ಸ್ವಾತಂತ್ರ್ಯ ಮತ್ತು ಮನಸ್ಸುಗಳು

ಸ್ವಾತಂತ್ರ್ಯ ಮತ್ತು ಮನಸ್ಸುಗಳು

ಸ್ವಾತಂತ್ರ್ಯ ದ ಆಚರಣೆ ಸಡಗರ ದೇಶದೆಲ್ಲೆಡೆ ನಡೆಯುತ್ತಿರುವಾದ ಪ್ರವಾಹದಿಂದ ಸಂತ್ರಸ್ತರಾದ ಜನರ ಬದುಕು ಸ್ವಾತಂತ್ರ್ಯ ವನ್ನೇ ಪ್ರಶ್ನೆ‌ ಮಾಡುತ್ತಾ ನಿಂತಿರುವುದು ತಪ್ಪೇನಲ್ಲ. ಕೆಲವೆಡೆ ಹರ್ಷದ ವಾತಾವರಣ ಇದ್ದರೆ ಕೆಲವೆಡೆ ನಿರಾಳ‌ ಮೌನ. ಸ್ವಾತಂತ್ರ್ಯ ವನ್ನು‌ ಆಚರಣೆ ಮಾಡುವುದು ಮತ್ತು ಸ್ವಾತಂತ್ರ್ಯ ಹೋರಾಟಗಾರರಿಗೆ ನಮನವನ್ನು ಸಲ್ಲಿಸುವುದು ನಮ್ಮ ಆದ್ಯ ಕರ್ತವ್ಯ. ವೀರ ಹೋರಾಟಗಾರರಿಗಿದ್ದ ಆ ದೇಶಪ್ರೇಮ, ಸಹನೆ, ಛಲ, ಎಲ್ಲವನ್ನೂ ಎದುರಿಸುವ ಎದೆಗಾರಿಕೆ, ಸಂಘಟಿತಾ ಮನೋಭಾವದ ಫಲವಾಗಿದೆ ನಾವಿಂದು ಆಚರಿಸುವ ದೇಶದ ಹಬ್ಬ. ವಿವಿಧತೆಯಲ್ಲಿ ಏಕತೆಯನ್ನು‌ ಕಾಣುವ ಭಾರತದ ಸಂಸ್ಕೃತಿಯ ಲ್ಲಿ‌ ಈ ದೇಶಕ್ಕಾಗಿ‌ ತಮ್ಮ‌ ಪ್ರಾಣವನ್ನು ಬ್ರಿಟಿಷರಿಗೆ ಅರ್ಪಣೆ ಮಾಡಿದ ವೀರರ ಚರಿತ್ರೆ ಗಳು ನಮಗೆ ಪ್ರೇರಣೆ ಯನ್ನು ನೀಡದೇ ಇದ್ದರೆ ನಾವು ಆಚರಿಸುವ ಸ್ವಾತಂತ್ರ್ಯಕ್ಕೆ ಅರ್ಥವೇ ಕಾಣಲಾರದು.

ವಸಾಹತು ಶಾಹಿ‌ ಬ್ರಿಟಿಷರ ವಿರುದ್ಧ ಭಾರತೀಯರ ಹೋರಾಟ ಬಹಳಾ ಹಿಂದಿನಿಂದಲೇ ಶುರುವಾಗಿತ್ತು. ಅದಕ್ಕೊಂದು ದೊಡ್ಡ ಅಧ್ಯಾಯವೇ ಇದೆ. 1757 ರಲ್ಲಿ‌ ಸಿರಾಜುದ್ದೌಲ ನಿಗೂ‌ ಬ್ರಿಟಿಷರಿಗೂ ನಡೆದ ಪ್ಲಾಸೀ‌ ಕದನವಾಗಿತ್ತು‌ ಬ್ರಿಟಿಷರ ವಿರುದ್ಧ ಸಂಘರ್ಷ ದ ಪ್ರಥಮ ಮೆಟ್ಟಿಲು. ಪ್ರಬಲ ಹೋರಾಟದ ಹೊರತಾಗಿಯೂ ಈಸ್ಟ್ ಇಂಡಿಯಾ ಕಂಪನಿ ಬಂಗಾಳದ ಅಧಿಪತ್ಯವನ್ನು ಪಡೆಯಿತು. ನಂತರದ ದಿನಗಳಲ್ಲಿ ಪ್ರಬಲವಾಗಿ‌‌‌ ಬ್ರಿಟಿಷರ ವಿರುದ್ದ ಹೋರಾಟ ಮಾಡಿದ್ದು‌ ಟಿಪ್ಪು ಸುಲ್ತಾನ್. ಅಂದಿನ ಪ್ರಬಲವಾದ ಬ್ರಿಟಿಷರ ಸೇನೆಯ ವಿರುದ್ದ ತನ್ನ ಅಪ್ರತಿಮ ಪರಾಕ್ರಮ ಮತ್ತು ಹೊಸ ಆಧುನಿಕ ಅಸ್ತ್ರ ದ ಮೂಲಕ‌ ಹೋರಾಟ ಮಾಡಿದ ಟಿಪ್ಪುವಿನ ಪರಾಕ್ರಮಗಳು, ತನ್ನ ಮಕ್ಕಳನ್ನು ಒತ್ತೆ ಇಟ್ಟ ಚರಿತ್ರೆಗಳು, ಟಿಪ್ಪುವಿನ ವೀರ ಮರಣ ಸ್ವಾತಂತ್ರ್ಯ ದ ಭಾವನೆಗಳನ್ನು‌ ಭಾರತೀಯರಲ್ಲಿ‌‌ ಬಿತ್ತಲು‌ ಪ್ರೇರಣೆ ಯಾಯಿತು.

ಈ ಪ್ರೇರಣೆ 1857 ರ ಸಿಪಾಯಿ ದಂಗೆಯಲ್ಲಿ ಸಂಘಟಿತ ಮನೋಭಾವ ದಿಂದ ಬ್ರಿಟಿಷರ ವಿರುದ್ದ‌ ಹೋರಾಡಲು ‌ಸಹಕಾರಿಯಾಯಿತು. ಹಲವು ಪ್ರದೇಶದಲ್ಲಿ ಹೋರಾಡದ ಕಿಚ್ಚು ಹೆಚ್ವಾದಾಗ ಬ್ರಿಟಿಷರಲ್ಲಿ‌ ಆತಂಕ‌ ಜಾಸ್ತಿಯಾಯಿತು. 1900 ರ ವೇಳೆಗೆ ಸಂಘಟಿತ ಭಾರತೀಯ ರನ್ನು ಇಬ್ಬಾಗ ಮಾಡಿ ಒಡೆದು ಆಳುವ ನೀತಿಯನ್ನು ಜನರಲ್ಲಿ ಬಿತ್ತರಿಸುವ ತನ್ನ ಯೋಜನೆಯಲ್ಲಿ ಅದು ಸಫಲವಾಯಿತು ಇದರ ತರುವಾಯ ಹಿಂದೂ, ಮುಸ್ಲಿಮರ ನಡುವೆ ಕೋಮು ಗಲಭೆಗಳು ಉಂಟಾದವು ಹಾಗೂ ಪುನಃ ಬ್ರಿಟಿಷರು ಹಿಡಿತ ಸಾಧಿಸಿದರು. ಭಾರತದ ಸ್ವಾತಂತ್ರ್ಯ ದ ಆಸೆಗೆ ಹಿನ್ನೆಡೆಯಾಯಿತು. ಅದರ ಒಂದು ಭಾಗವಾದ 'ರಾಷ್ಟ್ರೀಯ ಸ್ವಯಂ ಸೇವಕಾ ಸಂಘ'ವೂ ಮುಸ್ಲಿಮರ ವಿರುದ್ದವಾದ ಕೋಮು ದ್ವೇಷವನ್ನು ಪಸರಿಸಿತು.‌ಬ್ರಿಟಿಷರ‌ ವಿರುದ್ದ ಹೋರಾಡುವುದಾಗಲೀ, ತಮ್ಮ‌ ಸದಸ್ಯರು ಅದನ್ನು ಬೆಂಬಲಿಸುವುದಾಗಲೀ ಅದಕ್ಕೆ ಇಷ್ಟವಿರಲಿಲ್ಲ, ಬದಲಾಗಿ‌ 'ಬ್ರಿಟಿಷರೊಂದಿಗಿನ ಹೋರಾಟದಿಂದ ಸಮಯವನ್ನು ವ್ಯರ್ಥಮಾಡಬೇಡಿ' ಎಂದು ತಮ್ಮ ಸದಸ್ಯರು ಸ್ವಾತಂತ್ರ್ಯ ದಲ್ಲಿ‌ ಪಾಲ್ಗೊಳ್ಳದಂತೆ ಅದು ತಡೆಯಿತು. ಇದರ ಹೊರತಾಗಿಯೂ ದೇಶಪ್ರೇಮಿ ನಾಯಕರ ಹಾಗೂ ಹೋರಾಟ ಗಾರರ ಹೋರಾಟದ ಫಲವಾಗಿ ಸ್ವಾತಂತ್ರ್ಯ ವನ್ನು‌ ಪಡೆಯುವಲ್ಲಿ ಯಶಸ್ವಿಯಾಯಿತು.

ಈ ಸ್ವಾತಂತ್ರ್ಯ ವೀರರ ಬದುಕು ಕೇವಲ‌ ಸ್ವಾತಂತ್ರ್ಯ ಕ್ಕಷ್ಟೇ ಸೀಮಿತವಲ್ಲ. ಭಾರತದ ಇಂಚು ಇಂಚು ಪ್ರಗತಿಯಲ್ಲೂ ಅವರ ತ್ಯಾಗದ ಹೆಜ್ಜೆಗಳಿವೆ. ಹೋರಾಟದ ಮುಂಚೂಣಿ ಯಲ್ಲಿದ್ದ ಹಲವಾರು ವೀರರು ನಮಗೆ ಸಂತೋಷ ವನ್ನು‌ ನೀಡಿ ಮರೆಯಾಗಿದ್ದಾರೆ.ಸ್ವಾತಂತ್ರ್ಯ ಹೋರಾಟಗಾರರ‌ ಪ್ರಮುಖವಾದ ಪಾತ್ರಗಳನ್ನು‌‌‌‌ ನಾವು ತಿಳಿದುಕೊಳ್ಳುವ ಅಗತ್ಯ ತೆ ಇದೆ. ಗಾಂಧೀಜಿಯ ಅಹಿಂಸಾತ್ಮಕ ತತ್ತ್ವ, ಪ್ರತಿಭಟನೆಯ ಹಾದಿಗಳು ಹೆಚ್ಚಿನ‌ ಮಹತ್ವವನ್ನು ಪಡೆದುಕೊಂಡಿತು. ಮೌಲಾನಾ ಶೌಕತ್ ಆಲಿ ಮತ್ತು ಮಹಮ್ಮದ್ ಆಲಿ ನೇತ್ರತ್ವದ ಖಿಲಾಫತ್ ಚಳವಳಿ ಸಕ್ರಿಯ ಪಾತ್ರವನ್ನು ವಹಿಸಿತು. ಆ್ಯನಿಬೆಸೆಂಟ್ ರ ಕ್ರಿಯಾಶೀಲತೆ, ಸುಭಾಷ್ ಚಂದ್ರ ಭೋಸ್ , ಭಗತ್ ಸಿಂಗ್, ಅಶ್ಫಾಕುಲ್ಲಾ ಖಾನ್ ಗಾಂಧೀಜಿ ಯ ಅಹಿಂಸಾ ತತ್ವವನ್ನು ಒಪ್ಪುತ್ತಿರಲಿಲ್ಲವಾರೂ ಸ್ವಾತಂತ್ರ್ಯ ದ ಗುರಿಗಳು, ಅವರ ಕಲ್ಪನೆಗಳು‌‌ ಒಂದೇ ಆಗಿತ್ತು.

ಅಶ್ಫಾಕುಲ್ಲಾ ಖಾನ್, ಭಗತ್ ಸಿಂಗ್ ನಂತಹ ಯುವಕರು ಭಾರತದ ಮಣ್ಣಿಗಾಗಿ ತಮ್ಮ ಪ್ರಾಣವನ್ನು ಮುಡುಪಾಗಿಟ್ಟಿದ್ದಾರೆ. 27 ನೇ ವಯಸ್ಸಿನಲ್ಲಿ ಬ್ರಿಟಿಷರಿಂದ ಗಲ್ಲಿಗೇರಿಸಲ್ಪಟ್ಟ ಅಶ್ಫಾಕುಲ್ಲಾ ಖಾನ್ ನ ಬಲಿದಾನಕ್ಕೆ ನಾವು ಗರವ ನೀಡಬೇಕಾಗಿದೆ. ಅವರಲ್ಲಿದ್ದ ಸಂಘರ್ಷದ ಶಕ್ತಿ ಯ ಹಿಂದಿರುವ ರಾಷ್ಟ್ರ ಪ್ರೇಮದ ಪ್ರೇರಣೆ ನಮ್ಮ ಯುವ ಜನಾಂಗದ ಲ್ಲಿ‌ ಬರಬೇಕಾಗಿದೆ. ಬ್ರಿಟಿಷರ ಗುಂಡಿಗೆ ಆವತ್ತು ನಿರಾಯುಧರಾದ ಬಾರತೀಯರ ಮಾರಣ ಹೋಮ‌‌ ನಡೆದಿತ್ತು. ಜಲಿಯನ್ ವಾಲಾಬಾಗ್ ನಲ್ಲಿ 1000 ಕ್ಕೂ‌ ಅಧಿಕ‌‌ ಮಂದಿ ಬ್ರಿಟಿಷರ ಗುಂಡಿಗೆ ಬಲಿಯಾದಾಗ ನೆತ್ತರು ತುಂಬಿದ ಮಣ್ಣನ್ನು ಬಾಟಲಿಯಲ್ಲಿ‌ ಹಾಕಿ‌ ತಂದಾಗ ಕೇವಲ‌ ಭಗತ್ ಸಿಂಗ್ 14 ರ ಹುಡುಗ. ಆ ನೆತ್ತರ ಪ್ರತೀಕಾರ ಅವನನ್ನು ಹೋರಾಟದಲ್ಲಿ‌ ಸಕ್ರಿಯ ವಾಗುವಂತೆ ಮಾಡಿತು. 'ಇಂಕಿಲಾಬ್ ಝಿಂದಾಬಾದ್' ನ ಘೋಷಣೆಯೊಂದಿಗೆ ಹೋರಾಟದ ಕಹಲೆಯನ್ನು‌ ಪಸರಿಸಿದ ಭಗತ್‌ ಸಿಂಗ್ ನನ್ನು ಗಲ್ಲಿಗೇರಿಸುವಾಗ ಆಯುಷ್ಯ ಕೇವಲ 23 ವರ್ಷ.ಯುವ ಪೀಳಿಗೆಗಳಿಗೆ‌ ಈ ಆದರ್ಶಗಳನ್ನು‌ಪಸರಿಸುವುದು‌ ನಮ್ಮ ಕರ್ತವ್ಯದ ಭಾಗವಾಗಿದೆ. ಸಂವಿಧಾನದ ಆಶಯ ಆದರ್ಶಗಳಿಗೆ ಅನುಗುಣವಾಗಿ ಸ್ವಾತಂತ್ರ್ಯ ವನ್ನು‌ ಆಚರಿಸಬೇಕಿದೆ. ಸಂವಿಧಾನಕ್ಕೆ‌ ಗೌರವ ನೀಡದ ಅದೆಷ್ಟೋ ರಾಜಕಾರಣಿಗಳು ಸ್ವಾತಂತ್ರ್ಯ‌ ದಿನಾಚರಣೆಯಲ್ಲಿ ಧ್ವಜಾರೋಹಣ ಮಾಡುತ್ತಿರುವುದು ತೀರಾ ಕಳವಳಕಾರಿ. ಇದರಿಂದ ಸ್ವಾತಂತ್ರ್ಯ ದ ಗೌರವವನ್ನು ನಾವೇ ಹಾಳುಗೆಡವಿದಂತಾಗುತ್ತದೆ. ಸಂವಿಧಾನವನ್ನು ಗೌರವಿಸುವ, ಹಾಗೂ ದೇಶಕ್ಕಾಗಿ ಪ್ರಾಣವನ್ನು ಬಲಿದಾನ ಮಾಡಿದ ಹೋರಾಟಗಾರರ ಸ್ವಾತಂತ್ರ್ಯ ದ ನೈಜ ವಾದ ಉದ್ದೇಶವನ್ನು ನಾವು ಉಳಿಸಿಕೊಳ್ಳಬೇಕಿದೆ.