ಸ್ರಾವ...
ಕವನ
ಧೋ ಆರ್ಭಟ...
ಮರದ ಬುಡ, ಎಲೆಗೆ ಅಪ್ಪಳಿಸಿ ಮೆತ್ತಿಕೊಂಡ ಹಸಿಮಣ್ಣು
ಪ್ರಾಯ ಉಕ್ಕಿಸುವ ಗಮಲು
ಕ್ಷಣದಲ್ಲಿ ಹಕ್ಕಿ ಗೂಡು ಚಿಂದಿ
ಬಿರುಕುಗಳಲ್ಲಿ ಸ್ರಾವಕ್ಕೆ ಸಿಕ್ಕು ಸತ್ತ ಬಡಪಾಯಿ ಇರುವೆ
ಅವಳಿಗದು ವರ್ಷಕ್ಕೊಮ್ಮೆ ಸಿಗುವ ವಿಚಿತ್ರ ಸುಖ
ಹೆಜ್ಜೆ ಕಿತ್ತಿಟ್ಟರೆ ಸದ್ದು ಮಾಡುವ ಕೆಸರು
ಅಲ್ಲಲ್ಲ, ಮಕ್ಕಳ ಪಾಲಿಗೆ ಅದುವೇ ಮೊಸರು
ಸಿಗಿದು ಬಿಡುವ ಚೂಪಾದ ಬಿಗಿ ನೇಗಿಲು
ಇಳಿಸಿ, ಬೆಳೆಸಿ, ತೆಗೆ ಬೆಳೆ
ಕಿತ್ತೊಗೆ ಕಳೆ
ನಿನ್ನ ಮುಖದಲ್ಲಷ್ಟೇ ಅಲ್ಲ, ಅವಳ ಮುಖದಲ್ಲೂ ಮಿಂಚುತ್ತೆ ಕಳೆ...
ಮತ್ತೇ ಬಿರುಕು ಬಿಡುತ್ತಾಳೆ.
ಅವನೇ ಬರಬೇಕು, ಆರ್ಭಟಿಸಬೇಕು, ಆಕ್ರಮಿಸಬೇಕು.
ಎಲ್ಲಾ ಮಗ್ಗುಲುಗಳನ್ನು ಆವರಿಸಬೇಕು.
ಆಗಲೇ ಮೈಮನಕ್ಕೆ ತಂಪು-ಕಂಪು ಮೈಥುನ
ಅವನು ಸ್ರವಿಸಲೇ ಬೇಕಲ್ಲ.
ಅದುವೇ ಅಲ್ಲವಾ ನಿಸರ್ಗ ನಿಯಮ.