ಸ್ವಾತಂತ್ರ್ಯ ದಿನಾಚರಣೆಯ ಕುರಿತ ಕವನಗಳು

ಸ್ವಾತಂತ್ರ್ಯ ದಿನಾಚರಣೆಯ ಕುರಿತ ಕವನಗಳು

ಕವನ

*ಸ್ವಾತಂತ್ರ್ಯೋತ್ಸವ*

 

ಸ್ವಾತಂತ್ರ್ಯೋತ್ಸವ ಬಂದಿತು ಬನ್ನಿರಿ

ತಿರಂಗ ಭಾವುಟ ಹಾರಿಸಿರಿ

ಗುಲಾಮ ಗಿರಿತನ ವಿಮುಕ್ತಿ ಹೊಂದಿದ

ಸುವರ್ಣ ದಿನವಿದು ಸ್ಮರಿಸಿರಿ||

 

ಭಾರತ ಮಾತೆಗೆ ಜೈಘೋಷ ಹಾಕುತ

ವೀರರ ಮನದಲಿ ನೆನಪಿಸಿರಿ

ನಾಡಿಗೆ ಪ್ರಾಣವ ತ್ಯಾಗವ ಮಾಡಿದ

ಯೋಧರ ಚಿತ್ರಕೆ ವಂದಿಸಿರಿ||

 

ಸಿಪಾಯಿ ದಂಗೆಯ ಪೂರ್ತಿಯ ಚಿತ್ರಣ

ಮಕ್ಕಳ ಮನಸಿಗೆ ತಲುಪಿಸಿರಿ

ಮಕ್ಕಳ ಹೃದಯದಿ ಸ್ವತಂತ್ರ ಭಕ್ತಿಯ

ಹಣತೆಯ ಪ್ರಭೆಯ ಬೆಳಗಿಸಿರ||

 

ನಮ್ಮಯ ನಾಡಿದು ಹೆಮ್ಮೆಯ ಬೀಡಿದು

ಸಂತರು ನೆಲೆಸಿದ ನೆಲೆವೀಡು

ಗಂಗಾ ಯಮುನಾ ಪುಣ್ಯದ ನದಿಗಳು

ಉಗಮಿಸಿ ಹರಿಯುವ ನೆಲೆಬೀಡು||

 

- ಶ್ರೀ ಈರಪ್ಪ ಬಿಜಲಿ 

ಐಕ್ಯ ಗಾನ ಮೊಳಗಲಿ

ದೇಶದ ಗುಡಿಯ ಮೇಲ್ಗಡೆ ಹಾರಿಸಿ

ರಾಷ್ಟ್ರದ ಧ್ವಜವನು - ಓ ಜನರೆ

ತಾಯಿಯ ಕರುಳಿನ ಕುಡಿಗಳು ನಾವು

ಎನುತಲಿ ಬಾಳಿರಿ - ಓ ಜನರೆ

 

ಸತ್ಯದ ನೆಲೆಯಲಿ ಶಾಂತಿಯ ಬದುಕಲಿ

ತ್ಯಾಗವ ಮಾಡಿರಿ - ಓ ಜನರೆ

ಭೇದವ ತೊರೆಯುತ ಐಕ್ಯದ ಗಾನದಿ

ಮುಂದಕೆ ನಡೆಯಿರಿ - ಓ ಜನರೆ

 

ಛಲವನು ಮುರಿಯದೆ ಸಾಹಸದಿಂದಲಿ

ಗುರಿಯನು ಮುಟ್ಟಿರಿ - ಓ ಜನರೆ

ಕಷ್ಟವು ಬಂದರು ನಷ್ಟವು ಬಂದರು

ಭಕ್ತಿಯ ಬಿಡದಿರಿ - ಓ ಜನರೆ

 

ಹಿರಿಯರ ನುಡಿಯನು ನಡತೆಯ ಗುಣವನು

ತುಂಬುತ ಸಾಗಿರಿ - ಓ ಜನರೆ

ಶಾಂತಿಯ ಬದುಕಲಿ ತತ್ವವ ಸಾರುತ

ಸೇವೆಯ ಗೈಯಿರಿ - ಓ ಜನರೆ

 

ಅಂಜದೆ ಅಳುಕದೆ ನಿಷ್ಠೆಯ ತೋರುತ

ದೇಶವ ಕಟ್ಟಿರಿ - ಓ ಜನರೆ

ದೇಶದ ಗುಡಿಯ ಮೇಲ್ಗಡೆ ಹಾರಿಸಿ

ರಾಷ್ಟ್ರದ ಧ್ವಜವನು - ಓ ಜನರೆ

 

ಎಲ್ಲರಿಗೂ ೭೪ ನೇ ವರುಷದ ಸ್ವಾತಂತ್ರ್ಯ ದಿನದ ಶುಭಾಷಯಗಳು ... ಭರತ ಮಾತೆಗೆ ಜೈ ಹೊ , ಕನ್ನಡಾಂಬೆಗೆ ಜೈ ಹೊ ... ಶುಭವಾಗಲಿ ಸರ್ವರಿಗೂ ಒಳ್ಳೆಯದಾಗಲಿ .

- ಹಾ ಮ ಸತೀಶ

ಚಿತ್ರ ಕೃಪೆ: ಅಂತರ್ಜಾಲ

 

ಚಿತ್ರ್