ಹಂಬಲ ಹಣತೆ (9) ಶಾಲಿ

ಹಂಬಲ ಹಣತೆ (9) ಶಾಲಿ

ಕವನ

ಎಲ್ಲ ಹುಡುಗಿಯರ ಮೀರಿಸಿದವಳು
ಚೆಲುವಿನೊಳೆನ್ನ ಶಾಲಿ
ಅವಳಂತೆ ನಾಡಿನೊಳು ಬೇರಿಲ್ಲ ಹುಡುಕಿದರೂ
ಅವಳಿಗಲ್ಲದೊಡೆ ಇಲ್ಲಿರದೆ ಹೋಗಿ
ಆಳಾಗಿ ಬೀಸುವೆನು ರಾಗಿ
 
ಬಳಿಸಾರೆ ಮುದ್ದಣಗಿ ಮೈಮರೆತು
ನಿಲ್ಲಿಸುವೆ ಕೆಲಸವನು
ಧಣಿ ಬಂದು ಕ್ರೂರ ಟರ್ಟರನಂತೆ
ಹೊಡೆಯುವನು ಹೆಚ್ಚಾಗಿ
ಹೊಡೆಯಲವ ಹೊಟ್ಟೆ ತುಂಬುವ ತನಕ
ಸಹಿಸುವೆನು ಶಾಲಿಗಾಗಿ!
 
ವಾರದಲಿ ಬರುವೆಲ್ಲ ದಿನಗಳಲಿ
ಒಂದೆನಗೆ ಅತಿ ಹಿತವು
ಇಂದು ಮಂದಗಳ ಮಧ್ಯದಿಂ ಬರುವ
ಆದಿತ್ಯವಾದಿನವು
ನಾನಂದು ತೇಜದುಢೆ ಧರಿಸುತಲಿ ನಡೆಯೆ
ಸೇರುವಳು ಶಾಲಿ!