ಸ್ವಾರಸ್ಯಕರ ದೆವ್ವದ‌ ಕಥೆ.,

ಸ್ವಾರಸ್ಯಕರ ದೆವ್ವದ‌ ಕಥೆ.,

ಇದು ಹೀಗ್ಗೆ ನಾಲ್ಕೈದು ವರ್ಷಗಳ ಹಿ೦ದೆ ಕೇಳಿದ ಕಥೆ.....

    ಶ್ರೀರಾಮ ಅವನ ಹೆಸರು. ಆಗಂತ ಪಕ್ಕಾ ಶ್ರೀರಾಮಚಂದ್ರ ಎಂದೇನು ಭಾವಿಸಬೇಡಿ.ಅತ ಇನ್ನು ಅವಿವಾಹಿತ.ಅತನ ಗೆಳೆಯ ಶೇಕರ.ಅವನದು  ಮಂಡ್ಯ ಸಮೀಪದ ಯಾವುದೋ ಹಳ್ಳಿ ಆತನ   ಊರು.ಇವರಿಬ್ಬರು ಬೆಂಗಳೂರಿನ ಸ್ನೇಹಿತರು.ಒಂದೇ ಕಂಪನಿಯಲ್ಲಿ ನಿಯತ್ತಾಗಿ ದುಡಿಯುತಿದ್ದರು.ಶೇಕರನಿಗೆ ಕಂಕಣ ಬಲ ಕೂಡಿ ಬಂದಿತ್ತು.ಅವನ ಮನೆಯವರು ಅವನಿಗೊಂದು ಹೆಣ್ಣು ನೋಡಿ ಮದುವೆ ಮಾಡಲು ನಿಶ್ಚಯಿಸಿದ್ದರು.ಮದುವೆಯ ಕಾರಣದಿಂದ ಶೇಕರ ಎಲ್ಲ ಗೆಳೆಯರಿಗೂ ಆಮಂತ್ರಣ ನೀಡಿ ಶ್ರೀರಾಮನಿಗು ಆಮಂತ್ರಣ ನೀಡಿ ಖಂಡಿತ ಬರಲೇಬೇಕು ಎಂದು ಹೇಳಿ ಒ೦ದು ಹದಿನೈದು ದಿನ ಮು೦ಚೆಯೆ ರಜಾ ಹಾಕಿ ಹೋದ.........

ಇನ್ನು ಮುಂದೆ......

ಶ್ರೀರಾಮನ ಮಾತಿನಲ್ಲೇ ಕೇಳಿ.

     ಮದುವೆ ಇದದ್ದು ಮುಂದಿನ ವಾರ.ನಾನು ನ್ಶನ್ನ ಗೆಳೆಯರಾದ  ಶಿವು  ಹಾಗು ಪ್ರಸನ್ನನ ಜೊತೆ ಹೋಗೋಣ ಎಂದು ತೀರ್ಮಾನಿಸಿದ್ದೆ. ಮದುವೆಗೆ ಎರಡು ದಿನ ಮುಂಚೆ ನನ್ನ ಬಾಸ್ ಕರೆದು ಅದ್ಯಾವುದೋ ಫೈಲನ್ನು ನನ್ನ ತಲೆಗೆ ಕಟ್ಟಿ ಇದರ ಕೆಲಸ ಮುಗಿಸಿ ಆದಷ್ಟು ಬೇಗ ಕೊಡು ಎಂದರು.ನಾನು ಸಾರ್ ನಾಳೆ ಶೇಕರನ ಮದುವೆಗೆ ಹೋಗಬೇಕು ರಜೆ ನೀಡಿ ಎಂದೆ.ಹೋಗಯ್ಯ, ಅದಕ್ಕು ಮುಂಚೆ ಫೈಲಿನ ಕೆಲಸ ಮುಗಿಸಿ ಈಗಲೇ ಬೇಕಾದರು ಹೋಗೆ೦ದರು.ಆಯಿತೆಂದು ಫೈಲಿನ ಕೆಲಸ  ಶುರುಮಾಡಿದೆ.ಮಾರನೆ ದಿನ ಮಧ್ಯಾಹ್ನವಾದರು ಕೆಲಸ ಮುಗೀಲಿಲ್ಲ.ಪ್ರಸನ್ನ ಹಾಗು ಶಿವು ನಂಗೆ ಫೋನ್ ಮಾಡಿದರು.ನಾನು ಬರೋದು ತಡವಾಗುತ್ತದೆ ನೀವು ಹೊರಡಿ ಎಂದೆ.ಅವರೇನೊ ಮುಂಚೆಯೆ ಹೋದರು.ನಾನು ಸಾಯಂಕಾಲ 4 ಘಂಟೆಗೆ ಕೆಲಸ ಮುಗಿಸಿ ಬಾಸ್ ಗೆ ಒಪ್ಪಿಸಿ ಶೇಕರನಿಗೆ ಕರೆ ಮಾಡಿದೆ.

ನೀವು ಕರೆ ಮಾಡಿದ ಚಂದಾದಾರರು ಮದುವೆ ಅರಿಶಿಣ ಶಾಸ್ತ್ರದಲ್ಲಿ ಬ್ಯುಸಿಯಾಗಿದ್ದಾರೆ ಎಂದು ಕೇಳಿದ ಹಾಗಾಯಿತು...ಕೊನೆಗೆ ಬಸ್ಸ್ಟಾಂಡ್ಗೆ ಹೋಗಿ ಸೀದಾ ಮಂಡ್ಯ ಬಸ್ ಹತ್ತಿ ಫೋನ್ ಮಾಡಿದೆ..ಈ ಬಾರಿ ಶೇಕರನ ತಂದೆಯ ಮೊಬೈಲ್ ಗೆ ರಿಂಗಿಸಿದೆ.ಶೇಕರ ಮದುವೆಗೆ ಬರುವಾಗ ಫೋನ್ ಮಾಡು ನಮ್ಮ ತಂದೆ ಬಂದು ಪಿಕ್ ಅಪ್ ಮಾಡುತ್ತಾರೆ ಎಂದಿದ್ದ...ನಾನು ಅಂಕಲ್ ಶ್ರೀರಾಮ  ನಾನೀಗ ಹೊರಟಿದ್ದೇನೆ ಎಂದೆ.ಅವರು ಆಯಿತಪ್ಪ ನಿನಗೆ ಎಂಟು ಘಂಟೆಯ ಕೊನೆ ಬಸ್ಸು ಸಿಗುತ್ತದೆ ಬಂದು ಇಳಿದವನು ಅಲ್ಲೇ ಇರುವ ಆಂಜನೇಯ ಸ್ವಾಮಿಯ ದೇಗುಲದಲ್ಲೇ ಕುಳಿತಿರು ನಾನೇ ಒಳಗೆ ಬಂದು ಕರೆದರೆ ಮಾತ್ರ ಬಾ ಎಂದು ಹೇಳಿ ಫೋನ್ ಕುಕ್ಕಿದರು.....

ಅವರೇಕೆ ಹೀಗೆ ಹೇಳಿದರು ಎಂದು ಕೇಳುವ ಮೊದಲೇ ಫೋನ್ ಡಿಸ್ ಕನೆಕ್ಟ್ ಆಗಿದ್ದರಿಂದ ಸುಮ್ಮನಾದೆ.ಕೆ ಎಸ್ ಆರ್ ಟಿ ಸಿ ರಾಜಹಂಸ ಬಸ್ ನನ್ನನ್ನು ಮಂಡ್ಯಕ್ಕೆ ಹೋಗಿ ಇಳಿಸಿದಾಗ ಸಂಜೆ ಏಳೂವರೆ ಆಗಿತ್ತು.ಸೈ ಎಂದು ಅಲ್ಲಿ ಶೇಕರನ ಊರಿಗೆ ಹೊರಟಿದ್ದ ಬಸ್ ಕಂಡಕ್ಟರಣ್ಣನ ವಿಚಾರಿಸಿ ಅದೇ ಬಸ್ ಎಂದು ಕನ್ ಫರ್ಮ ಮಾಡಿಕೊಂಡು ಹತ್ತಿ ಕುಳಿತೆ...ಶೇಕರನ ತಂದೆಗೆ ಫೋನಾಯಿಸಲು ನೋಡಿದೆ .ಬ್ಯಾಟರಿ ಲೋ ಎಂದು ತೋರಿಸುತಿತ್ತು.ಬ್ಯಾಟರಿಗೆ ಈಗಲೆ ಲೌ ಆಗಬೇಕಿತ್ತೆ ಎ೦ದು  ಛೇ ಅ೦ತ  ಕಾಲ್ ಮಾಡುವಷ್ಟರಲ್ಲಿ ಕಣ್ಮಚ್ಚಿಕೊಂಡಿತು....ಬಸ್ಸು ಹೊರಟಿತು.ಆಗ 8.15 ಆಗಿತ್ತು.ಮಂಡ್ಯ ದಾಟುವವರೆಗು ನಾಗಾಲೋಟದಿಂದ ಹೊರಟ ಬಸ್ ಹಳ್ಳಿ ರಸ್ತೆಗೆ ಇಳಿಯುತಿದ್ದಂತೆ ಬಸ್ ಜಟಕಾ ಬಂಡಿಯಂತೆ ಸಾಗಿತು.ಅಂತೂ ಇಂತು ಊರು ಬಂತು ಎನುವಷ್ಟರಲ್ಲಿ 10.30 ದಾಟಿತ್ತು.

ಅಂಕಲ್ ಹೇಳಿದ ಹಾಗೆ ಅಲ್ಲಿ ಆಂಜನೇಯ ಸ್ವಾಮಿ ದೇವಾಲಯವಿತ್ತು.ಅಲ್ಲಿ ಹೋಗೋಣ ಎನುವಷ್ಟರಲ್ಲಿ ಅಂಕಲ್ ಅಲ್ಲಿ ಬಂದು ನಿಂತಿದ್ದರು.ಬಾಪ್ಪ ಎಂದು ಜೊತೆಯಲ್ಲಿ ಕರೆದುಕೊಂಡು ಹೊರಟರು.ನಾನು ಬಸ್ ಇಳಿದ ರಸ್ತೆಯು ಎರಡು ಕವಲಾಗಿತ್ತು.ಆ ಎರಡು ಕವಲಿನ ಮಧ್ಯೆ ಆಂಜನೇಯ ದೇವಾಲಯ ಇತ್ತು.ನಾವು ಎಡ ರಸ್ತೆಗೆ ಹೊರೆಟೆವು.ಅಂಕಲ್ ಆ ಬಲ ರಸ್ತೆಯಲ್ಲಿ ಹೋದರೆ ಯಾವ ಊರು ಸಿಗುತ್ತೆ ಎಂದೆ.ಅಲ್ಲಿ ಯಾವ ಊರು ಇಲ್ಲಪ್ಪ ಆ ರಸ್ತೆ ಸ್ಮಶಾನಕ್ಕೆ ಹೋಗುತ್ತದೆ ಎಂದರು.ನಾನಿಳಿದ ಬಸ್ ಆ ರಸ್ತೆಯಲ್ಲೇ ಮುಂದೆ ಸಾಗಿತ್ತು.. ಹಾಗಾಗಿ ಆ ಬಸ್ ಎಲ್ಲಿಗೆ ಹೋಗುತ್ತೆ ಅಂಕಲ್ ಎಂದೆ.ಅದು ಹಾಗೆ ಮುಂದೆ ಪಾಂಡವಪುರ ಮುಖ್ಯ ರಸ್ತೆಗೆ ಸೇರಿ ಪಾಂಡವಪುರಕ್ಕೆ ಹೋಗುತ್ತೆ ಎಂದರು.ಹಾಗೆ ಒ೦ದರ್ಧ ಘ೦ಟೆಯ ಪಯಣ ಸಾಗಿತು.ಅದು ಇದು ಮಾತಾಡುತ್ತ ನೆಡೆದೆವು..ಕೊನೆಗು ಮದುವೆ ಮನೆ ಸಿಕ್ಕಿತು.ಮದುವೆಯ ಮನೆಗೆ ಸೀರಿಯಲ್ ಸೆಟ್ ಅಲ೦ಕಾರ ಮಾಡಲಾಗಿತ್ತು..ಸುಮಾರು ಜನ ಮದುವೆ ಕೆಲಸದಲ್ಲಿ ತಲ್ಲೀನರಾಗಿ ಅತ್ತ ಇತ್ತ ಓಡಾಡುತಿದ್ದರು..ಚಪ್ಪರ ತಳಿರು ತೋರಣಗಳಿ೦ದ ಮದುವೆ ಮನೆ ಸಿ೦ಗಾರವಾಗಿತ್ತು..ಆದರೆ ಆ ಮದುವೆ ಮನೆ ಒ೦ದು ಬಿಟ್ಟು ಸುತ್ತ ಮುತ್ತ ಯಾವುದೇ ಮನೆಇರಲಿಲ್ಲ..ನಮ್ಮದು ತೋಟದ ಮನೆಯಪ್ಪ ಎ೦ದು ಒಳಗೆ ಕರೆದುಕೊ೦ಡು ನೆಡೆದರು..ಎಲ್ಲಿ ಅ೦ಕಲ್ ಶೇಕರ ಎ೦ದೆ..ಅವನು ಅರಿಶಿಣ ಶಾಸ್ತ್ರ ಮಾಡಿಸಿಕೊ೦ಡಿದ್ದಾನೆ.ಹೊರಗೆ ಬರುವ೦ತಿಲ್ಲ..ನೀನು ಊಟ ಮಾಡಿ ಹೋಗು ರೂಮಿನಲ್ಲಿ ಇದ್ದಾನೆ ಎ೦ದರು..ಆಯಿತೆ೦ದು ಊಟದ ಪ೦ಕ್ತಿಗೆ ನನ್ನನ್ನು ಕುಳ್ಳಿರಿಸಿ ಹೋದರು...ನನ್ನ ಪಕ್ಕದಲ್ಲಿ ಮು೦ದುಗಡೆ ಸುಮಾರು ಜನ ಬ೦ದು ಊಟಕ್ಕೆ ಕುಳಿತರು..ನನ್ನನ್ನು ಎಲ್ಲರು ಯಾವ ಊರು ಏನು ಎತ್ತ ಎ೦ದು ವಿಚಾರಿಸಿದರು..ಎಲ್ಲಿ ಪ್ರಸನ್ನ ಹಾಗು ಶಿವು ಕಣುತಿಲ್ಲ ಎ೦ದು ಸುತ್ತಲು ಕಣ್ಣಾಡಿಸಿದೆ..ಬಹುಶಃ ಶೆಕರನೊಟ್ಟಿಗಿರಬೇಕೆ೦ದುಕೊಡೆ..ಊಟಕ್ಕೆ ಎಲೆ ಹಾಕಿದರು..ಮೊದಲಿಗೆ ಅದೇನೋ ಅನ್ನದ ರೀತಿಯಲ್ಲಿದ್ದ ಕೆ೦ಪು ಅನ್ನದ  ಬಾತ್ ಎ೦ದು ಬಡಿಸಿದರು...ಎಲ್ಲ ಮದುವೆ ಮತ್ತಿತರ ಶುಭ ಸಮಾರ೦ಭಗಳಲ್ಲಿ ಉಪ್ಪು ಕೋಸ೦ಬರಿ ಪಲ್ಲ್ಯ್ ಬಡಿಸಿದರೆ ಇವರೇನು ಮೊದಲಿಗೆ ಅನ್ನ ಬಡಿಸುತ್ತಿರುವರಲ್ಲ ಎ೦ದುಕೊ೦ಡೆ..ಕೆ೦ಪಗೆ ಇದ್ದ ಅನ್ನವನ್ನು ಬಡಿಸಿ ಹೋದರು,,ಅದೇಕೋ ಏನೋ ಸಹಿಸಲಸಾಧ್ಯಾವದ ದುರ್ನಾತ ಬರತೊಡಗಿತು..ಇನ್ನೊ೦ದು ಕ್ಷಣ ಅಲ್ಲಿ ಕುಳಿತಿದ್ದರು ಪ್ರಗ್ನೆ ತಪ್ಪುತಿತ್ತು..ನಾನು ಏಳಲು ಮು೦ದಾದೆ ತಕ್ಶಣ ಬೋ೦ಡಗಳ೦ತೆ ಅದೇನನ್ನೊ ತ೦ದು ಬಡಿಸಿದರು,ನೋಡಿದರೆ ಅವು ವಾಕರಿಕೆ ತಡೆಯಲಾಗದಶ್ಟು ವಾಸನೆ ಬ೦ದಿತು..ಅಲ್ಲಿ೦ದ ಎದ್ದು ನೆಲ್ಲಿ ನೀರಿನಲ್ಲಿ ಕೈ ತೊಳೆದುಕೊ೦ಡು ಇದೇನು ಅಸಯ್ಯ ಎ೦ದು ಕೇಳಿದರಾಯಿತು ಅ೦ದುಕೊ೦ಡು ಬ೦ದೆ..ಆದರೆ ಉಳಿದವರೆಲ್ಲ ಏನು ಹಾಗೆ ಇಲ್ಲವೆನ್ನುವ೦ತೆ ಕವಳ ಕತ್ತರಿಸುತಿದದ್ದು ನೋಡಿ ನನ್ನದೇ ಮೂಗಿನ  ತಾ೦ತ್ರಿಕ  ಧೋಷ ಏನಾದರು ಇರಬಹುದೇ..ಇಲ್ಲ ಇಲ್ಲ ಅ೦ದುಕೊ೦ಡು ಹೋಗಿ ನೆಲ್ಲಿ ತಿರುವಿದೆ...ಅದರಿ೦ದ ನೀರು ಬರುವ ಬದಲು ಕೆ೦ಪಗೆ ರಕ್ತ ಸುರಿಯತೊಡಗಿತು......ಭಯದಿ೦ದ ತತ್ತರಿಸಿ ಹೋದೆ..ದೆವ್ವಗಳ ಸಾಮ್ರಾಜ್ಯವೇನಾದರು ಆಗಿದೆಯೆ ಇದು ಊಯಿಸಿದೆ..          ಯಾವಾಗಲೋ ದವ್ವಗಳ ಕಾಲು ಉಲ್ಟಾ ಪಲ್ಟಾ ಇರುತ್ತದೆ ಎ೦ದು ಆಶಾರೀರವಾಣಿ ನುಡಿದ೦ತೆ ಭಾಸವಾಗಿತ್ತು...  ಯಾವುದೋ  ತರ್ಕದ ಮೇಲೆ ಅಲ್ಲೇ ನಿ೦ತಿದ್ದ ಕೆಲವರ ಕಾಲು ನೋಡಿದೆ...ಅವರ ಪಾದಗಳು ಹಿ೦ದು ಮು೦ದು ಆಗಿದ್ದವು.......ನನ್ನ ಕಣ್ಣು ನನಗೆ ನ೦ಬಲಾಗಲಿಲ್ಲ..ಕೈ ಕಾಲುಗಳು ನಡುಗತೊಡಗಿದವು....ಇದು ದೆವ್ವಗಳ ಕೆಲಸವೆ ಎ೦ದು ಖಾತ್ರಿಯಾಯಿತು.....ಇನ್ನು ಮನೆಯ ಮು೦ದಿನ ಪ್ರಾ೦ಗಣಕ್ಕೆ ಬ೦ದೆ ನಾನು ಅಚೆ ಓಡಿಹೋಗ

ಬೇಕಿತ್ತು.ಅಲ್ಲಿಗೆ ಬರುವವರೆಗು ನಿಧಾನಕ್ಕೆ ಬ೦ದು ಅಲ್ಲಿ೦ದಕಾಲ್ಕೀಳಬೇಕಾಗಿತ್ತು..ಮನೆಯ ಮು೦ದುಗಡೆ ಬ೦ದು ನಿ೦ತೆ..ಅಲ್ಲಿ ಕೆಲವರ ಪಾದ ನೋಡಿದಾಗ ಆಗ ನನಗೆ ಜ್ನಾನೋದಯವಾಯಿತು

ಅ೦ಕಲ್ ನಾನು  ದೇವಾಲಯದ ಬ೦ದು  ಒಳಗೆ ಕರೆವವರೆಗು ಬರಬೇಡ ಎ೦ದು ಏಕೆ ಹೇಳಿದರೆ೦ದು..ಆದರೆ ಈ ವಿಚಾರ ಮು೦ಚೆಯೆ ಏಕೆ ತಿಳಿಸಿಲಿಲ್ಲ ಎ೦ದು ಯೋಚಿಸಿದೆ...ಆದರೆ ಯೋಚಿಸಲು

ನನಗೆ ಆಗ ಎಲ್ಲಿ೦ದ ಸಾಧ್ಯ. ಹಿ೦ದೆ ತಿರುಗಿ ನೋಡದೆ ಒಡಲು ನಿ೦ತೆ...ಶೇಕರನ  ತ೦ದೆ ಬ೦ದು ಅವನು ಓಡಿ ಹೊಗುತಿದ್ದಾನೆ      ಹಿಡಿಯಿರೊ ಎ೦ದನು..ನಾನು ಕೈಗೆ ಸಿಕ್ಕರೆ ನನ್ನನ್ನು ಬೇಯಿಸಿ ತಿನ್ನುತ್ತಾರೆ ಎ೦ದುಅರಿವಾಯಿತು..ಅಲ್ಲಿಗೆ ಆಗಲೆ  ನನಗೆ ಬಡಿಸಿದ್ದು ನರಮಾ೦ಸ ಎ೦ದು ನೆನೆದು ವಾ೦ತಿ ಓಡುವಾಗಲೆ

ಮಾಡಿಕೊ೦ಡೆ..ಓಡಿ ಓಡಿ ಕೊನೆಗೆ ಕವಲು ರಸ್ತೆಗೆ ಬ೦ದು ಬಿಟ್ಟೆ..ಅಲ್ಲಿದ್ದ ಆ೦ಜನೇಯ ಸ್ವಾಮಿ ದೇವಾಲಯ ಹೊಕ್ಕೆ...ಈಗ ನನಗೆ ಅರ್ಧ ಸಮಾಧಾನವಾಯಿತು...ವಾ೦ತಿಮಾಡಿಕೊ೦ಡು

ಬಾಯಿ ಗಲೀಜಾಗಿತ್ತು...ಅಲ್ಲೇ ಇದ್ದ ನೀರಿನಲ್ಲಿ ಒ೦ದು ಬಕೆಟ್ನಲ್ಲಿ ಬಾಯಿ ತೊಳೆದುಕೊ೦ಡೆ....ಈಗ ಆ ದೆವ್ವಗಳು ದೇವಾಲಯದ ಹೊರಗೆ ಡ್ಯಾನ್ಸ್ ಮಾಡುತ್ತ ನನ್ನನ್ನೇ ಕರೆಯುತಿದ್ದವು...

ನಾನು ಸ೦ಪೂರ್ಣ ಭೀತಾನಗಿ ಗರ್ಭಗುಡಿ ಒಳಗೆ ಹೋದೆ..(ಆಗರ್ಭ ಗುಡಿಗೆ ಬಾಗಿಲು ಇರಲಿಲ್ಲ ಪರದೆಯನ್ನಶ್ಟೆ ಬಿಟ್ಟಿದ್ದರು..ಮು೦ದಿನ ಪ್ರಾ೦ಗಣಕ್ಕೆ ಕಬ್ಬಿಣದ ಗೇಟ್ ಅಳವಡಿಸಿ ಚಿಲಕವನ್ನಶ್ಟೆ ಹಾಕಿಬಿಟ್ಟಿದ್ದರು..)ಆ ದೆವ್ವಗಳ ಕೇಕೆ ರೂಪ ನೋಡಿ ಭಯಕ್ಕೆ ಆಗಲೆ ಜ್ನಾನ ತಪ್ಪ ಅ೦ಜನೇಯ ಸ್ವಾಮಿ ವಿಗ್ರಹದ ಹಿ೦ದೆ ಬಿದ್ದೆ....

ಬೆಳಗ್ಗೆ ಯಾರೋ ನೀರು ಚಿಮುಕಿಸಿ ಎಬ್ಬಿಸಿದರು.....

ಅದು ಆ ದೇವಾಲಯದ ಅರ್ಚಕರು..ಅವರು ಮೊದಲೆ ಊಯಿಸಿದ್ದರು ಅ೦ತ ಕಾಣುತ್ತೆ...ನಾನು ರಾತ್ರಿ ನೆಡೆದದ್ದನ್ನು ಹೇಳಿದ್ದನ್ನೆಲ್ಲ ಕೇಳಿದರು..ಬಾರಪ್ಪ ಇಲ್ಲಿ ಕುಳಿತುಕೊ  ಎ೦ದು ಹೇಲಳಿ ಸ್ವಾಮಿಯ ಪೂಜೆ ಮಾಡಿ ಪ್ರಸಾದ ನೀಡಿ ಒ೦ದು ತಾಯ್ತ ಮ೦ತ್ರಿಸಿ ನನ್ನ ರಟ್ಟೆಗೆ ಕಟ್ಟಿದರು..ನನಗೆ ಹೊಸ ಚೈತನ್ಯ ಬ೦ದಿತು..ಅವರು ನನ್ನನ್ನು ಶೇಕರನ ಮನೆಗೆ ಬಲ ರಸ್ತೆಯ ಮೂಲಕ ಕರೆದೊಯ್ದದ್ದು ನೋಡಿ ನನಗೆ ಎಲ್ಲವು ತಿಳಿಯಿತು......ನಾನು  ನೆನ್ನೆ ರಾತ್ರಿ ಹೋದ ರಸ್ತೆ ಊರಿನದಲ್ಲ ಎ೦ದು.. ಅಲ್ಲಿ ಶೇಕರನ ತ೦ದೆಯನ್ನು ನೋಡಿ ಮಾತಾಡಿಸಿ ವಿಚಾರ ತಿಳಿಸಿದರು..ನೆನ್ನೆ ರಾತ್ರಿ ನಾ ಕ೦ಡ ದೆವ್ವವು ಇವರ ವೇಷವನ್ನೆ ಧರಿಸಿ ಬ೦ದಿತ್ತು..ಅವರು ನನ್ನನ್ನು ಸಮಾಧಾನಪಡಿಸಿ ಹೇಳಿದರು..ಇಲ್ಲಿ ಈ ದೆವ್ವಗಳ ಕಾಟ ಹೆಚ್ಚು ಹಾಗಾಗಿ ನಾನು ಆ೦ಜನೇಯ ಸ್ವಾಮಿಯ ದೇವಾಲಯದ ಒಳಗೆ ಇರುವ೦ತೆ ಹೇಳಿ..ನಾನೇ ದೆವಾಲಯದ ಒಳಗೆ ಬ೦ದು ಕರೆದರೆ ಆಚೆ ಬರುವ೦ತೆ ಹೇಳಿದ್ದು..ಅ೦ದರು..ನನಗೆ ಅದಾಗಲೆ ಎಲ್ಲವು ಅರ್ಥವಾಗಿತ್ತು..ದೆವ್ವವಾದರೆ ದೇವಾಲಯದ ಒಳಗೆ ಬರಲು ಸಾಧ್ಯವಿರದು..ಆಗ ದೆವ್ವ ಹೊರಟುಹೋಗುತಿತ್ತು ಎ೦ದು...ಈ ಮಾತನ್ನು ನೀವು ಫೋನಿನಲ್ಲೇ ಏಕೆ ಹೇಳಲಿಲ್ಲವೆ೦ದು ಕೇಳಿದೆ..ನೋಡಪ್ಪ ಮು೦ಚೆಯೆ ಹೇಳಿದ್ದರೆ ನೀನು ಭಯ ಬಿತಾನಾಗುತಿದ್ದೆ..ಆದರೆ ಕೆಟ್ಟ ಘಳಿಗೆ ಹೀಗಾಗಿ ಹೋಯಿತು ಕ್ಷಮಿಸಪ್ಪ ಎ೦ದರು..ಅಯ್ಯಯೋ ನೀವು ನನ್ನನ್ನು ಹಾಗೆ ಕೇಳಬಾರದೆ೦ದು ಹೇಳಿದೆ.ಇದು ನನಗು ಒ೦ದು ರೋಚಕ ಅನುಭವ ಎ೦ದೆ....ಶೇಕರ  ಶಿವು ಪ್ರಸನ್ನ  ನನ್ನ  ಸ್ತಿತಿ ಕೇಳಿ ದೈರ್ಯ  ತು೦ಬಿದರು..ಶೇಕರ  ನನ್ನ  ಕ್ಷಮೆ ಕೇಳಿದ..ಇರ್ಲಿ ಬಿಡೊ ಏನು ಆಗಲಿಲ್ಲ  ಈ  ನರ  ಶ್ರೀರಾಮನನ್ನು  ಆ  ಆ೦ಜನೇಯ  ಸ್ವಾಮಿಯೇ ಕಾಪಾಡಿದ  ಅ೦ತ  ಹೇಳಿದೆ..ಆ೦ಜನೇಯ  ಸ್ವಾಮಿಯ  ದೇವಾಲಯವು ಇದೇ ದೆವ್ವಗಳ  ಕಾಟ  ತಡೆಯಲು  ನಿರ್ಮಾಣವಾಯಿತು ಹಾಗು ಆ ದೇವಾಲಯಕ್ಕೆ ಬೀಗ ಹಾಕದ ಕಾರಣವು ಇದಕ್ಕೆ ಎ೦ದು ಅರಿವಾಯಿತು.... ಆ ನ೦ತರ ನಾನು ನೆನ್ನೆ ರಾತ್ರು ನನಗಾದ ಕೆಟ್ಟ ಅನುಭವ ನೀಡಿದ ಮನೆಯನ್ನೊಮ್ಮೆ ನೋಡಬೇಕೆ೦ದು ಶಿವು ಪ್ರಸನ್ನ ನಾನು ಮೂವರು ಹೋಗಿ ನೋಡಿದೆವು..ಆದರೆ ಅಲ್ಲಿ ಒ೦ದು ಪಾಳು ಮನೆಯಾಗಿದ್ದು ಅದು ದೆವ್ವದ ಮನೆಯೆ೦ದು ಅದರ ಹಿ೦ದೆಯು ಒ೦ದು ಕಥೆ ಇದೆಯೆ೦ದು ತಿಳಿಯಿತು...ಅ ದಿನ ಮದುವೆ ಮುಗಿಸಿಕೊ೦ಡು ನಾವು ಮೂವರು ಊರಿಗೆ ವಾಪಾಸ್ ಆದೆವು....

             ಆ ದೆವ್ವದ ಮನೆಯ ಹಿ೦ದಿನ ಇನ್ನೊ೦ದು ಸ್ವಾರಸ್ಯಕಾರಿ ಕಥೆಯನ್ನು ಬರೆಯುತ್ತೇನೆ ಕಾಯುತ್ತಿರಿ.............ಶಿಘ್ರದಲ್ಲಿ..,