ಹಂಬಲ
ಕವನ
ಇರುವುದನು ಬಿಟ್ಟು
ಇನ್ನಷ್ಟು ಬೇಕೆಂಬ ಹಂಬಲ
ತೊರೆದವರನು ಬಿಡದೇ
ಪಟ್ಟು ಸಡಿಲಿಸದೇ
ದುಂಬಾಲು ಬೀಳುವ ಹಂಬಲ.
ಏಕೋ ಹೀಗೆ ತಿಳಿಯದು
ಬೇಕೆಂಬ ತವಕ
ನಾನೆಂಬ ಮದಗಜ ಏರಿ
ಮುದನೀಡುವ ಸಂಬಂಧ ತೊರೆದು
ಗದ್ದಲದಿ ಗುದ್ದಾಡುವ ಹಂಬಲ.
ಮದ್ದಿಲ್ಲದ ರೋಗ
ರಾಗ ದ್ವೇಷದಿ ಸರಾಗ
ಸುದ್ದಿ ಮಾಡುತ
ಬುದ್ದಿ ಬಲಕೂ ಲದ್ದಿ ಹಾಕಿಸಿ
ಬದ್ಧತೆಯಿಲ್ಲದ ಹಂಬಲ.
ಸದ್ದಡಗಿಸುವ ಹುನ್ನಾರ
ಸದ್ಯದ ಜಗಕೆ
ಮದ್ಯದ ಅಮಲಲಿ
ಇದ್ದುದನು ಕಡೆಗಣಿಸಿ
ಶುದ್ಧತೆಯ ಬದಿಗಿರಿಸುವ ಹಂಬಲ.
ತರಾವರಿಯ ಮೋಹ ಗಾನಕೆ
ತಲೆದೂಗುವ ಸಾನಿಧ್ಯ
ಮಲೆ ಮಲೆ ಅಲೆದರೂ
ಬಿಡದ ಕರ್ಮ
ಕೊಂಡುಕೊಳ್ಳುವ ಆತುರದ ಹಂಬಲ.
-ರೇಷ್ಮಾ ಕಂದಕೂರ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್
