ಹಕ್ಕಿಯ ಸಂದೇಶ
ಕವನ
ಹಕ್ಕಿ ಹಾಡುತಿದೆ ಕೇಳಿದಿರಾ
ಹಕ್ಕಿ ಹಾಡುತಿದೆ ಕೇಳಿದಿರಾ
ಹೊಂಗೆ ಮರದ ಟೊಂಗೆಯ ಮೇಲೆ
ಮಾವು ಬೇವಿನ ಕೊಂಬೆಯ ಮೇಲೆ
ಚೈತ್ರ ಮಾಸದಲ್ಲಿ
ವಸಂತ ಮಾಸದಲ್ಲಿ
ಹಕ್ಕಿ ಹಾಡುತಿದೆ ಕೇಳಿದಿರಾ
ಚಿಗುರಿದ ಎಲೆಗಳ ಹಸುರಿನ ನಡುವೆ
ಅರಳಿದ ಹೂಗಳ ಕಂಪನು ಹೀರುತ
ಪ್ರಕೃತಿಯ ಮಡಿಲಲ್ಲಿ
ನಿಸರ್ಗದ ಒಡಲಲ್ಲಿ
ಹಕ್ಕಿ ಹಾಡುತಿದೆ ಕೇಳಿದಿರಾ
ರೆಕ್ಕೆಯ ಬಡಿಯುತ ಪ್ರೀತಿಯ ಹಾಡು
ಪುಕ್ಕವ ಬಿಚ್ಚುತ ಒಲವಿನ ಹಾಡು
ಸ್ವತಂತ್ರ್ಯದಲ್ಲಿ
ಹರುಷದಲ್ಲಿ
ಹಕ್ಕಿ ಹಾಡುತಿದೆ ಕೇಳಿದಿರಾ
ತಾಯ್ತನದ ಮಮತೆಯ ಸಾರುವ
ಪ್ರೀತಿ ಪ್ರೇಮದ ಸಂದೇಶವ ಹೇಳುವ
ಈ ಜಗಕೆ
ಈ ಜನಕೆ
ಹಕ್ಕಿ ಹಾಡುತಿದೆ ಕೇಳಿದಿರಾ
ತೇಲುತ ತೇಲುತ ಆಗಸದಲ್ಲಿ
ಹಾರುತಾ ಹಾರುತ ಸಾಲಿನಲ್ಲಿ ಹಾಡಿವೆ
ವಂದೇ ಮಾತರಂ
ಜೈ ಹಿಂದ್ ಜೈ ಕನ್ನಡಾಂಬೆ
ಹಕ್ಕಿ ಹಾಡುತಿದೆ ಕೇಳಿದಿರಾ
-ಎಸ್.ನಾಗರತ್ನ, ಚಿತ್ರದುರ್ಗ
ಚಿತ್ರ್