ಸ್ಪೆಷಲ್ ಸೆಟ್ ದೋಸೆ
ಬೇಕಿರುವ ಸಾಮಗ್ರಿ
ಉದ್ದಿನ ಬೇಳೆ ೧ ಕಪ್, ಅಕ್ಕಿ ೨ ಕಪ್, ಅವಲಕ್ಕಿ ಅರ್ಧ ಕಪ್ (ಇದನ್ನು ಅರೆಯುವಾಗಲೇ ನೆನೆಸಿ ಬಳಸಿ), ಮೆಂತ್ಯೆ - ಅರ್ಧ ಚಮಚ, ಬೆಣ್ಣೆ, ಸಕ್ಕರೆ ೧ ಚಮಚ, ರುಚಿಗೆ ತಕ್ಕಷ್ಟು ಉಪ್ಪು.
ತಯಾರಿಸುವ ವಿಧಾನ
ಉದ್ದು, ಮೆಂತ್ಯೆ, ಅಕ್ಕಿ ಎಲ್ಲವನ್ನೂ ತೊಳೆದು ಬೇರೆ ಬೇರೆಯಾಗಿ ೪ ಗಂಟೆ ನೆನೆಸಿ. ಇದಕ್ಕೆ ಸಂಜೆ ಹೊತ್ತಿಗೆ ನೆನೆಸಿದ ಅವಲಕ್ಕಿ ಸೇರಿಸಿ ಅರೆದು ಬೆಳಿಗ್ಗೆ ದೋಸೆ ಹಿಟ್ಟಿಗೆ ಉಪ್ಪು, ಸಕ್ಕರೆ ಬೆರೆಸಿ ದೋಸೆ ಹುಯ್ಯಿರಿ. ದೋಸೆಗೆ ಬೆಣ್ಣೆ ಹಾಕಿ. ಹಿಟ್ಟು ಚೆನ್ನಾಗಿ ಹುದುಗು ಬಂದರೆ ದೋಸೆ ಚೆನ್ನಾಗಿ ಇರುತ್ತದೆ. ಕಾಯಿ ಚಟ್ನಿಯ ಜೊತೆ ಈ ದೋಸೆ ತಿನ್ನಲು ಚೆನ್ನಾಗಿರುತ್ತದೆ.
-ಶೃತಿ ಗದ್ದೇಗಲ್