ಸ್ಪೆಷಲ್ ಖಾರಾ ಸೇವ್
ಬೇಕಿರುವ ಸಾಮಗ್ರಿ
ಕಡಲೆ ಹಿಟ್ಟು ೩ ಕಪ್, ಬೇಕಿಂಗ್ ಪೌಡರ್ - ಅರ್ಧ ಚಮಚ, ಇಂಗು - ಅರ್ಧ ಚಮಚ, ಓಂಕಾಳು - ೪ ಚಮಚ, ಅಚ್ಚ ಖಾರದ ಹುಡಿ - ೩ ಚಮಚ, ಬೆಣ್ಣೆ - ಕಾಲು ಕಪ್, ಉಪ್ಪು ರುಚಿಗೆ ತಕ್ಕಷ್ಟು, ಎಣ್ಣೆ.
ತಯಾರಿಸುವ ವಿಧಾನ
ಕಡಲೆ ಹಿಟ್ಟಿಗೆ ಅಚ್ಚ ಖಾರದ ಹುಡಿ, ಬೇಕಿಂಗ್ ಪೌಡರ್, ಓಂಕಾಳು, ಇಂಗು, ಬೆಣ್ಣೆ, ಉಪ್ಪು ಮೊದಲಾದ ಎಲ್ಲಾ ವಸ್ತುಗಳನ್ನು ಸೇರಿಸಿ ಗಟ್ಟಿಯಾಗಿ ಕಲಸಿಡಿ. ಚಕ್ಕುಲಿ ಒರಳಿಗೆ ಖಾರಾ ಸೇವ್ ನ ಬಿಲ್ಲೆ ಹಾಕಿ ಮಿಶ್ರಣವನ್ನು ತುಂಬಿ ಕಾದ ಎಣ್ಣೆಯಲ್ಲಿ ಕರಿದು ತೆಗೆದರೆ ರುಚಿಯಾದ ಖಾರಾ ಸೇವ್ ರೆಡಿ.