ಹಂಬಲ ಹಣತೆ (8) ತಾಯೆ
ಕವನ
ಅಡಿಯ ನಿಡಲು ನಾನು ಇಲ್ಲಿ
ಬಿಡದೆ ಎಡೆಯನಿತ್ತೆ ನೀನು -
ತಡೆದು ತಡೆದು ನಾನು ತೊದಳೆ,
ನುಡಿಯ ಕಲಿಸಿದೆ |
ಪಿಡಿದು ಕರವ ನೀನು ಎನಗೆ
ನಡೆಯ ತಳುಪಿದೆ || ||1||
ಅಂದು ನಾನು ಅಳಲಿನೊಳಗೆ,
ಮುಂದುವರಿವ ಬಗೆಯ ತೊರೆಯೆ-
ನೊಂದ ಮನವ ನಲಿಸಿಬಿಟ್ಟೆ,
ಒಂದೆ ನೋಟದಿ |
ಮುಂದೆ ಪಥವ ತೋರಿದೆನೆಗೆ
ಒಂದೆ ನಿಮಿಷದಿ || ||2||
ಎಂದು ಎನ್ನ ತೊಡಕ ಬಿಡಿಸಿ,
ಬಂದು ಎನ್ನ ಪೊರೆವ ಮಾತೆ,
ಇಂದು ಏಕೆ ಸುಮ್ಮನಿರುವೆ-
ಹರಿಸಿ ಕಳುಹುನೀ |
ಕಂದನಾಗ ನುಗ್ಗಿ ನಡೆವ
ಹರುಷ ನೋಡುನೀ|| ||3||
Comments
ಉ: ಹಂಬಲ ಹಣತೆ (8) ತಾಯೆ
Nice poem