ಸ್ವಯಂಕೃತ...!

ಸ್ವಯಂಕೃತ...!

ಕವನ

ಎಲ್ಲಾ ನಾವೇ ಮಾಡಿ ತಂದುಕೊಂಡಿದ್ದು ಈ ರೋಗ ರುಜನೆ ಖಾಯಿಲೆ, ಕಷ್ಟ ಸಂಕೋಲೆ! ಈಗ ಇದು ಗಾಳಿ‌ಯ ಸೋಂಕಾಗಿ ವಿಶ್ವವ್ಯಾಪಕವಾಗಿ ಜಗದೆಲ್ಲವನು ತರಿದು ತುಳಿದು ಶೋಕತೆಯ ಜೊತೆಗೆ ಶೋಚನೀಯತೆಯ ಕಡೆಗೆ ನಮ್ಮ ನಿಮ್ಮನೆಲ್ಲಾ ತಳ್ಳಿ ಆಡಿಸಿ ಅಳಿಸಿ ನಗಿಸುತ್ತಿದೆ!! ನಡೆ ನುಡಿ ಶುದ್ಧವಿರದೆ ಊಟ ಉಪಚಾರ ಆಚಾರವಿರದೆ! ಎಲ್ಲ ಆಟವಾಡಿ ನಡೆಯುವಾಗ ಅಡ್ಡದಿಡ್ಡಿ ನಡೆದು , ಆಡುವಾಗ ಎದ್ವಾ ತದ್ವ ಮಾತನಾಡಿ, ನಡೆದ್ದೇ ದಾರಿ ನುಡಿದದ್ದೆ ಸತ್ಯವೆಂದು ಈಗ ಅದುರಿ ಅಲುಗಾಡಿ ವ್ಯಥೆಪಟ್ಟರೆ ಮೃತ್ಯು ದವಡೆಯಲ್ಲಿಂದ ಪಾರಾಗಲು ಪರದಾಡಿದರೆ ಹೇಗೆ ಸಾಧ್ಯ?!! ಗಾಳಿ ಬೆಳಕಿಗೆ ಜಾಗಬಿಡದೆ ಮನೆ ಕಟ್ಟಿ ಒಡಾಡಲು ಪಾದಚಾರಿಗಳಿಗೆ ಜಾಗಬಿಡದೆ ರಸ್ತೆಗಳ ನಿರ್ಮಾಣಮಾಡಿ! ಬೆನ್ನುಬೆನ್ನಿಗೆ ಮುಳ್ಳಾಗಿ ಮಗ್ಗಲಮಗ್ಗಲಿ ಕಳ್ಳಿಯಾಗಿ ಪೆಟ್ಟಿಗೆಯಂತೆ ಮನೆಗಳ ಸಾಲು ಮಹಡಿಯ ಮಾಡಿ ಸ್ವಚ್ಛಗಾಳಿ ಸೇವಿಸದೆ ಉಸಿರು ಕಟ್ಟುವಂತೆ, ಬಿಸಿಲ ಸೋಕದಂತೆ ಬದುಕಿ ! ಅಡ್ಡಡ್ಡವಾಗಿ ಉದುದ್ದವಾಗಿ ಬೆಳೆದು ಕಾಂಕ್ರೀಟಿನ ಕಾಡಲಿ, ಈಗ ಕದಹಾಕಿ ಕುಳಿತರೆ ಎಷ್ಟು ದಿನ ಗೃಹ ಬಂಧನ ? ಇನೆಷ್ಟುದಿನ ಗುಪ್ತ ಗುಹ್ಯ ಜೀವನ?!! ಸಂಕುಚಿತ ಭಾವನೆ ಬಿಟ್ಟು ಇನ್ನಾದರೂ ಮನೆ ಮನಗಳು ವಿಸ್ತಾರವಾಗಿರಲಿ ರಸ್ತೆ, ಕೆರೆ, ರಸ್ತೆ ಬದಗಳು ವಿಶಾಲವಾಗಿರಲಿ ಮತಿಯಲಿ ಆಚಾರ ವಿಚಾರ ತುಂಬಿರಲಿ ನಡೆ ನುಡಿಗಳು ಶುದ್ಧವಾಗಿರಲಿ! ಬದುಕುತ್ತಿರುವುದು ಬರೀ ದುಡಿದು ತಿನ್ನಲಿಕ್ಕೆ ಅಲ್ಲ ಓದಿ ಓಡುತ್ತಿರುವುದು ಬರೀ ಹಣಗಳಿಕೆಗಲ್ಲ ದುಡ್ಡಿಂದ ದುಡಿದು ಸೋಂಬೆರಿಗಳಾಗಲು ಅಲ್ಲ! ದಾನ ಧರ್ಮದಿ ಸಮಾಜ ಬೆಳೆಸಲು ಮುಂದಿನ‌ಜನಾಂಗ ಉಳಿಸಲು ಎಂಬುದ ತಿಳಿಸಲು ಬಂದಿದೆ ಈ ಕರೋನ ಇದ ತಿಳಿದರೆ ನಾಳೆಗಿದೆ ನಮ್ಮ ಜೀವನ ಇಲ್ಲದಿರೆ ಸದ್ಯದಲ್ಲೇ ಪರಲೋಕ‌ ಪಯಣ!! #ಜಾನಕಿತನಯಾನಂದ.