ಸ್ವಾಭಿಮಾನ

ಸ್ವಾಭಿಮಾನ

ಬರಹ

ಇನ್ನಾದರೂ ಸೋಲು..
ಇಷ್ಟೆಲ್ಲಾ ಆದ ಮೇಲೂ..

ಬಂದ ಭಾವನೆಗಳಿಗೆ ಬೇಲಿ ಹಾಕಿ
ಬಂಧಿಸಿದಾದ ಮೇಲೂ ..

ಆಸರೆಗಾಗಿ ತಡಕಾಡುತಿದ್ದ ಕರಗಳಾ..
ಕಟ್ಟಿ ಹಾಕಿದ ಮೇಲೂ...

ಸಜ್ಜನರಿಗಾದರೂ ಬಾಗಬೆಕಿದ್ದ ಶಿರವ..
ಧಿಕ್ಕರಿಸಿ ಮೆರೆವಂತೆ ಮಾಡಿದ ಮೇಲೂ..

ಒತ್ತರಿಸಿ ಬಂದ ಕಂಬನಿಯಾ..
ಕಣ್ಣೆವೆಗಳ ತೇವಕ್ಕೆ ಮಾತ್ರ, ಮೀಸಲಾಗಿಸಿದ ಮೇಲೂ..

ಇನ್ನಾದರೂ ಬಿಡುವೆಯ ನನ್ನ..
ಒಮ್ಮೆ ಮನತುಂಬಿ ನಿರರ್ಗಳವಾಗಿ ಅಳಲು...

ಇನ್ನಾದರೂ ಸೋಲು ನೀ ಮನವೇ..
ಇಷ್ಟೆಲ್ಲಾ.. ಆದ ಮೇಲೂ..