ಸ್ವಾಮಿ ವಿವೇಕಾನಂದರ ಆಯ್ದ ಸಿಂಹವಾಣಿಗಳು

ಸ್ವಾಮಿ ವಿವೇಕಾನಂದರ ಆಯ್ದ ಸಿಂಹವಾಣಿಗಳು

★ ಸಾಧ್ಯವೇ ಇಲ್ಲ ಎಂದುಕೊಂಡರೆ ಏನನ್ನೂ ಸಾಧಿಸಲಾಗದು.  ಪ್ರಯತ್ನಿಸುವುದರಿಂದ ನಷ್ಟವೇನಿದೆ? ಗೆದ್ದರೆ ಸಂತೋಷ, ಸೋತರೆ ಅನುಭವ.

★ ನಮ್ಮ ದುಃಖಗಳಿಗೆಲ್ಲ ನಾವೇ ಜವಾಬ್ಧಾರರು, ಮತ್ತಾರೂ ಅಲ್ಲ. ನಮ್ಮ ಅದೃಷ್ಟವನ್ನು ರೂಪಿಸಿಕೊಳ್ಳುವವರು ನಾವೇ.

★ ಸಾಧ್ಯವೇ ಇಲ್ಲ ಎಂದುಕೊಂಡರೆ ಏನನ್ನೂ ಸಾಧಿಸಲಾಗದು. ಪ್ರಯತ್ನಿಸುವುದರಿಂದ ನಷ್ಟವೇನಿದೆ? ಗೆದ್ದರೆ ಸಂತೋಷ, ಸೋತರೆ ಅನುಭವ.

★ ಕಾಲ ಕೆಟ್ಟಿತೆಂದು ಜನರು ಹೇಳುತ್ತಾರೆ. ಆದರೆ, ಕಾಲ ಕೆಡುವುದಿಲ್ಲ. ಕೆಡುವುದು ಜನರ ನಡತೆ ಮತ್ತು ಆಚಾರ- ವಿಚಾರ ಮಾತ್ರ.

★ ಗುರು ಎಂದರೆ ವ್ಯಕ್ತಿಯಲ್ಲ, ಒಂದು ಶಕ್ತಿ. ಅಜ್ಞಾನದ ಕತ್ತಲೆಯ ಕಳೆದು ಸುಜ್ಞಾನದೆಡೆಗೆ ಕರೆದುಕೊಂಡು ಹೋಗುವ ಶಬ್ಧವೇ ಗುರು.

★ ಜೀವ ನಮ್ಮ ಮಾತನ್ನು ಕೇಳುವುದಿಲ್ಲ, ಯಾವಾಗ ಬೇಕಾದರೂ ಹೋಗಬಹುದು. ಜೀವನ ನಮ್ಮ ಮಾತನ್ನು ಕೇಳುತ್ತದೆ, ಹೇಗೆ ಬೇಕಾದರೂ ರೂಪಿಸಿಕೊಳ್ಳಬಹುದು.

★ ಸಾಧನೆ ಇಲ್ಲದೇ ಸತ್ತರೆ ಸಾವಿಗೆ ಅವಮಾನ. ಆದರ್ಶ ಇಲ್ಲದೆ ಬದುಕಿದರೆ ಬದುಕಿಗೆ ಅವಮಾನ.

★ ನಿಮ್ಮನ್ನು ನೀವು ಜಯಿಸಿ, ಆಗ ಇಡೀ ಜಗತ್ತೇ ನಿಮ್ಮದಾಗುತ್ತದೆ.

★ ನೀನು ಯೋಚನೆ ಮಾಡದೆ ಹೇಳುವ ಒಂದೊಂದು ಮಾತು, ನಿನ್ನನ್ನು ಒಂದೊಂದು ನಿಮಿಷವೂ ಯೋಚನೆ ಮಾಡಿಸುತ್ತೆ.

★ ಮಾರ್ಗದರ್ಶನ ನೀಡುವವರು ಇಲ್ಲದಿದ್ದರೇನು? ಹೊಸ ಮಾರ್ಗ ಸೃಷ್ಟಿಸುವ ಧೈರ್ಯ, ತಾಕತ್ತು ನಿನ್ನಲ್ಲಿದ್ದರೆ ಇಡೀ ಜಗತ್ತು ನಿನ್ನ ಹಿಂದೆ.

★ ಹಣವಂತರ ಜೊತೆ ನೂರಾರು ವರ್ಷ ಬದುಕುವುದಕ್ಕಿಂತ, ಹರದಯವಂತರ ಜೊತೆ ಮೂರು ದಿನ ಬದುಕಿದರೂ ಜೀವನ ಸಾರ್ಥಕ.

★ ನಿನ್ನ ಹೃದಯದಲ್ಲಿ ಪ್ರಾಮಾಣಿಕತೆ ತುಂಬಿದ್ದರೆ ನಿನ್ನ ಶತ್ರು ಮಾತ್ರವಲ್ಲ, ಇಡೀ ಪ್ರಪಂಚ ನಿನ್ನೆದುರು ಆಯುಧವನ್ನು ಕೆಳಗಿಡುತ್ತದೆ.

★ ಮನಸ್ಸನ್ನು ಶಕ್ತಿಯುತವೂ, ಶಿಸ್ತುಬದ್ದವೂ ಆಗಿಸುವುದರಲ್ಲಿಯೇ ಜ್ಞಾನದ ಮೌಲ್ಯವಿರುವುದು.

★ ನಿಂತ ನೀರಿನಲ್ಲಿ ಕ್ರಿಮಿ ಹುಟ್ಟುತ್ತವೆ. ಕೆಲಸವಿಲ್ಲದವ ಮನುಷ್ಯನಲ್ಲಿ ಕೆಟ್ಟ ವಿಚಾರಗಳು ಜನಿಸುತ್ತವೆ.

★ ನಿನ್ನ ನಂಬಿದವರನ್ನು ಎಂದಿಗೂ ಮೋಸ ಮಾಡಬೇಡ, ಸಹಾಯ ಮಾಡಿದರವರನ್ನು ಮರೆಯಬೇಡ, ಮನೆ ಬಾಗಿಲಿಗೆ ಬಂದವರನ್ನು ಅವಮಾನ ಮಾಡಬೇಡ.

★ ಸತ್ಯಕ್ಕಾಗಿ ಯಾವುದನ್ನು ಬೇಕಾದರೂ ತ್ಯಾಗ ಮಾಡಿ. ಆದರೆ, ಯಾವುದಕ್ಕೂ ಸತ್ಯವನ್ನು ತ್ಯಾಗ ಮಾಡಬೇಡಿ.

★ ಬದುಕುವ ಆಸೆ ಇದ್ದರೆ ನಿನ್ನ ಶತ್ರುಗಳ ಕಣ್ಣೆದುರಲ್ಲೇ ಬದುಕು. ಅವರು ನಿನ್ನ ಎದುರು ಸುಳಿದಾಗೆಲ್ಲಾ ನಿನ್ನಲ್ಲಿ ಬದುಕುವ ಛಲ ಎಚ್ಚೆತ್ತುಕೊಳ್ಳುತ್ತದೆ.

★ ಇತರರಿಗಾಗಿ ಯಾರು ಮರುಗುತ್ತಾರೋ, ಅವರೇ ನಿಜವಾಗಿ ಬದುಕಿರುವವರು. ಉಳಿದವನು ಬದುಕಿದ್ದೂ ಸತ್ತಂತೆ.

  —ಸ್ವಾಮಿ ವಿವೇಕಾನಂದ.

(ಬಸಯ್ಯ ಗ. ಮಳಿಮಠ ಸಂಗ್ರಹಿತ)