ಹಕ್ಕಿಯ ಹಾಡು-ಪಾಡು!

ಹಕ್ಕಿಯ ಹಾಡು-ಪಾಡು!

ಬರಹ

ಹಾರುತಿವೆ ಹಕ್ಕಿಗಳು ತೆರತೆರನಾಗಿ...
ಮುಸುಕಿನ ಬೆಳಗಲಿ ಸ್ವಚಂದದಿ ಹಾರುತಿವೆ..
ಹಾಡುತಿವೆ...
ಚಿಲಿಪಿಲಿ ಎಂದು ಗಾನವಗೈಯುತ....
ಬಣ್ಣ ಬಣ್ಣದ ರೆಕ್ಕೆಗಳ ಬಡಿಯುತ ಹಾರುತಿವೆ...
ಹಾಡುತಿವೆ...

ನಾದ ನಿನಾದವ ಸೂಸುವ
ಮನಕೆ ಮುದ ನೀಡುವ
ಹಕ್ಕಿರವ ಎಷ್ಟೊಂದು ಆನಂದ
ನೋಡುಗನಿಗೆ, ಕೇಳುಗನಿಗೆ ಪರಮಾನಂದ

ಒಂದೆಡೆ "ಬರ್ಡ್ ಫ್ಲೂ" ಬಂದಿದೆ... ಕೊಲ್ಲುತಿದೆ...
ಇನ್ನೊಂದೆಡೆ ವಾಹನಗಳ ಇಂಗಾಲದ ಹೊಗೆ...
ಮೂಗು ಮುಚ್ಚೇ ಹೋಗುವಷ್ಟು... ಕಣ್ಣೇ ಕಾಣದಷ್ಟು...
ಮತ್ತೊಂದೆಡೆ ಬಾಂಬು, ಮಾನವ ಬಾಂಬು,
"ಆರ್.ಡಿ.ಎಕ್ಸ್", "ಎ.ಕೆ.೪೭"...
ಡಮಾರ್, ಟಪ್ಪಾರ್, ಡಿಷ್ಯುಂ... ಡಿಷ್ಯುಂ...
ಸದ್ದೋ ಸದ್ದು ಕಿವಿ ಕಿತ್ತೇ ಹೋಗುವಷ್ಟು...

ಬದುಕುವುದೆಲ್ಲಿ..?
ಚಿಕ್ಕ-ಪುಟ್ಟ ಜೀವಿಗಳು..?
ಇವುಗಳ ಅವನತಿಯು ದೂರವಿಲ್ಲ...
ನಂತರ ನಾದವಿಲ್ಲ, ಮನಕೆ ಮುದವಿಲ್ಲ.

ಮುಂದೊಂದು ದಿನ.....

ಹಾರುತಿವೆ ಪ್ಲಾಸ್ಟಿಕ್ ಕವರುಗಳು
ಬಣ್ಣ ಬಣ್ಣದ ಕವರುಗಳು
ಗಲ್ಲಿ ಗಲ್ಲಿಯಲಿ... ಮನೆ ಮನೆಗಳ ಟೆರಸ್ಸಲಿ
ಗಾಳಿಗೆ, ಧೂಮ ಧಾಳಿಗೆ ಗಿರ ಗಿರ ತಿರುಗುತಿವೆ
ಎಲ್ಲೂ... ಎಲ್ಲೆಲ್ಲೂ

ಮಮ್ಮೀ, ಸೀ ಹಿಯರ್...
ಫ್ಲಯಿಂಗ್... ಟರ್ನಿಂಗ್... ಮೂವಿಂಗ್..
ಹಿಯರ್ ಅಂಡ್ ದೇರ್
ದೀಸ್ ಪ್ಲಾಸ್ಟಿಕ್ ಕವರ್ಸ್!
"ಓ ಕಲರ್ ಫುಲ್! ಹೌವ್ ನೈಸ್ ಇಟ್ ಈಸ್"
ಅಂದೀತು ಮುಂಬರುವ ನಿಮ್ಮ ಕಂದಮ್ಮಗಳು...!!!

ಸಂಕೇತ್ ಗುರುದತ್ತ, ನೇಗಲಾಲ