ಸ್ವಾದಿಷ್ಟ ದಿಢೀರ್ ಗಿಣ್ಣು

೧ ಬಟ್ಟಲು ಸಿಹಿ ಮೊಸರು, ೧ ಬಟ್ಟಲು ಹಾಲು, ¾ ಬಟ್ಟಲು ಸಕ್ಕರೆ, ¼ ಬಟ್ಟಲು ಚರೋಟಿ ರವೆ, ೧ ಬಟ್ಟಲು ನೀರು, ೪-೬ ಒಣದ್ರಾಕ್ಷಿ, ¼ ಬಟ್ಟಲು ದಪ್ಪ ಅವಲಕ್ಕಿ, ಸಣ್ಣಸಣ್ಣ ಚೂರು ಮಾಡಿದ ೮ ಗೋಡಂಬಿ, ೧ ಚಮಚ ಏಲಕ್ಕಿಪುಡಿ, ೨ ಲವಂಗ
ಚರೋಟಿರವೆಯನ್ನು ಸಣ್ಣ ಉರಿಯಲ್ಲಿ ಕಮ್ಮಗೆ ಹುರಿಯಬೇಕು, ೧೦ ನಿಮಿಷ ದಪ್ಪ ಅವಲಕ್ಕಿ ನೀರಿನಲ್ಲಿ ನೆನಸಿಡಿ. ದಪ್ಪ ತಳದ ಪಾತ್ರೆಯಲ್ಲಿ ನೀರು, ಹಾಲು, ಮೊಸರು, ಸಕ್ಕರೆ ಬೆರಸಿ ಸಣ್ಣ ಉರಿಯಲ್ಲಿ ಕೈ ಆಡಿಸುತ್ತಾ ಕುದಿಸಿ, ಹುರಿದ ರವೆ ಹಾಕಿ ಬೇಯುವ ತನಕ ಮಗುಚಬೇಕು. ಇದಕ್ಕೆ ನೆನಸಿದ ಅವಲಕ್ಕಿ ತುಪ್ಪದಲ್ಲಿ ಹುರಿದ ಗೋಡಂಬಿ, ದ್ರಾಕ್ಷಿ, ಏಲಕ್ಕಿ ಹಾಕಿ ಚೆನ್ನಾಗಿ ಮಿಶ್ರಮಾಡಿ ಮಗುಚಿ ಇಳಿಸಿ. ಸ್ವಲ್ಪ ಆರಿದ ನಂತರ ಸಣ್ಣಸಣ್ಣ ತಟ್ಟೆಗಳಿಗೆ ಹಾಕಿ ಸವಿಯಿರಿ.
ರುಚಿಕರವಾದ ಹಸು/ಎಮ್ಮೆ ಹಾಲಿನ ಗಿಣ್ಣ ಎಲ್ಲರಿಗೂ ಪ್ರಿಯವೆ. ಆದರೆ ಗಿಣ್ಣ ಹಾಲು ಎಲ್ಲ ಸಮಯದಲ್ಲೂ ಸಿಗುವುದಿಲ್ಲ. ಬಹಳ ಸುಲಭವಾಗಿ ಗಿಣ್ಣದಷ್ಟೆ ಸ್ವಾದಷ್ಟ ಕೊಡಬಲ್ಲ ಈ ಗಿಣ್ಣ ತಯಾರಿಯೂ ಸುಲಭ ಸಾಮಗ್ರಿಗಳು ಕೈಗೆಟಕುವುದರಿಂದ ಬೇಕೆನಿಸಿದಾಗ ಗಿಣ್ಣದ ಸವಿ ಸವಿಯಬಹುದು.
-ಎಸ್. ರೋಹಿಣಿ ಶರ್ಮ, ಸಾಗರ.