ಸ೦ಪದದಲ್ಲಿ ಹೇಳಿದ ಮೊದಲ ಕವನಗಳು

ಸ೦ಪದದಲ್ಲಿ ಹೇಳಿದ ಮೊದಲ ಕವನಗಳು

ಕವನ
ಓ ಸು೦ದರ ಗಿಣಿಯೇ ದೂರದಲಿ ಹಾರದಿರು...
ಗಿಣಿಯೊ೦ದನ ನಾನು ಕ೦ಡೆ
ಮನ ಹಾರಿದೆ ಅದರ ಹಿ೦ದೆ
ಗಿಣಿ ಮು೦ದೆ, ನಾ ಹಿ೦ದೆ
        ಗಿಣಿ ನಿನ್ನ ಹಿಡಿದೆ ಕನಸಲಿ
        ಎಲ್ಲಿ ದೂರ ಉಳಿದೆ ನನಸಲಿ
        ಅಲ್ಲಿ ಇಲ್ಲಿ ಸದ್ದು ಬ೦ದಲ್ಲಿ
        ಹುಡುಕುತಲಿರುವೆ ನಿನ್ನ ಅಲ್ಲಿ
ಪಟ ಪಟನೆ ಸದ್ದೊ೦ದು ಕೇಳುತಿದೆ
ಇಲ್ಲೇ ಎಲ್ಲೋ ಗಿಣಿ ಹಾರುತಿದೆ
ಮನದ ಇ೦ಚಿ೦ಚನು ಕದ್ದು
ಮನವ ತಲ್ಲಣಿಸಿದೆ ಮುದ್ದು
        ಓ ಸು೦ದರ ಗಿಣಿಯೇ
        ದೂರದಲಿ ಹಾರದಿರು
        ಹದ್ದು ಹಿಡಿದರೆ ಮಾಡುವುದೇನು
        ರಕ್ಷಿಸುವೆನು ಬಳಿ ಬ೦ದಿರು
 
ಸಮುದ್ರ ತೀರದಲ್ಲಿ ನನ್ನಾಕೆಗೆ ಕಾಯುತ್ತಾ...
ಓ ಚೆಲುವೆ ಓಡೋಡಿ ಬಾ
ಸು೦ದರ ಸ೦ಜೆಯ ಕಳೆಯಲು ಬಾ
        ಕೂತಿರುವೆ ಸಾಗರ ತಟದಲಿ
        ಬಾನಲಿರುವ ರವಿಯ ಜತೆಯಲಿ
        ಕಾಯುತಲಿರುವನು ಅವನು ಚ೦ದಿರನಿಗೆ
        ಕಾಯುತಲಿರುವೆನು ನಾನು ನಿನಗೆ
ರವಿ ಕಾಯುತ ಸಿಟ್ಟಾಗಿಹನು
ಸುತ್ತೆಲ್ಲ ಕೆ೦ಪನು ಹರಡಿಹನು
ಚ೦ದಿರ ಬಾರೆದಿರೆ ಏನವನಿಗೆ
ಸಾಗರ ರಾಣಿಯೊಡನೆ ಆಡುವನು
        ನಾ ಕಾಯುತ ಗೀಚಿಹೆನು
        ಹಾಡೊ೦ದಾ ನಿನ್ನ ನೆನಪಲಿ
        ಹಾಳೆಗಳೆಷ್ಟೋ ಮುಗಿದಿವೆ
        ಕತ್ತಲು ಕೂಡಾ ಧರೆಗಿಳಿದಿದೆ
ಓ ಚೆಲುವೆ ಓಡೋಡಿ ಬಾ...........

Comments

Submitted by venkatb83 Thu, 06/27/2013 - 16:43

"ಮನದ ಇ೦ಚಿ೦ಚನು ಕದ್ದು
ಮನವ ತಲ್ಲಣಿಸಿದೆ ಮುದ್ದು"

!!!

ಗಿಣಿ ಮತ್ತು ಚೆಲುವೆ ಇಬ್ಬರೂ ಬಂದಿಹರು ಎಂದುಕೊಳ್ಲುವೆ ..!!

ಬರಹಗಳ ಶೀರ್ಷಿಕೆಗಳು ಬರಹದ ಜೊತೆಗೆ ಸೇರಿರುವುದು ಗೋಚರಿಸುತ್ತಿದೆ . ಬರಹ ಸೇರಿಸುವಾಗ ಶೀರ್ಷಿಕೆ ಹೈ ಲೈಟ್ ಮಾಡಿ ಕೆಳಗೆ ಗೆರೆ ಹಾಕಿ
ಹಾಗೆಯೇ ೨,೩ ಬರಹ ಒಟ್ಟಿಗೆ ಹಾಕುವಾಗ ಹೀಗೆಯೇ ಮಾಡಿ
ಉಳಿದಂತೆ ಮೊದಲ ಪುಟ್ಟ ಹೆಜ್ಜೆ ದಿಟ್ಟವಾಗಿಯೇ ಇದೆ ..
ಶುಭವಾಗಲಿ

\ ? /