ಸ್ಪೆಷಲ್ ಶಾವಿಗೆ ಒಗ್ಗರಣೆ
ಬೇಕಿರುವ ಸಾಮಗ್ರಿ
ವರ್ಮಸೆಲ್ಲಿ ಶ್ಯಾವಿಗೆ ೧ ಕಪ್, ನೀರುಳ್ಳಿ ೧, ಕಾಯಿ ಮೆಣಸು ೩-೪, ಉದ್ದಿನ ಬೇಳೆ ೧ ಚಮಚ , ಕಡಲೇ ಬೇಳೆ ೧ ಚಮಚ, ಸ್ವಲ್ಪ ತೆಂಗಿನ ಎಣ್ಣೆ, ರುಚಿಗೆ ಉಪ್ಪು, ಬೇಕಾದಲ್ಲಿ ಸ್ವಲ್ಪ ಸಕ್ಕರೆ, ಕರಿಬೇವಿನ ಸೊಪ್ಪು
ತಯಾರಿಸುವ ವಿಧಾನ
ಮೊದಲು ಶಾವಿಗೆಯನ್ನು ಕಾವಲಿಯಲ್ಲಿ ಹಾಕಿ ಹುರಿಯಿರಿ. ನಂತರ ಬಾಣಲೆಗೆ ತೆಂಗಿನ ಎಣ್ಣೆ ಹಾಕಿ ಅದಕ್ಕೆ ಕತ್ತರಿಸಿದ ಕಾಯಿಮೆಣಸು, ಕತ್ತರಿಸಿದ ಈರುಳ್ಳಿ, ಉದ್ದಿನ ಬೇಳೆ, ಕಡಲೇ ಬೇಳೆ, ಕರಿ ಬೇವಿನ ಸೊಪ್ಪು ಹಾಕಿ ಈರುಳ್ಳಿ ಕಂದು ಬಣ್ಣ ಬರುವವರೆಗೆ ಹುರಿಯಿರಿ. ನಂತರ ಹುರಿದ ಶ್ಯಾವಿಗೆಯನ್ನು ಹಾಕಿ, ಒಲೆಯನ್ನು ಸಣ್ಣದು ಮಾಡಿ, ಬೇಯಲು ಬೇಕಾದಷ್ಟು ನೀರನ್ನು ಹಾಕಿ ಸರಿಯಾಗಿ ಮಗುಚಿ. ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ. ಸ್ವಲ್ಪ ಸಿಹಿ ಬೇಕಾದಲ್ಲಿ ಸಕ್ಕರೆ ಸೇರಿಸಿ. ಶ್ಯಾವಿಗೆ ಬೆಂದ ಬಳಿಕ ಬಾಣಲೆಯನ್ನು ಒಲೆಯಿಂದ ಕೆಳಗೆ ಇಳಿಸಿ, ಬಿಸಿಯಿರುವಾಗಲೇ ತಿನ್ನಿರಿ.