ಸ್ಲಂ ಮತ್ತು ಸೈಟು

ಸ್ಲಂ ಮತ್ತು ಸೈಟು

ಕವನ

ಏ ಸಿ ರೂಮಲಿ ಕುಳಿತು

ಸ್ಲಂ ಬಗ್ಗೆ ಮಾತನಾಡುವ

ನಿಮ್ಮ ಮೂಗಿಗೆ

ಸ್ಲಂ ಇದರ ವಾಸನೆ ಬಡಿದಿಲ್ಲವೆ ?

ನಾಸಿಕವ ಮುಚ್ಚಿಕೊಳ್ಳಿ

ಮನೆಗೆ ಹೋದಾಗ

ಬಾಗಿಲ ತೆಗೆಯರು

ನಿಮ್ಮ ರಮಣಿಯರು !

 

ಮಹಲುಗಳ ಒಳಗೆ ಕುಳಿತು

ನಮ್ಮ ಬಗ್ಗೆಯೇ ಯೋಚಿಸುವ

ನಿಮಗೆ,ನಮ್ಮವರ ಬಗ್ಗೆ

ಕನಿಕರವಿದೆಯೆ ಹೇಳಿಯಿಂದು 

ನಮಗೆ ಸಿಗುವ ಸವಲತ್ತು

ಹೇಗೆ ನುಂಗಿ ನೀರ್ಕುಡಿಯಬೇಕು

ಷಹರುಗಳಲ್ಲಿ ಹೇಗೆ ಸೈಟು

ಕೊಳ್ಳಬೇಕೆಂಬುವುದೇ ನಿಮ್ಮ ಮೀಟಿಂಗು !

 

ಜೀತವೇ ನಮ್ಮುಸಿರಾದರೆ

ಜಾತಿಯೇ ನಿಮ್ಮುಸಿರು

ವೈಷಮ್ಯ ಬೀಜಗಳ ಬಿತ್ತಿ

ಕೆಲಸ ಸಾಧಿಸುವ ತಂತ್ರ ನಿಮ್ಮದು

ಹುಳುಕು ಮೈಯೊಳಗೆ

ಹೊಲಸುಗಳೆ ತುಂಬಿರಲು

ಬಾಯಿ ಮಾತಿನಲು ಕೆಟ್ಟ ಪದಗಳು

ಸ್ಲಂ ಇದರ ಕನಸಲ್ಲಿ ನಿಮಗೆ ನನಸು !

 

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್