ಹಕ್ಕಿಗಳ ಹಿಕ್ಕೆಗಳಿಂದ ಶ್ವಾಸಕೋಶದ ಕಾಯಿಲೆ!
ಭಾರತೀಯ ನಗರವಾಸಿಗಳು—ಪಾರಿವಾಳದ ಹಿಕ್ಕೆಗಳಿಂದ ಮತ್ತು ಅವುಗಳ ಧವಸ-ಧಾನ್ಯಗಳ ಕಾರಣದಿಂದಾಗಿ ಶ್ವಾಸಕೋಶದ ಕಾಯಿಲೆಗಳ, ವಿಶೇಷವಾಗಿ "Bird Breeder’s Lung" ರೋಗದ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಬಾಂಬೆ ಹಾಸ್ಪಿಟಲ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ನಲ್ಲಿ ಉಸಿರಾಟದ ವೈದ್ಯರಾದ ಡಾ. ಸುಜೀತ್ ರಾಜನ್ ಅವರು ಈ ಕಾಯಿಲೆ ಉಸಿರಾಟದ ಸಮಸ್ಯೆಗಳನ್ನು ಉಂಟುಮಾಡುತ್ತವೆ ಎಂದು ಒತ್ತಿಹೇಳುತ್ತಾರೆ.
ಪಾರಿವಾಳಗಳು ಅತೀಯಾಗಿ ಇರುವ ಪ್ರದೇಶಗಳಿಂದ ದೂರ ಉಳಿಯುವುದರಿಂದ; ಮತ್ತು ಅಪಾಯವನ್ನು ತಗ್ಗಿಸಲು ಹಕ್ಕಿಯ ಬಲೆಗಳನ್ನು ಬಳಸುವುದು ಮುಂತಾದ ತಡೆಗಟ್ಟುವ ಕ್ರಮಗಳನ್ನು ಕೈಗೊಳ್ಳಲು ಅವರು ಸೂಚಿಸುತ್ತಾರೆ. ಭಾರತದಾದ್ಯಂತದ ನಗರಗಳಲ್ಲಿ ಪಾರಿವಾಳದ ಕಾಟವು Bird Breeder’s Lung ಸೇರಿದಂತೆ ವಿವಿಧ ಶ್ವಾಸಕೋಶದ ಕಾಯಿಲೆಗಳಲ್ಲಿ ಏರಿಕೆಗೆ ಕಾರಣವಾಗಿದೆ.
'Bird Breeder’s Lung' ಎಂದರೇನು? ಪಾರಿವಾಳಗಳು ಹೆಚ್ಚುತ್ತಿರುವ ಪ್ರಕರಣಗಳಿಗೆ ಹೇಗೆ ಕಾರಣವಾಗುತ್ತಿವೆ? Bird Breeder’s Lung ಅಥವಾ Hypersensitivity Pneumonitis (HP) ಭಾರತದಲ್ಲಿ ಶ್ವಾಸಕೋಶದ ವಿವಿಧ ಕಾಯಿಲೆಗಳ ರೂಪಕಗಳಲ್ಲಿ ಸಾಮಾನ್ಯ ರೂಪವಾಗಿದೆ. ಭಾರತೀಯ Bird Breeder’s Lung ಕಾಯಿಲೆಗಳ ನೋಂದಾವಣೆ ದಾಖಲೆಗಳ ಪ್ರಕಾರ 50%ರಷ್ಟು ಶ್ವಾಸಕೋಶದ ರೋಗಿಗಳು Bird Breeder’s Lung ಕಾಯಿಲೆಯಿಂದ ಬಳಲುತ್ತಿದ್ದಾರೆ; ಅದರ, ವಿಶಿಷ್ಟ ಲಕ್ಷಣಗಳೆಂದರೆ ಕೆಮ್ಮು ಮತ್ತು ಕೆಲಸ ಮಾಡುವಾಗ ಉಸಿರಾಟದ ತೊಂದರೆಗಳು ಆಗಿವೆ.
ಜನದಟ್ಟಣೆ, ನಿರ್ಮಾಣ ಕೆಲಸಗಳು, ಮತ್ತು ಮನೆಯ ಒದ್ದೆಯಾದ ಗೋಡೆಗಳನ್ನು ಹೊರತುಪಡಿಸಿದರೆ, ಮುಂಬೈಯಂತಹ ನಗರಗಳಲ್ಲಿ ಹಕ್ಕಿಗಳ ಹಿಕ್ಕೆಗಳು ಮತ್ತು ಅದರ ಆಹಾರವಾದ ಧವಸ-ಧಾನ್ಯಗಳು ಒಡ್ಡಿಕೊಳ್ಳುವುದರಿಂದ ಕಾಯಿಲೆಗಳು ಹೆಚ್ಚುತ್ತಿವೆ. ವರ್ಷಗಳ ಹಿಂದೆಯೇ, ಈ ಕಾಯಿಲೆಯನ್ನು ತಡೆಗಟ್ಟಲು ಚೌಪಾಟಿ (ಮುಂಬೈಯ ಪ್ರದೇಶ) ಬಳಿಯ ಪಾರಿವಾಳಗಳಿಗೆ ಧವಸ-ಧಾನ್ಯಗಳನ್ನು ಹಾಕುವ ಪ್ರದೇಶವನ್ನು ಮುಚ್ಚುವಂತೆ ಹೈಕೋರ್ಟ್ ಆದೇಶವನ್ನು ನೀಡಿತ್ತು. ಆದರೂ, ಅಲ್ಲಿ ಹಕ್ಕಿಗಳಿಗೆ ಧವಸ-ಧಾನ್ಯಗಳನ್ನು ನೀಡುವುದು ಮುಂದುವರಿದಿದೆ. ಅಲ್ಲಿನವರಿಗೆ ಅರಿವು ಮೂಡಿಸುವ ಅಗತ್ಯವಿದೆ ಎಂದು ವೈದ್ಯರು ಅಭಿಪ್ರಾಯ ಪಡುತ್ತಿದ್ದಾರೆ.
ಹಕ್ಕಿಗಳ ಹಿಕ್ಕೆಗಳು Bird Breeder’s Lung ಕಾಯಿಲೆಗೆ ಹೇಗೆ ಕಾರಣವಾಗುತ್ತವೆ?: Bird Breeder’s Lung ಎಂಬುದು ಅಲರ್ಜಿನ್ ಗಳನ್ನು ಉಸಿರಾಡುವುದರಿಂದ ಉಂಟಾಗುವ ರೋಗನಿರೋಧಕ ವ್ಯವಸ್ಥೆಯ ಅಸ್ವಸ್ಥತೆಯಾಗಿದೆ. ಹಕ್ಕಿಗಳ ಹಿಕ್ಕೆಗಳು, ಮತ್ತು ಹಿಕ್ಕೆಗಳ ಮೇಲಿನಿಂದ ಬೀಸುವ ಧೂಳು Bird Breeder’s Lungಗೆ ಕಾರಣವಾಗುವ ಸಾಮಾನ್ಯ ಅಲರ್ಜಿನ್ ಆಗಿದೆ. ಹಿಕ್ಕೆಗಳು Aspergillusನಂತಹ ಫಂಗಸ್ ಗಳನ್ನು ಹೊಂದಿರುತ್ತವೆ; ಇದು ಉಸಿರಾಡಿದಾಗ Histoplasmosisಗೆ ಕಾರಣವಾಗುತ್ತದೆ. ಇದು Bird Breeder’s Lungಗೆ ಕಾರಣವಾಗುವುದು.
ಹಿಕ್ಕೆಗಳು ನಮ್ಮ ದೇಹದಲ್ಲಿರುವ ರೋಗನಿರೋಧಕ ವ್ಯವಸ್ಥೆಯನ್ನು ಪ್ರಚೋದಿಸುತ್ತವೆ; ಇದು ಅಲ್ಪಾವಧಿಯ ಅಥವಾ ದೀರ್ಘಾವಧಿಯ ಉರಿಯೂತವನ್ನು ಉಂಟುಮಾಡುತ್ತದೆ, ಮತ್ತು Interstitium ಎಂದು ಕರೆಯಲ್ಪಡುವ ಶ್ವಾಸಕೋಶದ ಒಂದು ಭಾಗದಲ್ಲಿ ಆಮ್ಲಜನಕದ ಹರಿವಿನ ಮೇಲೆ ಗಾಢ ಪರಿಣಾಮ ಬೀರುತ್ತದೆ. ಆರು ವಾರಗಳಲ್ಲಿ ರೋಗನಿರ್ಣಯ ಮಾಡಿದರೆ, Bird Breeder’s Lung ಕಾಯಿಲೆಯನ್ನು ಗುಣಪಡಿಸಬಹುದಾಗಿದೆ. ಆದರೆ, ಹೆಚ್ಚಿನ ಸಂದರ್ಭಗಳಲ್ಲಿ ರೋಗಿಗಳು ಬಹಳ ತಡವಾಗಿ, ಅಂದರೆ ಶ್ವಾಸಕೋಶದ Fibrosis ಅನ್ನುಗುಣಪಡಿಸಲಾಗದ ಹಂತಕ್ಕೆ ತಲುಪಿದ ಬಳಿಕವೇ ವೈದ್ಯರನ್ನು ಸಂಪರ್ಕಿಸುತ್ತಾರೆ.
ಈ ರೋಗವನ್ನು ತಪ್ಪಿಸುವುದು ಹೇಗೆ?: ಹಕ್ಕಿಗಳಿಗೆ ಧವಸ-ಧಾನ್ಯವನ್ನು ನೀಡುವುದು ನಿಲ್ಲಿಸುವುದು ಉತ್ತಮ ಪರಿಹಾರವಾಗಿದೆ; ವಿಶೇಷವಾಗಿ, ನಿಮ್ಮ ಕುಟುಂಬದಲ್ಲಿ ಯಾರಾದರೂ Bird Breeder’s Lung ಕಾಯಿಲೆಯನ್ನು ಹೊಂದಿದ್ದರೆ! ಕಿಟಕಿಗಳ ಮೇಲೆ ಹಕ್ಕಿ ಬಲೆಗಳನ್ನು ಅಳವಡಿಸಿಕೊಳ್ಳುವುದು; ಮತ್ತು ಅತೀಯಾಗಿ ಪಾರಿವಾಳಗಳು ಇರುವ ಪ್ರದೇಶಗಳ ಬಳಿ ಸಮಯ ಕಳೆಯುವುದನ್ನು ಕಡಿಮೆ ಮಾಡಬೇಕು. ಪಕ್ಷಿಗಳ – ವಿಶೇಷವಾಗಿ ಗಿಳಿ ಮತ್ತು ಪಾರಿವಾಳಗಳ - ಬಳಿ ಸಮಯ ಕಳೆಯಬಾರದು.
(ಮಾಹಿತಿ ಮೂಲ :Times of India Editorial)
-ಶಿಕ್ರಾನ್ ಶರ್ಫುದ್ದೀನ್ ಎಂ., ಮಂಗಳೂರು