ಸ್ಪೆಷಲ್ ಬಟಾಟೆ ಪಲ್ಯ
ಬೇಕಿರುವ ಸಾಮಗ್ರಿ
ಹದ ಗಾತ್ರದ ಬಟಾಟೆ ೨, ನೀರುಳ್ಳಿ ೧, ಟೋಮೇಟೋ ೨, ಕಾಯಿ ಮೆಣಸು ೨-೩, ಕೊತ್ತಂಬರಿ ಸೊಪ್ಪು, ರುಚಿಗೆ ಉಪ್ಪು, ಸ್ವಲ್ಪ ಇಂಗು, ಅರಸಿನ ಹುಡಿ ಅರ್ಧ ಚಮಚ
ಒಗ್ಗರಣೆಗೆ: ಸ್ವಲ್ಪ ಸಾಸಿವೆ, ಬೆಳ್ಳುಳ್ಳಿ ೩-೪ ಎಸಳು, ಉದ್ದಿನ ಬೇಳೆ ೧ ಚಮಚ, ಒಣ ಮೆಣಸು ೨, ಸ್ವಲ್ಪ ಎಣ್ಣೆ, ಕರಿಬೇವಿನ ಸೊಪ್ಪು
ತಯಾರಿಸುವ ವಿಧಾನ
ಮೊದಲಿಗೆ ಬಾಣಲೆಗೆ ಸ್ವಲ್ಪ ಎಣ್ಣೆಯನ್ನು ತೆಗೆದುಕೊಂಡು ಬೆಳ್ಳುಳ್ಳಿ, ಸಾಸಿವೆ, ಉದ್ದಿನ ಬೇಳೆ, ಒಣಮೆಣಸು, ಕರಿಬೇವು, ಸಣ್ಣದಾಗಿ ಕತ್ತರಿಸಿದ ನೀರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೆ ಹುರಿಯಿರಿ. ನಂತರ ಸಣ್ಣದಾಗಿ ಕತ್ತರಿಸಿದ ಬಟಾಟೆ, ಕತ್ತರಿಸಿದ ಟೋಮೇಟೋ, ಸಣ್ಣದಾಗಿ ಕತ್ತರಿಸಿದ ಹಸಿ ಮೆಣಸು ಹಾಕಿ. ಬಟಾಟೆ ಬೇಯಲು ಬೇಕಾದಷ್ಟು ನೀರನ್ನು ಹಾಕಿ. (ಸ್ವಲ್ಪ ಜಾಸ್ತಿ ನೀರು ಹಾಕಿದರೆ ಗ್ರೇವಿ ತರಹ ಆಗುತ್ತೆ ಊಟಕ್ಕೆ ಸಾಂಬಾರಿನಂತೆ ಬಳಸ ಬಹುದು) ಅರಸಿನದ ಹುಡಿ, ರುಚಿಗೆ ತಕ್ಕಷ್ಟು ಉಪ್ಪು, ಇಂಗು ಹಾಕಿ. ಕೊನೆಗೆ ಕೊತ್ತಂಬರಿ ಸೊಪ್ಪು ಹಾಕಿ. ಚೆನ್ನಾಗಿ ಬೆಂದ ಬಳಿಕ ಒಲೆಯಿಂದ ಬಾಣಲೆಯನ್ನು ಇಳಿಸಿರಿ. ರುಚಿಕರ ಪಲ್ಯ ರೆಡಿ.
Comments
ಬಟಾಟೆ ಪಲ್ಯವನ್ನು ಓದಿ ನಾನು…
ಬಟಾಟೆ ಪಲ್ಯವನ್ನು ಓದಿ ನಾನು ಮನೆಯಲ್ಲಿ ಮಾಡಲು ಹೇಳಿದೆ. ಸ್ವಲ್ಪ ಗ್ರೇವಿ ತರಹ ಇರಲಿ ಹೇಳಿದೆ. ನಿಜಕ್ಕೂ ಅನ್ನಕ್ಕೆ ಸಂಬಾರ್ ಬದಲಿಗೆ ಉಪಯೋಗಿಸಿ, ರುಚಿಕರವಾಗಿತ್ತು. ಲೇಖಕಿಯವರು ಬಹಳ ಸಿಂಪಲ್ ಆದ ರುಚಿಗಳನ್ನು ಬರೆದಿದ್ದಾರೆ. ಇನ್ನೂ ಹೀಗೇ ಹೊಸ ರುಚಿಗಳನ್ನು ಬರೆಯುತ್ತಿರಿ.