ಸ್ಪರ್ಧೆ

ಸ್ಪರ್ಧೆ

ಕವನ

 


ಮುಂದುವರೆದ ನಿಮ್ಮೀರವರೊಳಗಿನ


ತ್ರೀವ್ರ ಸ್ಪರ್ಧೆಯಿಂದಾಗಿ


ಸಂಭಂದಗಳ ಪಕಳೆಗಳು


ಒಂದೊಂದಾಗಿ ಉದುರಿ,


ಅಂದ ಚಂದ, ಸುಗಂಧ, ಎಲ್ಲವೊ


ಗೊಬ್ಬರ


ಹದಿ ಹರಯದಲ್ಲೇ ವ್ರುತಾ, ವೈದವ್ಯದ ಅಬ್ಬರ;


 


ನ್ಯಾಯ ಸಮ್ಮತವಲ್ಲದ


ಗುತ್ತು ಗುರಿಯಿಲ್ಲದ


ಅತ್ಯಂತ  ದುರ್ಬಲ, ಕಳಪೆ 


ಕೊಡುಗೆಗಳನ್ನಿತ ನಿಮ್ಮೀ


ಜಂಜಾಟ, ಜೊಟಾಟ, ಜುಜಾಟಕ್ಕೆ


ಬಾಡಿದ್ದು,  ಬಲಿಯಾದದ್ದು, ಆ ಚಂದದ ಹೊ


ಮಕರಂದ ಹೀರಿದ ದುಂಭಿಯಸ್ಟೇ ಅಲ್ಲ, ನಮ್ಮೆಲ್ಲರ ಬೆವರು !!


ಇದಕ್ಕೆ ಕ್ಸಮೆ ಇಲ್ಲ


ಉತ್ತರ ದೊರಕುವ ಪರಿಸ್ಥಿತಿ ಸದ್ಯಕ್ಕಿಲ್ಲ


ಬರವಸೆಯ ಮತುಗಳೊ ಕೇಳಿ ಬರಲಿಲ್ಲ;


 


ನಿರಂತರೆ ನೆಡೆದಿರುವ ನಿಮ್ಮೀ ಅತ್ಯಾಚಾರಕ್ಕೆ


ಭೊಮಿ ಬರಡಾಗಿದ್ದಾಳೆ, ಬಿಸಿಯಾಗಿದ್ದಾಳೆ


ಮಳೆ ರಾಯ ಮುನಿದ ಹಾಗಿದೆ


ಇನ್ನೊ ಹೊವಾಗಿ ಅರಳದ


ಯಾರ ಮುಡಿಗೊ, ದೇವರ ಗುಡಿಗೊ


ಮನೆಗೊ, ಮದುವೆಗೊ ಸಲ್ಲಬಹುದಾದ


ಚಂದ ಸುಗಂಧಗಳಿಂದ ಕಾಮನೆಗಳ ಕೆಣಕ ಬಹುದಾದ


ಮಗ್ಗುಗಳೊ, ಕೆಳಗುದುರುವ ಹಾಗಿದೆ,


ಮತ್ತದೇ ಗೊಬ್ಬರ, ದುರ್ನಾಥ


ಮೂಗಿಗೆ ಬಡಿದಿದೆ;


 


ಗುಡುಗು ಮಿಂಚುಗಳಾರ್ಭಟದಲ್ಲಿ


ನೆಲ ನಡುಗಿದೆ, ತಟ ತಟ


ತೊಟ್ಟಿಕ್ಕುವ ಮಳೆ ಹನಿಗಳು


ಕೆಳಗಿಳಿದು, ಮಲಗಿದ್ದ ಹಾಸಿಗೆ ತೊಯ್ದ


ತಣ್ಣಗೆ ಸಣ್ಣಗೆ ಕೊರೆದು


ಕನಸುಗಳೊಡೆದೆದ್ದೆ


ಇನ್ನೊ.... ಮದ್ಯರಾತ್ರಿಯಲ್ಲೇ


ನಿದ್ದೆಯನ್ನೇಕೆ ನೀ ಕದ್ದೆ ?!


 


 


 


 


 


 


 

Comments