ಸ್ಪರ್ಧೆ: ಗ್ನು/ಲಿನಕ್ಸ್ ಹಬ್ಬದ ಆಪರೇಟಿಂಗ್ ಸಿಸ್ಟಂ ಸಿ.ಡಿ ಗೆ ಹೆಸರಿಡಿ

ಸ್ಪರ್ಧೆ: ಗ್ನು/ಲಿನಕ್ಸ್ ಹಬ್ಬದ ಆಪರೇಟಿಂಗ್ ಸಿಸ್ಟಂ ಸಿ.ಡಿ ಗೆ ಹೆಸರಿಡಿ

ಬರಹ

ಗ್ನು/ಲಿನಕ್ಸ್ ಹಬ್ಬ ತಂಡ ಪ್ರತಿ ಹಬ್ಬದಲ್ಲೂ, ಬಳಕೆದಾರನಿಗೆ ಕನ್ನಡ ಓದಲು, ಬರೆಯಲು ಮತ್ತು  ಪ್ರತಿನಿತ್ಯದ ಕೆಲಸಗಳನ್ನ  ಇನ್ಯಾವುದೇ ಪ್ರೊಪ್ರೈಟರಿ ಆಪರೇಟಿಂಗ್ ಸಿಸ್ಟಂಗಳಂತೆ ಮಾಡಲಿಕ್ಕೆ ಸಾಧ್ಯವಾಗುವಂತಹ ತಂತ್ರಾಂಶಗಳನ್ನ ಒಳಗೊಂಡ ಗ್ನು/ಲಿನಕ್ಸ್ ಸಿ.ಡಿ ಯೊಂದನ್ನ ಭಾಗವಹಿಸುವ ಎಲ್ಲರಿಗೆ ನೀಡುತ್ತಾ ಬಂದಿದೆ.

ಈ ಬಾರಿ ನಿಟ್ಟೆಯಲ್ಲಿ ನೆಡೆಯುವ ಗ್ನು/ಲಿನಕ್ಸ್ ಹಬ್ಬ -೩ ಕ್ಕೆ ಡೆಬಿಯನ್ ಲೆನಿ (Debian Lenny) ಆಧಾರಿತ ಲೈವ್ ಸಿ.ಡಿ ಯನ್ನು ಕನ್ನಡ ತಂತ್ರಾಂಶ ಇತ್ಯಾದಿಯೊಂದಿಗೆ ಕೊಡುವ ಯೋಜನೆಯಿದೆ. ಈ ಸಿ.ಡಿ ಯೊಂದಿಗೆ ಬಳಕೆದಾರನನ್ನು ಸ್ವತಂತ್ರ ಹಾಗು ಮುಕ್ತ ತಂತ್ರಾಂಶ (FOSS) ಅಭಿವೃದ್ದಿಯಲ್ಲಿ ಭಾಗವಹಿಸಲಿಕ್ಕೆ ಅಣಿಗೊಳಿಸುವ ತಂತ್ರಾಂಶಗಳನ್ನು ಒಳಗೊಂಡ Add-on ಸಿ.ಡಿ ಕೂಡ ಇರುತ್ತದೆ. ನಾವು ಈ ಸಿ.ಡಿಗಳನ್ನು ಸಿದ್ದಪಡಿಸಿ,
ಪರೀಕ್ಷಿಸುವಾಗ ನೀವು ಇದಕ್ಕೊಂದು ಹೆಸರಿಡುವ ಸ್ಪರ್ಧೆಯಲ್ಲಿ ಭಾಗವಹಿಸ್ತೀರಾ?


ಗ್ನು/ಲಿನಕ್ಸ್ ಹಬ್ಬದ ಭಾಗಿಗಳೊಂದಿಗೆ ಹಂಚಿಕೊಳ್ಳುವ ತಂತ್ರಾಂಶವನ್ನ ಏನಂತ ಕರೆಯೋಣ?

ಈ ಆವೃತ್ತಿಯನ್ನ ನೀವು ೩ ಕನ್ನಡ ಪದಗಳನ್ನ ಉಪಯೋಗಿಸಿ ಆರು ದಿನಗಳ ಒಳಗೆ ಹೆಸರಿಸಿ, ಹಬ್ಬದ ಆಚರಣೆಯಲ್ಲಿ ನಮ್ಮೊಂದಿಗೆ ಭಾಗಿಗಳಾಗಿ.

ಸ್ಪರ್ಧೆಯ ನಿಯಮಗಳು ಇಂತಿವೆ:

* ಮೂರು ಕನ್ನಡ ಅಕ್ಷರಗಳಿರಬೇಕು (ಉದಾ: ಸಂಪಿಗೆ)
* ಗ್ನು/ಲಿನಕ್ಸ್ ಹಬ್ಬದ ಮೂಲ ಉದ್ದೇಶವನ್ನ ಬಿಂಬಿಸುವಂತಿರಬೇಕು
* ಬೇರೆಯವರು ಈ ಹೆಸರನ್ನ ಮೊದಲು ಉಪಯೋಗಿಸಿರಬಾರದು, ಕನ್ನಡದಲ್ಲಿ ಪದಗಳಿಗೆ ಕೊರತೆಯಿಲ್ಲ ಅಲ್ಲವೇ?
* ಯಾವುದೇ ಜಾತಿ/ಮತ ಗಳನ್ನ ಹೆಸರು ಒಳಗೊಂಡಿರಬಾರದು (ಉದಾ: ಉಬುಂಟು ಕ್ರಿಸ್ಚಿಯನ್ ಎಡಿಷನ್)
* ಅಸಭ್ಯ ಭಾಷೆ ಉಪಯೋಗಿಸಬಾರದು.

 ಸಲಹೆ: ಪ್ರಾಥಮಿಕ ಶಾಲೆಯ ಪುಸ್ತಕಗಳನ್ನು ನೋಡಿ. ಮಕ್ಕಳ ಪುಸ್ತಕಗಳು "ಕನ್ನಡ ಭಾರತಿ" ಯಂತಹ ಸುಂದರ ಪದಗಳನ್ನ ನಿಮ್ಮ ಮುಂದಿಡುತ್ತವೆ.