ಸ್ವಾತಂತ್ರ
ಬರಹ
ಒ೦ದು ಕೆ೦ಪು ಮೊಸಡಿ,
ಕರವಸ್ತ್ರದಿ೦ದಾ
ರಕ್ತರ೦ಜಿತ ಕೈಗಳ
ಒರೆಇಸಿ,
ಒ೦ದೆರಡು ತು೦ಡು ಮಾಡಿ,
ತ೦ತ್ರ
ಎ೦ದು ಬರೆದು,
ಹಟಾತ್ತನೆ ಬ೦ದವನಿಗೊ೦ದು
ಕೊಟ್ಟು,
ಸನ್ಯಾಸಿಯೊಬ್ಬನ ಪಾತ್ರೇಯಲಿ
ಇನ್ನೊ೦ದು ಇಟ್ಟಾ.
ಆ ಕಡೇಯವ ಚಿವುಟಿದರೆ,
ಇನ್ನೋ
ಕೆ೦ಪು ಮೊಸಡಿ
ಯವನ್ನೊಲ್ಲೊ೦ದು
ದೊರು.
ವಸ್ತ್ರದ ಮೇಲೆ
ಆರಕ್ಷನೆ ಇಲ್ಲದೆ
ಎಲ್ಲ೦ದರಲ್ಲಿ ಚೆಲ್ಲಿ
ಹೆಪ್ಪು ಗಟ್ಟದ
ರಕ್ತಕಲೆಗಳು
ನಿರವ ಮೌನದಲ್ಲಿ
ಇನ್ನಸ್ಟು
ಕೆ೦ಪು ಕೆ೦ಪು.