ಸ್ವಾವಲಂಬನೆಯ ತತ್ವ
ಕವನ
ನಿನ್ನ ಕಾಲೇ ನಿನಗಾಧಾರ
ಊರುಗೋಲ ಆಧರಿಸೆ ಬದುಕು ಭಾರ
ನಿಂತಿದೆ ಕಲ್ಪವೃಕ್ಷ ತಲೆಯೆತ್ತಿ ಎತ್ತರ
ಅದರದೇ ಬೇರು, ಸ್ವಾವಲಂಬನೆಗೆಲ್ಲಿಯ ಬರ.
ಗಗನದಿ ಹಕ್ಕಿ ದೂರದಿ ಹಾರುತಿದೆ
ತನ್ನದೇ ಬಲದಿ ಮುಂದೆ ಸಾಗುತಿದೆ
ಶ್ರಮದಿ ಅರಸಿ ಕಾಳ ಕಂಡಿದೆ
ಕಾಣು ತನ್ನದೇ ಛಲದಿ ಬಾಳಿದೆ.
ಅವಲಂಬನೆ ಪ್ರಕೃತಿಯ ಗುಣವಲ್ಲ
ನದಿಗೆ ಹಾದಿಯ ಹಾಕಿಕೊಟ್ಟವರಿಲ್ಲ
ಹೂವಿಗೆ ಅರಳುವುದ ಕಲಿಸಿದವರಿಲ್ಲ
ನೆರಳ ಅಡಿಯಲ್ಲಿದ್ದರೆ ನಿನಗೆ ಸತ್ವವಿಲ್ಲ.
ಮನುಜ ಬೆವರ ಹರಿಸಿ ದುಡಿಯಬೇಕು
ಕೈಯ ಚಾಚದೇ ಜೀವಿಸುವಂತಿರಬೇಕು
ನಿನ್ನ ಕನಸ ನೀನೇ ಕಟ್ಟಬೇಕು
ಎದೆಗುಂದದೇ ಹೆಜ್ಜೆಗಳ ಇಡುತಲಿರಬೇಕು.
-ನಿರಂಜನ ಕೇಶವ ನಾಯಕ, ಶಿಕ್ಷಕ, ಮಂಗಳೂರು.
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್
