ಹಕ್ಕಿ ಇಂಚರ

ಹಕ್ಕಿ ಇಂಚರ

ಕವನ

ಮನೆ ಮಂದಿಯೆಲ್ಲ ಕೂಡಿ

ಮಕ್ಕಳೆಲ್ಲ ಕುಣಿದು ಹಾಡಿ

ಜೋಡೆತ್ತಿನ ಗಾಡಿ ಹೂಡಿ

ಹೊರಟೆವೆಲ್ಲ ಮೃಗಾಲಯಕೆ

 

ಪಂಜರದೊಳಗಿಹ ಹುಲಿಯಣ್ಣ

ಹಚ್ಚಿದಂತಿದೆ ಮೈಗೆ ಪಟ್ಟೆಪಟ್ಟೆ ಬಣ್ಣ

ಮೆರುಗಿತ್ತಿದೆ ಗಂಭೀರತೆ ಮುಖಭಾವಕೆ

ಭಯವಾಗುತಿದೆ ಅವನ ನೇರ ನೋಟಕೆ

 

ದೊಡ್ಡ ಬೋನಲಿಹುದು ಸಿಂಹವಂತೆ

ಕಾಡಲಿದ್ರೆ ಅವನು ರಾಜನಂತೆ

ಚೂರಿಗಿಂತ ಹರಿತ ಅವನ ಹಲ್ಲು

ಹಸಿದು ಕೂತರೂ ಅವ ತಿನ್ನಲಾರ ಹುಲ್ಲು

 

ಪುಟ್ಟ ಪುಟ್ಟ ಪಂಜರ

ಅದರಲ್ಲಿ ಹಕ್ಕಿ ಇಂಚರ

ಮೈನಾ ಮಾಡುತಾಳೆ ಬಹಳ ವೈಯ್ಯಾರ

ಉಲಿವ ಗಿಣಿಯ ಕೊಕ್ಕು ಎಂಥ ಸುಂದರ

 

ಸರಳ ಹಿಂದೆ ಆನೆ ಇದೆ

ರಾಶಿ ಕಬ್ಬು ಜಗಿಯುತಿದೆ

ಸೊಂಡಿಲೆತ್ತಿ ನಮ್ಮ ಹರಸಿದೆ

ಪ್ರಾಣಿಗಳ ಮನಸಿನಲ್ಲು ಪ್ರೀತಿ ತುಂಬಿದೆ.

 

-*ಶಾಂತಾ ಜೆ ಅಳದಂಗಡಿ*

 

ಚಿತ್ರ್