ಯಾತ ನಯಾಗರ ಜಲಪಾತಕ್ಕಿಂತ ಸುಮಾರು ೧೦೦ ಅಡಿ ಹೆಚ್ಚು ಎತ್ತರ. ಸ್ನೋಕಾಲ್ಮಿ  ಫಾಲ್ಸ್ ನ ಐತಿಹ್ಯ : ೧೮೯೦ ರಲ್ಲಿ ಸಿವಿಲ್ ಎಂಜಿನಿಯರ್ ಚಾರ್ಲ್ಸ್ . ಎಚ್. ಬೇಕರ್, ಸ್ನೋಕಾಲ್ಮಿ ಫಾಲ್ಸ್ ನೋಡಿ ಆಕರ್ಷಿತರಾದರು. ಪೋಲಾಗುತ್ತಿದ್ದ ಹೆಚ್ಚಿನ ನೀರನ್ನು ಅರ್ಥಪೂರ್ಣವಾಗಿ ಉಪಯೋಗಿಸಿ ಅದರ ಸದುಪಯೋಗವನ್ನು ಮಾಡುವ ಅವರ ಸಾಹಸ, ೧೮೯೮ ರಲ್ಲಿ ಪ್ರಾರಂಭವಾಯಿತು. ಅಲ್ಲಿನ ಅತಿಪ್ರಾಚೀನ ಗಟ್ಟಿಯಾದ ಬಂಡೆಗಳನ್ನು ಒಡೆದು-ಕೊರೆದು ಅಲ್ಲಿ ಬೃಹತ್ ನೀರಿನಕೊಳವೆಗಳನ್ನು ಸ್ಥಾಪಿಸಿ ಮಾಡಿದ ಜಲವಿದ್ಯುತ್ ಕಾರಾಗಾರ ನಿಜಕ್ಕೂ ಅದ್ಭುತ !

 

-ನನ್ನ ಆಲ್ಬಮ್ ನಿಂದ.